Sign In

By signing in or creating an account, you agree with Associated Broadcasting Company's Terms & Conditions and Privacy Policy.

Search Light: ಏಯ್ ಕೊರೊನಾ ನಾ ಸುಮ್ಮನಿರೂದಿಲ್ಲ!

Art: ಹುಬ್ಬಳ್ಳಿಯ ಲಯನ್ಸ್​​ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ದೀಪ್ತಿ ಪಾಟೀಲ ಮೂರನೇ ವಯಸ್ಸಿನಿಂದಲೇ ಬಣ್ಣ-ಕುಂಚಗಳ ಒಡನಾಟ ಬೆಳೆಸಿಕೊಂಡವಳು. ಕೊರೊನಾ ಕಾಲದೊಳಗೆ ಅವಳ ಮನಸ್ಸು ಹೇಗೆಲ್ಲ ಯೋಚಿಸುತ್ತಿದೆ ಎನ್ನುವುದು ನೀವೇ ನೋಡಿ.

Search Light: ಏಯ್ ಕೊರೊನಾ ನಾ ಸುಮ್ಮನಿರೂದಿಲ್ಲ!
ಹುಬ್ಬಳ್ಳಿಯ ದೀಪ್ತಿ ಪಾಟೀಲ ತನ್ನ ಕಲಾಕೃತಿಯೊಂದಿಗೆ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:Feb 20, 2021 | 11:30 AM

ನಿಮ್ಮ ಮಕ್ಕಳಿಗೂ ಹೀಗೆ ಸೃಜನಶೀಲವಾಗಿ ಕೋಪ ತೀರಿಸಿಕೊಳ್ಳುವ ‘ಸುಂದರವಾದ ಹಟ’ ಇದ್ದಲ್ಲಿ ಖಂಡಿತ ಅವರಿಗೆ ಬರೆಯಲು ಪ್ರೋತ್ಸಾಹಿಸಿ. ಇಲ್ಲಿ ಅವರವರ ಮನಸಿನ ಮಾತು, ಆಸಕ್ತಿ ವಿಷಯಗಳು, ಅನಿಸಿಕೆ, ಅಭಿಪ್ರಾಯಗಳು, ಪ್ರಶ್ನೆಗಳು, ಕಂಡಿದ್ದು, ನೋಡಿದ್ದು, ಕೇಳಿದ್ದು, ಓದಿದ್ದು, ಅಚ್ಚರಿ ಎನ್ನಿಸಿದ್ದು, ಬೇಸರವೆನ್ನಿಸಿದ್ದು, ನೋವಾಗಿದ್ದು, ಭಯವಾಗಿದ್ದು, ಖುಷಿಯಾಗಿದ್ದು ಹೀಗೆ ಏನನ್ನೂ ಬರೆದು ನಮಗೆ ಕಳಿಸಬಹುದು ಹಾಗೆಯೇ ಚಿತ್ರಿಸಿಯೂ. ಆರರಿಂದ ಹದಿನಾರರವರೆಗಿನ ಮಕ್ಕಳು ಇಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಅವರ ಪುಟ್ಟ ಪರಿಚಯವಿರಲಿ ಮತ್ತು ಮೂರು ನಾಲ್ಕು ಭಾವಚಿತ್ರಗಳೂ ಇರಲಿ. ಈ ಸರ್ಚ್​ ಲೈಟ್ ಹೊಸ ಅಂಕಣ ಮಕ್ಕಳಿಂದ ಮಕ್ಕಳಿಗಾಗಿ ಮತ್ತು ದೊಡ್ಡವರ ಓದಿಗಾಗಿಯೂ! ಇ-ಮೇಲ್: tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಇಂದಿನ ಅಂಕಣದಲ್ಲಿ ಹುಬ್ಬಳ್ಳಿಯ ದೀಪ್ತಿ ಪಾಟೀಲಳ ಬಣ್ಣ-ಭಾವ ಪ್ರಪಂಚ.

Search Light 1

ಈ ಕೊರೊನಾದಿಂದಾಗಿ ನನಗೆ ಕೋಪ ಬರೋದಕ್ಕೆ ಶುರುವಾಯ್ತು. ಆಗ ಪ್ಯಾಲೆಟ್​, ಬಣ್ಣ ತಗೊಂಡೇ ಬಿಟ್ಟೆ!

ಮನೆಯಲ್ಲಿದ್ದೂ ಇದ್ದೂ ಕೊನೆಗೆ ಮನೆಯ ಒಳಹೊರಗಿನ ಪರಿಸರವನ್ನೇ ಕ್ಯಾನ್ವಾಸಿನ ಮೇಲೆ ಹರಡಿದರೆ ಹೇಗೆ ಅನ್ನಿಸಿತು.

ಅವತ್ತೊಂದಿನ ಕೆರೆಯ ದಡದಲ್ಲಿ…

Search Light

ಇಡೀ ಜಗತ್ತಿಗೆ ಮಾಸ್ಕ್ ಹಾಕಿದರೆ ಹೇಗೆ?

Search Light

ಚಂದಿರನೇತಕೆ ಓಡುವನಮ್ಮ

Search Light

ಈ ಚಿತ್ರ ನೋಡುತ್ತಿದ್ದಂತೆ ನಿಮಗೇನೆಲ್ಲ ಯೋಚನೆಗಳು ಹೊಳೆದಿರಬಹುದು?

ಇದನ್ನೂ ಓದಿ: Search Light: ನೋಡ್ತಿರು ನನ್ನ ಹೆಸರೂ ಗೂಗಲ್​ನಲ್ಲಿ ಬಂದೇ ಬರುತ್ತೆ!

Published On - 1:09 pm, Wed, 10 February 21