ಕಾರ್ತಿಕ ಮಾಸದಲ್ಲಿ ದೀಪವನ್ನು ಏಕೆ ಹಚ್ಚಬೇಕು?
ಕಾರ್ತಿಕ ಮಾಸದಲ್ಲಿ ಹಗಲು ಕಡಿಮೆ, ರಾತ್ರಿ ಹೆಚ್ಚು. ರಾತ್ರಿಯ ಅವಧಿ ಹೆಚ್ಚಾಗಿರುವ ಈ ಮಾಸದಲ್ಲಿ ಕತ್ತಲು ಕೂಡ ಜಾಸ್ತಿಯೇ ಇರುತ್ತೆ. ಕತ್ತಲನ್ನು ಕಳೆಯಲು ಬೆಳಕು ಬೇಕು. ಬೆಳಕು ಬೆಳಗಲು ಸಾಧನವೊಂದು ಬೇಕು. ಹಗಲಾದರೆ ಸೂರ್ಯನಿರುತ್ತಾನೆ. ಅದೇ ರಾತ್ರಿ? ಈಗೇನೋ ವಿದ್ಯುದ್ದೀಪಗಳಿವೆ. ಹಿಂದೆಲ್ಲಾ? ಹಣತೆಯ ದೀಪಗಳೇ ಬೆಳಕಿನ ಮೂಲಗಳಾಗಿದ್ವು. ಈ ಕಾರಣದಿಂದ ಹುಟ್ಟಿಕೊಂಡಿದ್ದೇ ಕಾರ್ತಿಕ ದೀಪ. ಇದಕ್ಕೆ ಜೊತೆಯಾಗಿ ಚಳಿ ಇರುತ್ತೆ. ಹವಾಮಾನದಲ್ಲಿ ಬಿಸಿಯ ಪ್ರಮಾಣ ತಗ್ಗಿರುತ್ತೆ. ಇದ್ರಿಂದ ಆರೋಗ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತೆ. ಹೀಗಾಗೇ ಈ ಮಾಸದಲ್ಲಿ […]
ಕಾರ್ತಿಕ ಮಾಸದಲ್ಲಿ ಹಗಲು ಕಡಿಮೆ, ರಾತ್ರಿ ಹೆಚ್ಚು. ರಾತ್ರಿಯ ಅವಧಿ ಹೆಚ್ಚಾಗಿರುವ ಈ ಮಾಸದಲ್ಲಿ ಕತ್ತಲು ಕೂಡ ಜಾಸ್ತಿಯೇ ಇರುತ್ತೆ. ಕತ್ತಲನ್ನು ಕಳೆಯಲು ಬೆಳಕು ಬೇಕು. ಬೆಳಕು ಬೆಳಗಲು ಸಾಧನವೊಂದು ಬೇಕು. ಹಗಲಾದರೆ ಸೂರ್ಯನಿರುತ್ತಾನೆ. ಅದೇ ರಾತ್ರಿ? ಈಗೇನೋ ವಿದ್ಯುದ್ದೀಪಗಳಿವೆ. ಹಿಂದೆಲ್ಲಾ? ಹಣತೆಯ ದೀಪಗಳೇ ಬೆಳಕಿನ ಮೂಲಗಳಾಗಿದ್ವು. ಈ ಕಾರಣದಿಂದ ಹುಟ್ಟಿಕೊಂಡಿದ್ದೇ ಕಾರ್ತಿಕ ದೀಪ. ಇದಕ್ಕೆ ಜೊತೆಯಾಗಿ ಚಳಿ ಇರುತ್ತೆ.
ಹವಾಮಾನದಲ್ಲಿ ಬಿಸಿಯ ಪ್ರಮಾಣ ತಗ್ಗಿರುತ್ತೆ. ಇದ್ರಿಂದ ಆರೋಗ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತೆ. ಹೀಗಾಗೇ ಈ ಮಾಸದಲ್ಲಿ ನಿತ್ಯ ಸಂಜೆ ಮನೆಯ ಮುಂದೆ ದೀಪಗಳನ್ನು ಹಚ್ಚುವುದರಿಂದ ಶುಭವಾಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಾಗಾದ್ರೆ ಈ ಮಾಸದಲ್ಲಿ ದೀಪ ಹಚ್ಚೋದು ಹೇಗೆ ಅಂತಿದ್ದೀರಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕಾರ್ತಿಕ ಮಾಸದಲ್ಲಿ ಎಳ್ಳೆಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚೋದು ಪುಣ್ಯಪ್ರದ ಎನ್ನಲಾಗುತ್ತೆ. ಇಂತಹ ದೀಪಗಳನ್ನು ಹಚ್ಚೋದ್ರಿಂದ ಶುಭಫಲಗಳುಂಟಾಗುತ್ತವೆ.
ಎಳ್ಳೆಣ್ಣೆ-ತುಪ್ಪದ ದೀಪ ಹಚ್ಚುವುದರ ಫಲಗಳು -ಕಣ್ಣುಗಳಿಗೆ ಆಹ್ಲಾದತೆ ಉಂಟಾಗುತ್ತೆ. -ದೃಷ್ಟಿ ದೋಷಗಳು ದೂರವಾಗುತ್ತವೆ. -ಚಳಿಯ ವಾತಾವರಣದಿಂದ ಕಾಡುವ ಶ್ವಾಸಕೋಶ ವ್ಯಾಧಿಗಳು ದೂರವಾಗುತ್ತವೆ. -ಚಳಿಗಾಲದಲ್ಲಿ ಹೆಚ್ಚುವ ಕ್ರಿಮಿಕೀಟಗಳು ನಶಿಸುತ್ತವೆ.
ದೀಪ ಬೆಳಗುವ ಮೂಲಕ ಕತ್ತಲನ್ನು ಕಳೆಯಬೇಕು ಎನ್ನುವ ಚಿಂತನೆಯಲ್ಲಿ ಮೂಡಿ ಬಂದದ್ದೇ ಕಾರ್ತಿಕ ದೀಪೋತ್ಸವ. ಕಾರ್ತಿಕ ಮಾಸ ಎರಡು ರೀತಿಯಲ್ಲಿ ಗಮನ ಸೆಳೆಯುತ್ತೆ. ಒಂದು ಕತ್ತಲು, ಮತ್ತೊಂದು ಸ್ಥಿತಿ. ಕತ್ತಲು ಲಯ ಭಾವವಾದರೆ, ಸ್ಥಿತಿ ಬದುಕಿನ ಗತಿ. ಲಯ ಭಾವವೇ ಶಿವ. ಬದುಕಿನ ಗತಿಯೇ ವಿಷ್ಣು.
ಕಾರ್ತಿಕ ಮಾಸ ಶಿವ ಹಾಗೂ ವಿಷ್ಣುಗೆ ಪ್ರಿಯವಾದ ಮಾಸ. ಹೀಗಾಗಿ ಶಿವ ಮತ್ತು ವಿಷ್ಣು ಭಕ್ತರು ಒಂದುಗೂಡಿ ದೇಗುಲಗಳಲ್ಲಿ , ಮನೆಯ ಮುಂಭಾಗದಲ್ಲಿ ದೀಪಗಳನ್ನು ಬೆಳಗುತ್ತಾರೆ. ಆ ದೀಪದ ಬೆಳಕಿನಲ್ಲೇ ತನ್ಮಯತೆಯನ್ನು ಕಂಡುಕೊಳ್ಳುತ್ತಾರೆ. ಕಾರ್ತಿಕ ಮಾಸ ಹತ್ತು ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತೆ. ಶಿವ ಮತ್ತು ವಿಷ್ಣು ಬೇರೆಯಲ್ಲ.
ಇಬ್ಬರೂ ಒಂದೇ ಎನ್ನುವ ಸಂದೇಶವನ್ನು ಸಾರುವ ಮಾಸವೇ ಕಾರ್ತಿಕ ಮಾಸ. ಆಷಾಢ ಶುಕ್ಲ ಏಕಾದಶಿಯಂದು ಯೋಗ ನಿದ್ರೆಗೆ ಜಾರುವ ಶ್ರೀಹರಿ ತುಳಸಿ ಹಬ್ಬದಂದು ಅಂದರೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಮೇಲೇಳುತ್ತಾನೆ. ಕಾರ್ತಿಕ ಮಾಸದಲ್ಲೇ ಶಿವನಿಂದ ತ್ರಿಪುರಾಸುರನ ವಧೆಯೂ ಆಗುತ್ತೆ. ಇಂತಹ ಪವಿತ್ರ ಮಾಸದಲ್ಲಿ ದೀಪ ಬೆಳಗುವ ಮೂಲಕ ಶಿವ ಹಾಗೂ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು.
Published On - 11:40 am, Mon, 11 November 19