AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರನ್ನೂ ಬಿಡದ ಸೈಬರ್ ವಂಚಕರು: ಬೆಂಗಳೂರಿನ ಹಲವು ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್!

ಬೆಂಗಳೂರಿನ ಪೊಲೀಸ್ ಅಧಿಕಾರಿಗಳ ವಾಟ್ಸ್​ಆ್ಯಪ್ ಖಾತೆಗಳನ್ನು ಕೂಡ APK ಫೈಲ್‌ಗಳನ್ನು ಬಳಸಿ ಹ್ಯಾಕ್ ಮಾಡಲಾಗಿದೆ. ಅಪರಿಚಿತ ಸಂಖ್ಯೆಗಳಿಂದ ಕಳುಹಿಸಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ. ಹಲವು ಠಾಣೆಗಳ ಇನ್ಸ್​ಪಕ್ಟರ್‌ಗಳು, ಕಾನ್ಸ್​​ಟೇಬಲ್​ಗಳು ಇದರಿಂದ ಸಮಸ್ಯೆ ಅನುಭವಿಸಿದ್ದಾರೆ. ಬ್ಯಾಂಕಿಂಗ್ ಮಾಹಿತಿಯನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಇಂತಹ ವಂಚನೆಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ.

ಪೊಲೀಸರನ್ನೂ ಬಿಡದ ಸೈಬರ್ ವಂಚಕರು: ಬೆಂಗಳೂರಿನ ಹಲವು ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Dec 27, 2024 | 12:24 PM

ಬೆಂಗಳೂರು, ಡಿಸೆಂಬರ್ 27: ಎಪಿಕೆ ಫೈಲ್​ಗಳನ್ನು ಕಳುಹಿಸಿ ವಾಟ್ಸ್​ಆ್ಯಪ್, ಮೊಬೈಲ್ ನಂಬರ್ ಹ್ಯಾಕ್ ಮಾಡುವ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದ್ದು, ಇದೀಗ ಬೆಂಗಳೂರು ಪೊಲೀಸರಿಗೂ ಅದರ ಬಿಸಿ ತಟ್ಟಿದೆ. ಬೆಂಗಳೂರಿನ ಹಲವು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ವಾಟ್ಸ್​ಆ್ಯಪ್ ಖಾತೆಗಳನ್ನು ಸೈಬರ್ ವಂಚಕರು ಬುಧವಾರ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಹ್ಯಾಕ್ ಮಾಡಿರುವುದು ಮೂಲಗಳಿಂದ ತಿಳಿದುಬಂದಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ಸ್​ಪೆಕ್ಟರ್​ಗಳು ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಅಪರಿಚಿತ ಸಂಖ್ಯೆಯ ರಿಸೀವರ್‌ಗಳು ವಾಟ್ಸ್​​ಆ್ಯಪ್​ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಲಿಂಕ್ ಅನ್ನು ದುರುದ್ದೇಶಪೂರಿತವೆಂದು ತಿಳಿಯದೆ ಕ್ಲಿಕ್ ಮಾಡಿದ್ದಾರೆ ಎನ್ನಲಾಗಿದೆ.

ಯಾವೆಲ್ಲ ಠಾಣೆಗಳ ಪೊಲೀಸರ ಮೊಬೈಲ್ ಹ್ಯಾಕ್?

ವಂಚಕರು ಆಡುಗೋಡಿ ಟ್ರಾಫಿಕ್ ಮತ್ತು ಜ್ಞಾನಭಾರತಿ, ಗಿರಿನಗರ ಮತ್ತು ಬಸವನಗುಡಿ ಠಾಣೆ ಸೇರಿದಂತೆ ಕೆಲವು ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಅಧಿಕೃತ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿದ್ದಾರೆ. ಅವರ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮತ್ತು ಗುಂಪುಗಳಿಗೆ ಎಪಿಕೆ ಫೈಲ್ ಲಿಂಕ್‌ಗಳನ್ನು ಕಳುಹಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಲಿಂಕ್ ಡೌನ್‌ಲೋಡ್ ಮಾಡಿದ ನಂತರ ಹಣವನ್ನು ಕಳೆದುಕೊಂಡ ಬಗ್ಗೆ ಯಾವುದೇ ದೂರು ಅಥವಾ ಮಾಹಿತಿ ಇನ್ನೂ ಬಂದಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಸಂದೇಶವನ್ನು ಸ್ವೀಕರಿಸಿದ್ದೇನೆ. ಕುತೂಹಲದಿಂದ ಅದನ್ನು ಕ್ಲಿಕ್ ಮಾಡಿದ್ದೇನೆ. ಆ ಲಿಂಕ್ ಖಾಲಿಯಾಗಿತ್ತು. ನಂತರ, ಅವರ ಫೋನ್ ಮತ್ತು ವಾಟ್ಸ್​​ಆ್ಯಪ್ ಹ್ಯಾಕ್ ಆಗಿರುವುದು ನನಗೆ ತಿಳಿಯಿತು ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಬಳಿಕ ಆ ಅಧಿಕಾರಿ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿ ಪಾಸ್​ವರ್ಡ್ ಬದಲಾಯಿಸಿದ್ದರು.

ಬೆಳಗಾವಿಯಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ವಾಟ್ಸ್​​ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅವರ ಎಲ್ಲಾ ಕಾಂಟ್ಯಾಕ್ಟ್​​ಗಳು ಮತ್ತು ಗುಂಪುಗಳಿಗೆ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿ ಸಂದೇಶವನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.

‘‘ನಾನು ಬೆಳಗಾವಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಿದ್ದೇನೆ. ನನ್ನ ಅಧಿಕೃತ ಸಂಖ್ಯೆಯಿಂದ ಸ್ವೀಕರಿಸಿದ ಎಪಿಕೆ ಫೈಲ್‌ಗಳ ಬಗ್ಗೆ ಸ್ನೇಹಿತರು ನನಗೆ ಎಚ್ಚರಿಕೆ ನೀಡಿದ ನಂತರ ಹ್ಯಾಕಿಂಗ್ ಬಗ್ಗೆ ನನ್ನ ಕಾಂಟ್ಯಾಕ್ಟ್​ಗಳಿಗೆ ಎಚ್ಚರಿಕೆ ನೀಡುವ ಸಂದೇಶವನ್ನು ಪೋಸ್ಟ್ ಮಾಡಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.

ಎಪಿಕೆ ಫೈಲ್ ವಂಚನೆ ಎಂದರೇನು?

ಒಮ್ಮೆ ಮೊಬೈಲ್ ಬಳಕೆದಾರರು ಎಪಿಕೆ ಲಿಂಕ್ ಕ್ಲಿಕ್ ಮಾಡಿ ಫೈಲ್ ಡೌನ್‌ಲೋಡ್ ಮಾಡಿದ ನಂತರ, ಆ ಲಿಂಕ್ ಕಳುಹಿಸಿದವರಿಗೆ (ವಂಚಕರಿಗೆ) ವೈಯಕ್ತಿಕ ಡೇಟಾ ಮತ್ತು ಬ್ಯಾಂಕಿಂಗ್ ಮಾಹಿತಿ ಒಳಗೊಂಡಂತೆ ದತ್ತಾಂಶಗಳು ಸಿಗುತ್ತವೆ. ವಂಚಕರು ಮೊಬೈಲ್ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಮತ್ತು ಬ್ಯಾಂಕ್ ಖಾತೆಗಳಿಂದ ಹಣವನ್ನು ಎಗರಿಸಬಹುದು.

ಇದನ್ನೂ ಓದಿ: ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಬಂತು APK ಫೈಲ್: ಆ್ಯಪ್ ಇನ್​ಸ್ಟಾಲ್ ಆಗುತ್ತಿದ್ದಂತೇ ಮೊಬೈಲ್ ಹ್ಯಾಕ್, 1.5 ಲಕ್ಷ ರೂ. ಮಾಯ

ಎಪಿಕೆ ವಂಚನೆ ತಡೆಗೆ ಏನೇನು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು?

  • ನಿಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು, ಸ್ನೇಹಿತರು ಅಥವಾ ಯಾವುದೇ ಅಧಿಕಾರಿಗಳು ಕಳುಹಿಸಿದ್ದರೂ ಸಹ, ಅಪ್ಲಿಕೇಶನ್‌ನ (ಎಪಿಕೆ ಫೈಲ್) ಮೂಲವನ್ನು ನೀವು ಪರಿಶೀಲಿಸದ ಹೊರತು ಲಿಂಕ್ ಕ್ಲಿಕ್ ಮಾಡಬೇಡಿ.
  • ಕಾಂಟ್ಯಾಕ್ಟ್ ಅಥವಾ ಮೊಬೈಲ್ ಅಲೋ ಆಯ್ಕೆ ಕೊಡಬೇಡಿ.
  • ನೀವು ಆಕಸ್ಮಿಕವಾಗಿ ಅದನ್ನು ಕ್ಲಿಕ್ ಮಾಡಿದರೆ, ತಕ್ಷಣವೇ ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಪಾಸ್‌ವರ್ಡ್ ಅನ್ನು ಬದಲಾಯಿಸಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ