Sign In

By signing in or creating an account, you agree with Associated Broadcasting Company's Terms & Conditions and Privacy Policy.

Search Light: ನೋಡ್ತಿರು ನನ್ನ ಹೆಸರೂ ಗೂಗಲ್​ನಲ್ಲಿ ಬಂದೇ ಬರುತ್ತೆ!

Children ‘ಏಯ್ ನೋಡೋ ಇಲ್ಲಿ ನನ್ನ ಹೆಸರನ್ನ ಗೂಗಲ್​ನಲ್ಲಿ ಟೈಪ್ ಮಾಡಿದರೆ ನಾ ಬರೆದ ಆರ್ಟಿಕಲ್ ಹೇಗೆ ಪಟ್ ಅಂತ ಬರುತ್ತೆ!’ ಅಂತ ಆಗಾಗ ಸಿಹಿಯಾಗಿ ಕಾಡುವ ಅಕ್ಕನ ಬಗ್ಗೆ  ಶಿವಮೊಗ್ಗದ ಭರತವರ್ಷ ಕೆ. ಅಡಿದಂನಿಗೆ ಕೋಪ ಬರದಿದ್ದೀತೆ? ಆ ಕೋಪವನ್ನು ಅವ ಎಷ್ಟು ಸಾತ್ವಿಕವಾಗಿ ತೀರಿಸಿಕೊಂಡಿದ್ದಾನೆಂದರೆ... ಒಮ್ಮೆ ಓದಿಬಿಡಿ. 

Search Light: ನೋಡ್ತಿರು ನನ್ನ ಹೆಸರೂ ಗೂಗಲ್​ನಲ್ಲಿ ಬಂದೇ ಬರುತ್ತೆ!
ಶಿವಮೊಗ್ಗದ ವಿವೇಕಾನಂದ ಆಂಗ್ಲಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಭರತವರ್ಷ ಕೆ. ಅಡಿದಂ
Follow us
ಶ್ರೀದೇವಿ ಕಳಸದ
|

Updated on:Feb 09, 2021 | 3:52 PM

ನಿಮ್ಮ ಮಕ್ಕಳಿಗೂ ಹೀಗೆ ಸೃಜನಶೀಲವಾಗಿ ಕೋಪ ತೀರಿಸಿಕೊಳ್ಳುವ ‘ಸುಂದರವಾದ ಹಟ’ ಇದ್ದಲ್ಲಿ ಖಂಡಿತ ಅವರಿಗೆ ಬರೆಯಲು ಪ್ರೋತ್ಸಾಹಿಸಿ. ಇಲ್ಲಿ ಅವರವರ ಮನಸಿನ ಮಾತು, ಆಸಕ್ತಿ ವಿಷಯಗಳು, ಅನಿಸಿಕೆ, ಅಭಿಪ್ರಾಯಗಳು, ಪ್ರಶ್ನೆಗಳು, ಕಂಡಿದ್ದು, ನೋಡಿದ್ದು, ಕೇಳಿದ್ದು, ಓದಿದ್ದು, ಅಚ್ಚರಿ ಎನ್ನಿಸಿದ್ದು, ಬೇಸರವೆನ್ನಿಸಿದ್ದು, ನೋವಾಗಿದ್ದು, ಭಯವಾಗಿದ್ದು, ಖುಷಿಯಾಗಿದ್ದು ಹೀಗೆ ಏನನ್ನೂ ಬರೆದು ನಮಗೆ ಕಳಿಸಬಹುದು ಹಾಗೆಯೇ ಚಿತ್ರಿಸಿಯೂ. ಆರರಿಂದ ಹದಿನಾರರವರೆಗಿನ ಮಕ್ಕಳು ಇಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಅವರ ಪುಟ್ಟ ಪರಿಚಯವಿರಲಿ ಮತ್ತು ಮೂರು ನಾಲ್ಕು ಭಾವಚಿತ್ರಗಳೂ ಇರಲಿ. ಈ ಸರ್ಚ್​ ಲೈಟ್ ಹೊಸ ಅಂಕಣ ಮಕ್ಕಳಿಂದ ಮಕ್ಕಳಿಗಾಗಿ ಮತ್ತು ದೊಡ್ಡವರ ಓದಿಗಾಗಿಯೂ! ಇ-ಮೇಲ್: tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ನಾನು ಶಿವಮೊಗ್ಗದ ಸ್ವಾಮಿ ವಿವೇಕಾನಂದ ಆಂಗ್ಲ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದ್ತಾ ಇದೀನಿ. ಶಾಲೆಯಿರದ ಈ ವರ್ಷದಲ್ಲಿ ನನ್ನ ಗೆಳೆಯರನ್ನ ಹೇಗೆ ಭೇಟಿ ಮಾಡೋದು, ಏನು ಆಡೋದು, ಎಲ್ಲಿಗೆ ಹೋಗೋದು? ಅಂತೆಲ್ಲಾ ಬಹಳ ಬೇಸರವಾಗ್ತಾ ಇತ್ತು. ಇಂಥದ್ದರಲ್ಲಿ ನನ್ನ ಅಕ್ಕ ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದಿದ್ದನ್ನ ಆಗಾಗ ತನ್ನ ಹೆಸರನ್ನ ಗೂಗಲ್ ಸರ್ಚ್​ ಎಂಜಿನ್​ ಗೆ ಹಾಕಿ ತೋರಿಸ್ತಾ ಇರೋದು. ಜಾಮ್​ ಮೇಲೆ ಜೆಲ್ಲಿ ಇಟ್ಟಹಾಗೆ ತಾನೆ? ಆಕ್ಚುವಲಿ ನನಗೆ ಅಮ್ಮನೊಡನೆ ಕಥೆ ಓದೋದು ಅಂದರೆ ಬಹಳ ಇಷ್ಟ. ಆದರೆ ಕನ್ನಡ ಸ್ವಲ್ಪ ಕಷ್ಟ. ಆದರೂ ಈ ರಜೇಲಿ ಕನ್ನಡ ಪುಸ್ತಕಗಳನ್ನ ಓದೋದ್ ಕಲಿತೆ. ಅಷ್ಟೇ ಯಾಕೆ ಬ್ರಿಟಿಷ್ ಕೌನ್ಸಿಲ್ ತರಗತಿಗೆ ಸೇರಿ ಓದಿದ ಪುಸ್ತಕಗಳ ಬಗ್ಗೆ ಪುಟ್ಟಪುಟ್ಟದಾಗಿ ಬರೆಯೋದು ಹೇಗೆ ಅಂತಾನೂ ಕಲಿತೆ ಗೊತ್ತಾ? ಅದರ ಒಂದು ಚಿಕ್ಕ ಸ್ಯಾಂಪಲ್ ನಿಮಗಾಗಿ.

BHARATH

ನರಿಗಳಿಗೇಕೆ ಕೋಡಿಲ್ಲ ಕುವೆಂಪು ಅವರು ಬರೆದ ಈ ಪುಸ್ತಕವನ್ನು ಉದಯರವಿ ಪ್ರಕಾಶನದವರದು.  ಬರೀ 11 ಪುಟಗಳ ಪುಟ್ಟ ಪುಸ್ತಕ. ನನಗೆ ಸ್ಪರ್ಧೆಯೊಂದರಲ್ಲಿ ಸಿಕ್ಕಿದ್ದು. ನಾನು ನೋಡಿರುವ ತೀರ್ಥಹಳ್ಳಿಯ ಕಾಡಿನ ಕಥೆ. ಕಾಗಕ್ಕ ಗುಬ್ಬಕ್ಕ ಕಥೆ ನನಗೆ ಗೊತ್ತಿತ್ತು. ಇದು ಆ ಕಥೆಯನ್ನೇ ದೊಡ್ಡದಾಗಿ ಮಾಡಿದ ಹಾಗಿದೆ. ಕಥೆ ಓದಿದ ಮೇಲೆ, ನಾನು ಅಮ್ಮನಿಗೆ ಕೇಳುತ್ತಿದ್ದ `ನರಿಗಳಿಗ್ಯಾಕೆ ಕೋಡಿಲ್ಲ?’ ಎಂಬ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿದೆ. ನಮ್ಮ ಮನೆಗೂ ಸಕ್ಕರೆ ಬಾಗಿಲು, ಬೆಲ್ಲದ ಗೋಡೆ ಇದ್ದಿದ್ದರೆ ಅಂತ ಈಗಲೂ  ಆಸೆಯಾಗತ್ತೆ.

ಇಲಿಯ ವ್ಯಾಪಾರಿ ಎಸಿಕೆ – ಅಮರ ಚಿತ್ರಕಥಾ ಅಂದರೆ ನನಗೆ ತುಂಬಾ ಇಷ್ಟ. ಸುಬ್ಬರಾವ್ ಅಂಕಲ್ ಇದನ್ನು ಬರೆದಿದಾರೆ. ಭಾಷೆ ಯಾವುದಾದರೇನು ಚಿತ್ರಗಳನ್ನ ನೋಡ್ತಾ ಕಥೆ ಓದೋದು ಮಜಾ ಅಲ್ವಾ? ಒಂದು ಸತ್ತ ಇಲಿಯನ್ನ ಉಪಯೋಗಿಸಿ ಹೇಗೆ ದುಡ್ಡು ಪಡೆಯೋದು ಸಾಧ್ಯ ಅನ್ನೋದನ್ನ ತಿಳೀಬೇಕು ಅಂದ್ರೆ ಈ ಪುಸ್ತಕ ಓದಬೇಕು. ಒಟ್ಟು ಮೂರು ಕಥೆಗಳು ಇವೆ ಇದರಲ್ಲಿ. ನಾನು ಇದನ್ನು ತುಂಬಾ ಸಲ ಓದಿದೀನಿ.

Gulliver’s travels  ಜೋನಾಥನ್ ಸ್ವಿಫ್ಟ್ ಬರೆದ ಈ ಪುಸ್ಕವನ್ನು ಲೇಡಿಬರ್ಡ್ ಕ್ಲಾಸಿಕ್ಸ್ ಪ್ರಕಾಶನ ಪ್ರಕಟಿಸಿದೆ. ನನ್ನಮ್ಮ ನನಗೆ ಇಂಗ್ಲೀಷ್‍ನ ಸಾಕಷ್ಟು ಪುಸ್ತಕಗಳನ್ನ ಕೊಡಿಸಿದರೂ ನನಗೆ ಈ ಪುಸ್ತಕ ಒಂಥರಾ ಇಷ್ಟ. ಈ ಪುಸ್ತಕದಲ್ಲಿ ದೊಡ್ಡ ದೊಡ್ಡ ಚಿತ್ರಗಳಿದಾವೆ. ಗಲೀವರ್ ಎಂಬುವವನು ಮಾಡುವ ಸಾಹಸಗಳು ನನಗೆ ತುಂಬಾ ಮಜಾ ಅನ್ನಿಸ್ತಾವೆ. ಚಿಕ್ಕ-ದೊಡ್ಡ ಮನುಷ್ಯರು, ಕೆಲವರಿಗೆ ಗಲೀವರ್ ದೊಡ್ಡ ರಾಕ್ಷಸನಂತೆ, ಇನ್ನು ಕೆಲವರಿಗೆ ಅವನು ಒಂದು ಪುಟಾಣಿ ಗೊಂಬೆಯಂತೆ ಕಾಣುವುದು ಬಹಳಾ ನಗು ತರಿಸತ್ತೆ.

Matilda  Roald Dahe ಅಂಕಲ್ ನನ್ನ ಫೇವರಿಟ್ ಕಥೆಗಾರರು. ಮಟಿಲ್ಡಾ ಕೂಡ ಅವರೇ ಬರೆದಿದ್ದು. ಅವರ ಬಹಳ ಕಥೆಗಳನ್ನ ಓದಿದೀನಿ, ಸಿನೆಮಾನೂ ನೋಡಿದೀನಿ. ಆದರೆ ಒಂದು ವಿಷಯ ಗೊತ್ತಾ? ‘ಪುಸ್ತಕ ಓದಿದ ಮೇಲಷ್ಟೇ ಸಿನೆಮಾ ನೋಡಕ್ಕೆ ಬಿಡೋದು!’ ಅಮ್ಮ ಹೀಗೆ ಹೇಳಿದ್ದನ್ನ ಈಗಲೂ ಮಾಡ್ತಾನೇ ಬಂದಿದೀನಿ. ಮಟಿಲ್ಡಾ ನಾಲ್ಕು ವರ್ಷದ ಹುಡುಗಿ. ನನಗಿಂತ ಸಣ್ಣವಳು. ಆದರೆ ಅವಳು ಎಷ್ಟೆಲ್ಲಾ ಪುಸ್ತಕ ಓದ್ತಾಳೆ ಗೊತ್ತಾ? ಅವಳ ಶಾಲೆ ಅವಳ ಫ್ರೆಂಡ್ಸೂ ಮಿಸ್. ಹನಿ, ಟ್ರಂಚ್‍ಬುಲ್ ಎಲ್ರೂ ನನಗಿಷ್ಟ. ಮಟಿಲ್ಡಾಳ ತುಂಟಾಟಗಳಂದ್ರೆ ನನಗೆ ತುಂಬಾ ಇಷ್ಟ.

ಡೈರಿ ಆಫ್ ಎ ವಿಂಪಿ ಕಿಡ್ ಜೆಫ್ ಕಿನ್ನಿ ಈ ಪುಸ್ತಕವನ್ನ ಬರೆದಿದಾರೆ. ಒಬ್ಬನೇ ಕುಳಿತು ಈ ಡೈರಿ ಓದೋದಂದ್ರೆ ಬಹಳ ಖುಷಿ. ಗ್ರೆಗ್ ಹೆಫ್ಲಿ ನನ್ನ ಥರಾನೇ ಇದಾನಲ್ಲ ಅಂತ ಅನ್ನಿಸೋಕೆ ಶುರುವಾಗುತ್ತೆ. ಇದು ಅವ ಬರೆದ ಡೈರಿ. ನನ್ನ ಅಕ್ಕಯ್ಯನೊಡನೆ ನನಗೆ ಜಗಳವಾಗುವಂತೆ, ಗ್ರೆಗ್‍ಗೂ ಅವನ ಅಣ್ಣ ರಾಡ್ರಿಕ್ ಜೊತೆ ಜಗಳವಾಗ್ತಾ ಇರುತ್ತೆ. ಚಿಕ್ಕ ಚಿಕ್ಕ ಪ್ಯಾರಾಗಳಿರೋದರಿಂದ ಸುಲಭಕ್ಕೆ ಓದಬಹುದು ಹಾಗೇ ಓದ್ತಾ ಓದ್ತಾ ನಗಲೂಬಹುದು.  ಒಮ್ಮೊಮ್ಮೆ ಅಂತೂ ವಿಂಪೀ ಕಿಡ್ ನಾನೇನಾ ಅನ್ನಿಸಿಬಿಡುತ್ತೆ!

ಓದು ಮಗು ಓದು: ನನಗೆ Ruskin Bond ಆಟೋಗ್ರಾಫ್ ಸಿಕ್ಕಿದೆ!

Published On - 1:10 pm, Tue, 9 February 21

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ