ToTo Award 2021; ಪತ್ರಕರ್ತೆ ಅಮೂಲ್ಯಾಳಿಗೆ ಒಂದು ಲಕ್ಷ ಮೊತ್ತದ ಟೊಟೊ ಪುರಸ್ಕಾರ

|

Updated on: Feb 10, 2021 | 10:33 AM

Creative writing: ಬೆಂಗಳೂರಿನ ಪತ್ರಕರ್ತೆ ಅಮೂಲ್ಯ ಬಿ. ಕನ್ನಡ ಮತ್ತು ಇಂಗ್ಲಿಷ್ ಎರಡೂ ವಿಭಾಗಗಳಲ್ಲಿ ಪುರಸ್ಕಾರ ಪಡೆದಿರುವ ಇವರು, ಹದಿನೇಳು ವರ್ಷಗಳ ಟೊಟೊ ಪುರಸ್ಕಾರದ ಪಯಣದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ToTo Award 2021; ಪತ್ರಕರ್ತೆ ಅಮೂಲ್ಯಾಳಿಗೆ ಒಂದು ಲಕ್ಷ ಮೊತ್ತದ ಟೊಟೊ ಪುರಸ್ಕಾರ
ಟೊಟೊ ಪುರಸ್ಕಾರ: 2021 ಪಡೆದ ಬೆಂಗಳೂರಿನ ಅಮೂಲ್ಯ ಬಿ.
Follow us on

ಬೆಂಗಳೂರು: ಪ್ರಸಕ್ತ ಸಾಲಿನ ಟೊಟೊ ಪುರಸ್ಕಾರಕ್ಕೆ ಪತ್ರಕರ್ತೆ ಅಮೂಲ್ಯ ಬಿ. ಭಾಜನರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ವಿಭಾಗಗಳಲ್ಲಿ ಪುರಸ್ಕಾರ ಪಡೆದಿರುವ ಇವರು, ಹದಿನೇಳು ವರ್ಷಗಳ ಟೊಟೊ ಪುರಸ್ಕಾರದ ಪಯಣದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಭಾನುವಾರ ನಡೆದ ಆನ್​ಲೈನ್​ ಸಮಾರಂಭದಲ್ಲಿ ವಿವಿಧ ಸೃಜನಶೀಲ ಕ್ಷೇತ್ರಗಳಲ್ಲಿ ಈ ಪುರಸ್ಕಾರಕ್ಕೆ ಆಯ್ಕೆಯಾದವರ ಹೆಸರುಗಳನ್ನು ಘೋಷಿಸಲಾಯಿತು; ಸಂಗೀತ ಕ್ಷೇತ್ರದಲ್ಲಿ ಜಮ್ಮುವಿನ ಸಾವಿ ಸಿಂಗ್; ರೂ 60,000, ಇಂಗ್ಲಿಷ್ ಸೃಜನಶೀಲ ಬರೆವಣಿಗೆಯಲ್ಲಿ ಬೆಂಗಳೂರಿನ ಅಮೂಲ್ಯ ಬಿ.; ರೂ 50,000 ಮತ್ತು ಮುಂಬೈನ ಕುಂಜನಾ ಪರಾಶರ; ರೂ 50,000, ಕನ್ನಡ ಸೃಜನಶೀಲ ಬರೆವಣಿಗೆಯಲ್ಲಿ ಮತ್ತೆ ಅಮೂಲ್ಯ ಬಿ; ರೂ. 50,000, ಫೋಟೋಗ್ರಫಿಯಲ್ಲಿ ಹೈದರಾಬಾದ್​ನ ಹರಿ ಸಾಯಿ ಶ್ರೀಕರ; ರೂ.50,000 ಮತ್ತು ಕೊಲ್ಕೊತ್ತಾದ ನೀಲಾರ್ಘ ಚಟರ್ಜೀ; ರೂ. 50,000, ಕಿರುಚಿತ್ರಕ್ಕಾಗಿ ಹರಿಯಾಣಾದ ಅಶ್ಮಿತಾ ಗುಹಾ ನಿಯೋಗಿ; ರೂ.50,000 ಮತ್ತು ನವದೆಹಲಿಯ ಮೇಘಾ ಆಚಾರ್ಯ.

ಬೆಂಗಳೂರಿನ ವೆಲ್ಲಾನಿ ದಂಪತಿಯು ತಮ್ಮ ಮಗನ ಸ್ಮರಣಾರ್ಥವಾಗಿ ಟೊಟೊ ಫಂಡ್ಸ್‌ ದಿ ಆರ್ಟ್ (TFA) ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. 19ನೇ ವಯಸ್ಸಿಗೆ ಮಗ ತೀರಿದ ಕಾರಣ ಯುವ ಪ್ರತಿಭೆಗಳಿಗೆಂದೇ ಈ ಪ್ರಶಸ್ತಿಯನ್ನು ಮೀಸಲಿರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕನ್ನಡಕ್ಕೂ ಇದನ್ನು ವಿಸ್ತರಿಸಿದ್ದಾರೆ.

‘ಟೊಟೊ ಅವಾರ್ಡ್ 2021’ ರ ಅಂತಿಮ ಸುತ್ತಿನಲ್ಲಿ ಅಮೂಲ್ಯಾ ಬಿ, ಸಂದೀಪ ಈಶಾನ್ಯ, ಸ್ನೇಹಜಯಾ ಕಾರಂತ

Published On - 10:15 am, Wed, 10 February 21