ಉದ್ಯೋಗಸ್ಥ ಮಹಿಳೆಯರು ಈ ಸೂತ್ರ ಪಾಲಿಸಿದ್ರೆ ಭವಿಷ್ಯದ ಸುಖ ಕಾಣಬಹುದು

ನೀವು ದುಡಿದ ಹಣವನ್ನು ಮೊದಲು ಉಳಿತಾಯ ಮಾಡಿ, ಬಳಿಕ ಖರ್ಚು ಮಾಡಿ ಎಂದು ಶೇರು ಮಾರುಕಟ್ಟೆ ದಿಗ್ಗಜ ವರೇನ್ ಬಫೆಟ್ ಅವರು ಹೇಳಿರುವರು. ಆದರೆ ನಾವೆಲ್ಲರೂ ಮಾಡುವುದು ಇದರ ತದ್ವಿರುದ್ಧ. ಬಂದ ತಿಂಗಳ ಸಂಬಳವನ್ನು ಮೊದಲು ಖರ್ಚು ಮಾಡಿಕೊಂಡು, ಬಳಿಕ ಉಳಿದಿರುವುದನ್ನು ಉಳಿತಾಯ ಮಾಡುತ್ತೇವೆ. ಇನ್ನು ಕೆಲವು ಸಲ ಈ ಉಳಿತಾಯದ ಖಾತೆಗೆ ಹಣವೇ ಬೀಳುವುದಿಲ್ಲ. ಹಿಂದೆ ಮನೆಯಲ್ಲಿದ್ದ ಮಹಿಳೆಯರು ತಮ್ಮ ಪತಿ ಅಥವಾ ಮನೆಯವರು ನೀಡಿದ ಹಣವನ್ನೇ ಉಳಿತಾಯ ಮಾಡುತ್ತಿದ್ದರು. ಆದರೆ ಇಂದು ಆಧುನಿಕ ಮಹಿಳೆಯು […]

ಉದ್ಯೋಗಸ್ಥ ಮಹಿಳೆಯರು ಈ ಸೂತ್ರ ಪಾಲಿಸಿದ್ರೆ ಭವಿಷ್ಯದ ಸುಖ ಕಾಣಬಹುದು
Follow us
ಸಾಧು ಶ್ರೀನಾಥ್​
|

Updated on:Nov 11, 2019 | 7:00 AM

ನೀವು ದುಡಿದ ಹಣವನ್ನು ಮೊದಲು ಉಳಿತಾಯ ಮಾಡಿ, ಬಳಿಕ ಖರ್ಚು ಮಾಡಿ ಎಂದು ಶೇರು ಮಾರುಕಟ್ಟೆ ದಿಗ್ಗಜ ವರೇನ್ ಬಫೆಟ್ ಅವರು ಹೇಳಿರುವರು. ಆದರೆ ನಾವೆಲ್ಲರೂ ಮಾಡುವುದು ಇದರ ತದ್ವಿರುದ್ಧ. ಬಂದ ತಿಂಗಳ ಸಂಬಳವನ್ನು ಮೊದಲು ಖರ್ಚು ಮಾಡಿಕೊಂಡು, ಬಳಿಕ ಉಳಿದಿರುವುದನ್ನು ಉಳಿತಾಯ ಮಾಡುತ್ತೇವೆ. ಇನ್ನು ಕೆಲವು ಸಲ ಈ ಉಳಿತಾಯದ ಖಾತೆಗೆ ಹಣವೇ ಬೀಳುವುದಿಲ್ಲ.

ಹಿಂದೆ ಮನೆಯಲ್ಲಿದ್ದ ಮಹಿಳೆಯರು ತಮ್ಮ ಪತಿ ಅಥವಾ ಮನೆಯವರು ನೀಡಿದ ಹಣವನ್ನೇ ಉಳಿತಾಯ ಮಾಡುತ್ತಿದ್ದರು. ಆದರೆ ಇಂದು ಆಧುನಿಕ ಮಹಿಳೆಯು ಉದ್ಯೋಗಕ್ಕೆ ಹೋದರೂ ಉಳಿತಾಯ ತುಂಬಾ ಕಡಿಮೆ ಎನ್ನಬಹುದು. ಉದ್ಯೋಗಸ್ಥ ತಾಯಂದಿರಿಗೆ ಹಣ ಉಳಿತಾಯ ಮಾಡಲು ನಾವು ಏಳು ಸೂತ್ರಗಳನ್ನು ಹೇಳಿಕೊಡಲಿದ್ದೇವೆ.

ಹಣ ಎಲ್ಲಿ ಖರ್ಚಾಗುತ್ತೆ ಎಂದು ತಿಳಿದುಕೊಳ್ಳಿ: ನೀವು ಖರ್ಚು ಕಡಿಮೆ ಮಾಡುವ ಬದಲು ಮೊದಲಿಗೆ ಹಣ ಹೆಚ್ಚಾಗಿ ಎಲ್ಲಿ ಖರ್ಚಾಗುತ್ತಾ ಇದೆ ಎಂದು ತಿಳಿದುಕೊಳ್ಳಬೇಕು. ಖರ್ಚುಗಳ ಬಗ್ಗೆ ಲೆಕ್ಕಪತ್ರ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದು ತುಂಬಾ ಸರಳ ಪ್ರಕ್ರಿಯೆ ಆಗಿದೆ. ನೀವು ಹೇಗೆ ಹಣ ಖರ್ಚು ಮಾಡುತ್ತಲಿದ್ದೀರಿ ಮತ್ತು ಎಲ್ಲಿ ಹಣ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿಯಬೇಕು.

ಇಂದಿನ ದಿನಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಯಾವುದೇ ಆಪ್​ಗೆ ಜೋಡಿಸಬಹುದು. ಉದಾಹರಣೆಗೆ ಪರ್ಸನಲ್ ಕ್ಯಾಪಿಟಲ್, ಮಿಂಟ್. ಕಾಮ್ ಮತ್ತು ವೈಎನ್​ಎಬಿಯಂತಹ ಕೆಲವೊಂದು ಆಪ್​ಗಳು ನೀವು ಮಾಡಿದಂತಹ ಖರ್ಚು ಮತ್ತು ವೆಚ್ಚಗಳ ಬಗ್ಗೆ ದಾಖಲೆ ಇಟ್ಟುಕೊಳ್ಳುವುದು. ಯಾವುದಕ್ಕೆ ಎಷ್ಟು ಖರ್ಚಾಗುತ್ತಿದೆ ಎಂದು ತಿಳಿದರೆ ಆಗ ನಿಮಗೆ ಖಂಡಿತವಾಗಿಯೂ ಜ್ಞಾನೋದಯವಾಗುವುದು. ಅನಗತ್ಯವಾಗಿ ಆಗುವಂತಹ ಖರ್ಚುಗಳ ಮೇಲೆ ನಿಗಾ ವಹಿಸಿ, ಅದನ್ನು ಕಡಿಮೆ ಮಾಡಬೇಕು. ಇದರಿಂದ ಕುಟುಂಬ ಆರ್ಥಿಕ ಗುರಿಗಳನ್ನು ಹೇಗೆ ಮುಟ್ಟುವುದು ಎಂದು ತಿಳಿದುಬರುವುದು.

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ: ಹಣ ಎಲ್ಲಿ ಸೋರಿಹೋಗುತ್ತಿದೆ ಎಂದು ನಿಮಗೆ ಮನವರಿಕೆ ಆದ ಬಳಿಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಉದಾಹರಣೆ ಜಿಮ್​ಗೆ ಹೋಗಿ ವ್ಯಾಯಾಮ ಮಾಡುವ ಬದಲು ಮನೆಯಲ್ಲೇ ಸ್ವಲ್ಪ ವ್ಯಾಯಾಮ ಅಥವಾ ಯೋಗ ಮಾಡಬಹುದು. ಬ್ಯೂಟಿ ಸಲೂನ್​ಗೆ ತಿಂಗಳಲ್ಲಿ ನಾಲ್ಕೈದು ಸಲ ಹೋಗುವ ಬದಲು ಒಂದೇ ಸಲ ಹೋಗಬಹುದು. ಕೇಬಲ್, ಮ್ಯಾಗಜಿನ್ ಮತ್ತು ಡಿಜಿಟಲ್ ಸಬ್ ಸ್ಕ್ರಿಪ್ಶನ್ ಮತ್ತು ಯಾವಾಗಲೂ ಹೊರಗಡೆ ಹೋಗಿ ಊಟ ಮಾಡುವುದನ್ನು ನಿಲ್ಲಿಸಬಹುದು. ಕೆಲವನ್ನು ನೀವು ತೆಗೆಯಬಹುದು ಅಥವಾ ಮನೆಯವರಿಗೆ ಇದನ್ನು ತಗ್ಗಿಸುವ ಕೆಲಸ ನೀಡಬಹುದು.

ಮನೆಯ ಸದಸ್ಯರ ಖರ್ಚು ನಿಷೇಧಿಸಿ: ಸ್ವಲ್ಪ ಸಮಯದ ತನಕ ಮನೆಯ ಎಲ್ಲಾ ಸದಸ್ಯರ ಖರ್ಚಿಗೆ ನಿಷೇಧ ಹೇರಿ. ಕೆಲವು ಜನರು ವಾರಗಳ ಕಾಲ ಯಾವುದೇ ಖರ್ಚು ಮಾಡದೆ ಇರುವರು ಮತ್ತು ಇದನ್ನು ತಿಂಗಳುಗಳಿಗೆ ವಿಸ್ತರಿಸುವರು. ಖರ್ಚಿನ ಉಪವಾಸವೆಂದರೆ ಆಗ ನೀವು ಸಂಪೂರ್ಣವಾಗಿ ಖರ್ಚು ಮಾಡದೆ ಇರಬಹುದು ಅಥವಾ ಕೆಲವು ಖರ್ಚುಗಳಿಗೆ ನಿರ್ಬಂಧ ಹೇರಬಹುದು. ಇದರಲ್ಲಿ ಮುಖ್ಯವಾಗಿ ಆಹಾರ ಮತ್ತು ಪೆಟ್ರೋಲ್ ಇತ್ಯಾದಿ. ಕುಟುಂಬದ ಅಗತ್ಯತೆ ಹಾಗೂ ಆರ್ಥಿಕ ಗುರಿಗೆ ಅನುಗುಣವಾಗಿ ಇದನ್ನು ಮಿತಿಗೊಳಿಸಬಹುದು.

ಹೆಚ್ಚಾಗಿ ಆನ್​ಲೈನ್​ನಲ್ಲಿ ಶಾಪಿಂಗ್ ಮಾಡಿ: ನೀವು ಹಣ ಖರ್ಚಾಗುವುದನ್ನು ಕಡಿಮೆ ಮಾಡಬೇಕು ಎಂದಿದ್ದರೆ ಆಗ ನೀವು ಮೊದಲಿಗೆ ಆನ್​ ಲೈನ್​ನಲ್ಲಿ ಶಾಪಿಂಗ್ ಮಾಡಬೇಕು. ನೀವು ಇಲ್ಲಿ ಹಣ ಖರ್ಚು ಮಾಡಿದರೂ ಆಗ ತುಂಬಾ ನಿಗದಿತ ಮತ್ತು ಲೆಕ್ಕಾಚಾರದ್ದಾಗಿರುವುದು. ಆನ್ ಲೈನ್​ನಲ್ಲಿ ನೀವು ಕೆಲವೊಂದು ಕೂಪನ್​ಗಳನ್ನು ಬಳಸಬಹುದು ಮತ್ತು ನಿಮ್ಮ ಬಜೆಟ್ ಮೀರದಂತೆ ತಡೆಯಬಹುದು. ನಿಮ್ಮ ಬಜೆಟ್ ಗಿಂತ ಹೆಚ್ಚು ಹಣವಾದರೆ ಆಗ ನೀವು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಯಾಕೆಂದರೆ ನೀವು ಇಲ್ಲಿ ಕೆಲವೊಂದು ವಸ್ತುಗಳನ್ನು ಕಡಿತ ಮಾಡಿ ನಿಮ್ಮ ಬಜೆಟ್​ಗೆ ಸರಿಹೊಂದಿಸಬಹುದು.

ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತೀರಾ? ಹಾಗಾದ್ರೆ, ನೀವು ಕ್ರೆಡಿಟ್ ಕಾರ್ಡ್ ನ ರಿವಾರ್ಡ್ ಗಳನ್ನು ಬಳಕೆ ಮಾಡುವುದನ್ನು ಕಲಿಯಬೇಕು. ನೀವು ಖರ್ಚಿನ ಲೆಕ್ಕಾಚಾರಗಳನ್ನು ನೋಡಿದ್ದರೆ ಆಗ ನೀವು ಖಂಡಿತವಾಗಿಯೂ ಇದರ ಬಗ್ಗೆ ಆಲೋಚನೆ ಮಾಡಿ ಮತ್ತು ಕೆಲವೊಂದು ವಿಭಾಗದಲ್ಲಿ ಹೆಚ್ಚು ಹಣ ವ್ಯಯ ಮಾಡಿದರೆ ಆಗ ರಿವಾರ್ಡ್ ಸಿಗುವುದು. ಆಹಾರ ಸಾಮಗ್ರಿ, ಇಂಧನ ಮತ್ತು ರೆಸ್ಟೋರೆಂಟ್ ನಲ್ಲಿ ಖರ್ಚು ಮಾಡುವುದಕ್ಕೆ ಕೆಲವೊಂದು ಕ್ರೆಡಿಟ್ ಕಾರ್ಡ್​ಗಳಲ್ಲಿ ಹೆಚ್ಚು ರಿವಾರ್ಡ್ ನೀಡಲಾಗುತ್ತದೆ.

ಕ್ರೆಡಿಟ್ ಕಾರ್ಡ್ ರಿವಾರ್ಡ್​ಗಳನ್ನು ಇದಕ್ಕೆ ಬಳಕೆ ಮಾಡಬಹುದು * ಆಹಾರ ಸಾಮಗ್ರಿಗಳು * ಗ್ಯಾಸ್, ಆನ್ ಲೈನ್ ಶಾಪಿಂಗ್, ಪ್ರವಾಸ, ಮೆಡಿಕಲ್ ಅಥವಾ ಮನೆ ರಿಪೇರಿ ಖರ್ಚಿಗೆ ಇದನ್ನು ಬಳಕೆ ಮಾಡಬಹುದು. * ವಾಹನ ಇಂಧನ ಖರ್ಚು: ಕೆಲವೊಂದು ಕಾರ್ಡ್​ಗಳಲ್ಲಿ ಇಂಧನಕ್ಕಾಗಿ ಹಣ ವ್ಯಯಿಸಿದರೆ ಆಗ ನಿಮಗೆ ಶೇ. 1 ಅಥವಾ 2ರಷ್ಟು ನಗದು ವಾಪಸಾತಿ ಸಿಗುವುದು. * ರೆಸ್ಟೋರೆಂಟ್ ನಲ್ಲಿ ಊಟ: ಕೆಲವೊಂದು ಕಾರ್ಡ್​ ಗಳಲ್ಲಿ ಹೊರಗಡೆ ಊಟ ಮಾಡುವುದಕ್ಕೆ ಮತ್ತು ಸಿನಿಮಾ ನೋಡಲು ಶೇ.4ರಷ್ಟು ನಗದು ವಾಪಸಾತಿ ಸಿಗುವುದು. ಶೇ.2ರಷ್ಟು ಆಹಾರ ಸಾಮಗ್ರಿ ಖರೀದಿ ಮತ್ತು ಶೇ.1ರಷ್ಟು ಇತರ ಖರ್ಚಿಗೆ ಸಿಗುವುದು.

ನೀವು ಆನ್ ಲೈನ್ ಅಥವಾ ಅಂಗಡಿಗೆ ಹೋಗಿ ಖರೀದಿ ಮಾಡುತ್ತಲಿದ್ದರೆ ಆಗ ನೀವು ಕೆಲವೊಂದು ಆಪ್ ಗಳನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು. ಕೆಲವೊಂದು ಸಲ ವಿಶೇಷ ರಿಯಾಯಿತಿ ಮತ್ತು ಕೂಪನ್​ಗಳು ನಿಮಗೆ ಆಪ್ ಮೂಲಕ ಸಿಗುವುದು. ಇದರಿಂದ ನೀವು ಆನ್ ಲೈನ್ ಅಥವಾ ಅಂಗಡಿಯಲ್ಲಿ ಖರೀದಿ ಮಾಡಿದರೆ ಅದರಿಂದ ಖರ್ಚು ಕಡಿಮೆ ಮಾಡಬಹುದು. ಇದು ಉದ್ಯೋಗಸ್ಥ ಮಹಿಳೆಯರ ಉಳಿತಾಯ ಸೂತ್ರ. ಇದನ್ನು ಪಾಲಿಸಿದ್ರೆ ಭವಿಷ್ಯದ ಸುಖವನ್ನು ಕಾಣಬಹುದು.

Published On - 6:56 am, Mon, 11 November 19

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್