
ಈಜಿಪ್ಟ್: ಸಾವಿರಾರು ವರ್ಷಗಳ ಇತಿಹಾಸವಿರುವ ಗೋರಿಗಳು, ಸಮಾಧಿಗಳು ಈಜಿಪ್ಟ್ನಲ್ಲಿ ಸಾಮಾನ್ಯ. ಅಲ್ಲಿ ನಿರಂತರವಾಗಿ ಪುರಾತತ್ವ ಸಂಶೋಧಕರು ತಮ್ಮನ್ನು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಶತಮಾನಗಳ ಇತಿಹಾಸದ ರಹಸ್ಯಗಳನ್ನು ಭೂತಗನ್ನಡಿ ಹಾಕಿ, ಹುಡುಕಿ ತೆಗೆದು ಜಗತ್ತಿಗೆ ತೋರಿಸುತ್ತಾರೆ. ಆಗಾಗ ಏನಾದರೊಂದು ಹೊಸದನ್ನು ಜಗತ್ತಿಗೆ ಪರಿಚಯಿಸುವ ಉಮೇದಿ ಆ ಪುರಾತತ್ವ ಸಂಶೋಧಕರದ್ದು. ಇತ್ತೀಚೆಗೆ ಇಂತಹುದೇ ವಸ್ತುವನ್ನುಶೋಧ ಮಾಡಿ, ಅದರ ಮೇಲೆ ಬೆಳಕು ಚೆಲ್ಲಿದ್ದಾರೆ. ಇದರೊಂದಿಗೆ ಮಾನವರ ಬಗೆಗಿನ ಕುತೂಹಲಕಾರಿ ಸಂಗತಿಯೊಂದನ್ನು ಪರಿಚಯಿಸಿದ್ದಾರೆ. ಈಜಿಪ್ಟ್ನ ಟುಟಾನಖಮೆನ್ (Tutankhamun) ಬಳಿಯಿರುವ ಗೋರಿಯಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯದಾದ ಒಂದು ಜೊತೆ ಚಪ್ಪಲಿ ದೊರೆತಿದೆ.
ಇದನ್ನು ಚರ್ಮದಿಂದ ತಯಾರಿಸಲಾಗಿದ್ದು, ಚಿನ್ನ ಲೇಪಿತವಾಗಿದೆ! ಫಳಫಳ ಹೊಳೆಯುವ, ಟೆರ್ರಾಕೋಟದಿಂದ ಮಾಡಲಾದ ಚಪ್ಪಲಿಗಳು ಇವಾಗಿವೆ. ಇವುಗಳನ್ನು ಪ್ರಸ್ತುತ ಈಜಿಪ್ಟ್ನ ಮ್ಯೂಸಿಯಂನಲ್ಲಿ (Grand Egyptian Museum) ಸಂರಕ್ಷಿಸಿಡಲಾಗಿದೆ. ಇದು ಕ್ರಿಸ್ತಪೂರ್ವ 1341– 1323 BC ಕಾಲದ್ದು ಎಂದು ಗುರುತಿಸಲಾಗಿದೆ. ಈಜಿಪ್ಟ್ನ 18ನೆಯ ರಾಜಮನೆತನದ ಆಳ್ವಿಕೆಯ ಅಂತ್ಯ ಕಾಲದ ರಾಜ ಟುಟ್ (King Tut) ಕಾಲದ್ದು ಎಂದು ಪತ್ತೆಹಚ್ಚಲಾಗಿದೆ.

ಶತಶತಮಾನಗಳ ಹಿಂದಿನ ಈಜಿಪ್ಟ್ ರಾಜರುಗಳ ಗೋರಿಗಳು ಇರುವ ಕಣಿವೆಗಳಲ್ಲಿ ದೊರೆತ ಸಮಾಧಿಯಲ್ಲಿ ಈ ಚಪ್ಪಲಿಗಳು ಪತ್ತೆಯಾಗಿವೆ.
ಶತಶತಮಾನಗಳ ಹಿಂದಿನ ಈಜಿಪ್ಟ್ ರಾಜರುಗಳ ಗೋರಿಗಳು ಇರುವ ಕಣಿವೆಗಳಲ್ಲಿ ದೊರೆತ ಸಮಾಧಿಯೊಂದರಲ್ಲಿ ಈ ಚಪ್ಪಲಿಗಳು ಪತ್ತೆಯಾಗಿವೆ. ಸುಮಾರು 10 ವರ್ಷಗಳ ನಿಧಾನಗತಿಯ, ಅಪಾರ ಕಾಳಜಿಯ ಸಂಶೋಧನೆಯ ಫಲವಾಗಿ ಈ ಚಪ್ಪಲಿಗಳು ಇಂದಿನ ಜಗತ್ತಿಗೆ ಸಿಕ್ಕಿದೆ. ಈ ಗೋರಿಯಲ್ಲಿ ಇನ್ನೂ ಅನೇಕಾನೇಕ ಅಮೂಲ್ಯ ವಸ್ತುಗಳು ಪತ್ತೆಯಾಗಿವೆ. ಜೊತೆಗೆ ಅಂದಿನ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದಾದ ಗೋಡೆಬರಹಗಳು ಆ ಸಮಾಧಿಯ ಗೋಡೆಗಳ ಮೇಲೆ ಕೆತ್ತಿರುವುದು ಕಂಡುಬಂದಿದೆ. ಈ ಸಂರಕ್ಷಣಾ ಯೋಜನೆಯ ಉಸ್ತುವಾರಿ ಹೊತ್ತಿರುವ Getty Conservation Institute ಮೊದಲ ಬಾರಿಗೆ ಇವುಗಳನ್ನು ಸಾರ್ವಜನಿಕರಿಗೆ ತೆರೆದಿಟ್ಟಿದೆ.
A pair of sandals restored from the tomb of Tutankhamun (KV62). Made of leather, gold and faience. They are currently in the conservation laboratory of the Grand Egyptian Museum.#archaeohistories pic.twitter.com/3df7umviyF
— Archaeo – Histories (@archeohistories) October 23, 2021
(Stunning restoration: pair of sandals restored from tomb of Tutankhamun in Valley of Kings in egypt)
Published On - 8:44 am, Thu, 4 November 21