ಬೆಂಗಳೂರು: ಕೊರೊನಾ ಬಂದಮೇಲೆ ಮದುವೆ ಸಮಾರಂಭಗಳನ್ನು ಏರ್ಪಡಿಸುವುದೇ ಕಷ್ಟ ಎಂಬಂತಾಗಿದೆ. ಇಂತಿಷ್ಟೇ ಜನ ಸೇರಬೇಕು, ನಿಯಮ ಪಾಲಿಸಬೇಕು ಎಂಬೆಲ್ಲಾ ಕಟ್ಟುಪಾಡುಗಳಿಗಿಂತ ಸರಳ ಮದುವೆಗಳೇ ಉತ್ತಮ ಎಂದು ಹಲವರು ಸಿಂಪಲ್ ಆಗಿ ಮದುವೆ ಆಗಿದ್ದಾರೆ.
ಆದರೆ, ಈಗ ಬೆಂಗಳೂರಿನಲ್ಲಿ ಬಲು ಅಪರೂಪಕ್ಕೊಂದು ಅದ್ಧೂರಿ ಮದುವೆ ನಡೆದಿದೆ. ತುಮಕೂರಿನ ಹುಡುಗ ನಿರೂಪ್ ಹಾಗೂ ಬೆಂಗಳೂರಿನ ಹುಡುಗಿ ಐಶ್ವರ್ಯಾ ಈ ವಿಶೇಷ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ತಲಘಟ್ಟಪುರದ ಬಿಆರ್ಎಸ್ ಗ್ರಾಂಡ್ಯುರ್ನಲ್ಲಿ ನಡೆದ ಈ ಮದುವೆಯ ವೈಭವವನ್ನು ನೋಡಿದರೆ ಯಾರಾದರೂ ಹುಬ್ಬೇರಿಸಲೇಬೇಕು.
ತುಮಕೂರಿನಿಂದ ಹೆಲಿಕಾಪ್ಟರ್ನಲ್ಲಿ ಬಂದ ನಿರೂಪ್ ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದು, ರೈಸ್ ಮಿಲ್ ಸಹ ಹೊಂದಿದ್ದಾರೆ. ಬಲರಾಮ್ ಶೆಟ್ಟಿ ಹಾಗೂ ರಮಾದೇವಿ ದಂಪತಿ ಪುತ್ರನಾದ ಇವರು ಬೆಂಗಳೂರಿನ ಕಿಶೋರ್ ಮತ್ತು ಮಾಧವಿ ಅವರ ಪುತ್ರಿ ಐಶ್ವರ್ಯಾರನ್ನು ವರಿಸಿದ್ದಾರೆ. ಚಾಪರ್ ಮೂಲಕ ನಿರೂಪ್ ಕಲ್ಯಾಣ ಮಂಟಪಕ್ಕೆ ಬಂದಿರುವುದು ಈಗ ಸೋಷೊಯಲ್ ಮೀಡಿಯಾದಲ್ಲಿ ಫುಲ್ ಸದ್ದು ಮಾಡುತ್ತಿದೆ.