ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಬಾರದಂತೆ. ಇದು ನಿಜನಾ..? ಕೆಲವರು ಇಲ್ಲಾಂತಾರೆ. ಇನ್ನು ಕೆಲವರ ಪ್ರಕಾರ ಒಮ್ಮೆ ಬೇಯಿಸಿದ ಅನ್ನವನ್ನು ಮತ್ತು ಬೇಯಿಸಿದ್ರೆ ಅದರಲ್ಲಿ ಬೆಸಿಲಸ್ ಸೆರೆಯೂಸ್ ಹೆಸರಿನ ಬ್ಯಾಕ್ಟೀರಿಯಾ ಕ್ರಿಯೇಟ್ ಆಗುತ್ತಂತೆ. ಇದು ಫುಡ್ ಪಾಯ್ಸನ್ನಿಗೂ ಕಾರಣವಾಗಬಹುದು ಅಂತಾರೆ ತಜ್ಞರು. ಇದರಿಂದ ವಾಂತಿ ಬೇಧಿ ಮಾತ್ರವ್ಲಲಾ ಇನ್ನಿತರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಉಳಿದ ಅನ್ನವನ್ನು ಸಂರಕ್ಷಿಸಿ ಇಡುವಲ್ಲಿ ನೀವು ತಪ್ಪು ಕ್ರಮ ಅನುಪಸರಿಸಿದ್ರೆ, ಖಂಡಿತಾ ಎಡವಟ್ಟು ಎದುರಿಸಬೇಕಾಗುತ್ತೆ.
ಅನ್ನ ತಯಾರಿ ಮತ್ತು ಸಂರಕ್ಷಣೆ ಹೇಗೆ..?
ಅನ್ನ ಎಷ್ಟು ದಿನ ಫ್ರಿಜ್ನಲ್ಲಿ ಇಡಬಹುದು:
ದಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ ಅನ್ನ ಅಥವಾ ಯಾವುದೇ ಆಹಾರವಸ್ತುವನ್ನು 3 ರಿಂದ 4 ದಿನದವರೆಗೆ ಇಡಬಹುದು. ಆ ಬಳಿಕ ಇಟ್ರೆ ಅದು ವಿಷವಾಗುತ್ತೆ. ಆದ್ರೆ, ಫ್ರೀಝರ್ನಲ್ಲಿ ಇಟ್ಟ ಅನ್ನ ಸೇರಿದಂತೆ ಯಾವುದೇ ಆಹಾರವಸ್ತುಗಳನ್ನು 4 ತಿಂಗಳವರೆಗೆ ಬಳಸಬಹುದು. ಉಳಿದ ಆಹಾರವನ್ನು ಸುರಕ್ಷಿತ ತಾಪಮಾನದಲ್ಲಿ ಸಂಗ್ರಹಿಸೋದು ಜಾಣತನ. ಅದ್ರಂತೆ ರೂಮ್ ಟೆಂಪರೇಚರ್ 90 ಡಿಗ್ರಿ ಸೆಲ್ಸಿಯಸ್ ಇದ್ರೆ, ಇದರಲ್ಲಿ ಸಂಗ್ರಹಿತ ಆಹಾರದಲ್ಲಿ ಬ್ಯಾಕ್ಟೀರಿಯಾ ಬೆಳೆಯಬಹುದು. ಸಾಮಾನ್ಯವಾಗಿ 40 ಡಿಗ್ರಿ ಅಥವಾ 140 ಡಿಗ್ರಿ ಫ್ಯಾರನ್ ಹೀಟ್ ತಾಪಮಾನದಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತೆ. ಹಾಗಾಗಿ, 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನೀವು ಆಹಾರ ಸಂಗ್ರಹಿಸಿ. ಒಂದು
ವೇಳೆ ಉಳಿದ ಆಹಾರವನ್ನು 2 ಗಂಟೆ ಕಾಲ ಸಂಗ್ರಹಿಸಿಡಲಾಗಿದೆ ಎಂದಾದರೆ, ಆ ಬಳಿಕ ಅನ್ನು ಸಂಗ್ರಹಿಸಬೇಕಿಲ್ಲ. ದಯವಿಟ್ಟು ಎಸೆಯಿರಿ.
ಆಹಾರ ಮತ್ತೆ ಬಿಸಿ ಮಾಡುವ ಕ್ರಮ:
ಉಳಿದ ಆಹಾರವನ್ನು ಎಣ್ಣೆಯಲ್ಲಿ ಹುರಿಯುತ್ತೀರಾ..?
ನಿಮಗಿಷ್ಟದ ಎಣ್ಣೆಯನ್ನು ಪಾನ್ಗೆ ಹಾಕಿ ಅದಕ್ಕೆ ಅನ್ನ ಹಾಕಿ ಹುರಿಯಿರಿ. ಮಧ್ಯ ಉರಿಯಿರಲಿ ಜೊತೆಗೆ ಅದನ್ನು ಕಲಸ್ತಾ ಇರಿ, ಹೀಗೆ ಮಾಡೋದ್ರಿಂದ ಎಲ್ಲಾ ಅನ್ನದ ಅಗುಳುಗಳಿಗೂ ತಾಪಮಾನ ತಾಗುತ್ತೆ. 165 ಡಿಗ್ರಿ ನಿಜಕ್ಕೂ ಕರೆಕ್ಟಾದ ತಾಪಮಾನ. ಹೊಗೆಯುಗುಳುವವರೆಗೆ ಬೇಯಿಸಿ.
ಉಳಿದ ಅನ್ನವನ್ನು ನೀವು ಹೆಬೆಯಲ್ಲಿ ಬೇಯಿಸ್ತೀರಾ.. ?
ಹಾಗಾದ್ರೆ ಅದನ್ನು ಸಾಸ್ ಪಾನ್ನಲ್ಲಿ ಬೇಯಿಸಿ. ಅದಕ್ಕೆ ಬೇಯಿಸುವಾಗ 1 ಸ್ಪೂನ್ ಬೆಣ್ಣೆ ಅಥವ ತುಪ್ಪ ಹಾಕಿ. ಆ ಬಳಿಕ 2 ಸ್ಪೂನ್ ನೀರು ಹಾಕಿ ಆ ಬಳಿಕ ಮುಚ್ಚಳ ಮುಚ್ಚಿ. ಇಲ್ಲೂ ಅಷ್ಟೇ 165 ಡಿಗ್ರಿ ತಾಪಮಾನದಲ್ಲಿ ಹಬೆಯಲ್ಲಿ ಬೇಯಿಸಿದ್ರೆ ಉತ್ತಮ. ಆದ್ರೆ, ಅದೆಲ್ಲದಕ್ಕಿಂತಲೂ ನಾವು ನಮಗೆ ಬೇಕಾದಷ್ಟೇ ಅನ್ನವನ್ನು ರೆಡಿ ಮಾಡಿ, ವೇಸ್ಟ್ ಆಗೋದನ್ನು ತಪ್ಪಿಸಿ. ಹೀಗೆ ಮಾಡೋದ್ರಿಂದ ಫುಡ್ ಪಾಯ್ಸನ್ ಆಗೋದನ್ನು ತಪ್ಪಿಸಿ.
Published On - 9:41 am, Sun, 10 November 19