AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 22 May: ಈ ರಾಶಿಯವರಿಗೆ ಎಲ್ಲರನ್ನೂ ಬಿಡಬೇಕಾದ ಸ್ಥಿತಿ ಬರಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ, ಗುರುವಾರ ಭವಿಷ್ಯದ ಚಿಂತೆ, ಆರ್ಥಿಕ ಅಸ್ಥಿರತೆ, ಉದ್ಯೋಗದಲ್ಲಿ ಉನ್ನತಿ, ವಿದ್ಯಾಭ್ಯಾಸಕ್ಕೆ ತಡೆ ಇವೆಲ್ಲ ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 22 May: ಈ ರಾಶಿಯವರಿಗೆ ಎಲ್ಲರನ್ನೂ ಬಿಡಬೇಕಾದ ಸ್ಥಿತಿ ಬರಬಹುದು
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: May 22, 2025 | 1:27 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಬುಧವಾರ, ತಿಥಿ: ದಶಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 – 54 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:06 : 15:42, ಯಮಘಂಡ ಕಾಲ 06:05 – 07:41, ಗುಳಿಕ ಕಾಲ 09:17 – 10:53

ಮೇಷ ರಾಶಿ: ಯಾವ ಕಟ್ಟುಪಾಡುಗಳನ್ನೂ ಮೀರದೇ ಕೆಲಸಮಾಡುವುದು ಅಗತ್ಯ. ಇಂದಿನ ಎಲ್ಲ ಕಾರ್ಯಗಳೂ ಸಮಯ ಮೀರುವ ಸಾಧ್ಯತೆ ಇದೆ. ಅಷ್ಟಾದರೂ ನಿಮ್ಮ ಪಾಲಿನದ್ದು ಸಿಕ್ಕೆ ಸಿಗುವುದು. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ಕಛೇರಿಯಲ್ಲಿ ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ. ಒತ್ತಡದ ಕಾರಣ ವಿರಾಮವನ್ನೂ ಪಡೆಯಬಹುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚು, ಅದನ್ನು ಕೆಲಸದಲ್ಲಿ ಪ್ರದರ್ಶಿಸಿ. ಮನಸ್ಸಿಗೆ ಬೇರೆ ರೀತಿಯಲ್ಲಿ ನೋಡುವ ಅವಶ್ಯಕತೆ ಇರಲಿದೆ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಕುಟುಂಬದ ಉಳಿದ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಅವರ ಸಂಪೂರ್ಣ ಬೆಂಬಲವೂ ಸಿಗಲಿದೆ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ವೃಷಭ ರಾಶಿ: ಏಕಾಗ್ರತೆಯಿಂದ ಏನನ್ನೂ ಮಾಡಲಾಗದು. ಇಂದು ನಿಮ್ಮ ಬಳಿ ಯಾರಾದರೂ ಸಮಸ್ಯೆಗಳನ್ನು ಹೇಳುತ್ತ ಬರಬಹುದು. ಅದನ್ನು ಜಾಣ್ಮೆಯಿಂದ ಬಗೆ ಹರಿಸಿ. ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ವ್ಯವಹಾರಕ್ಕೆ ಬೇಕಾದ ಪ್ರಮುಖ ದಾಖಲೆಗಳು ಕಣ್ಮರೆಯಾಗಬಹುದು. ಪರಿಸ್ಥಿತಿ ಶೀಘ್ರದಲ್ಲೇ ನಿಮ್ಮ ಪರವಾಗಿ ಬದಲಾಗುತ್ತದೆ. ಎಲ್ಲದಕ್ಕೂ ಮಾರ್ಗದರ್ಶನ ಬೇಕು ಎನಿಸುವುದಕ್ಕಿಂತ ಸ್ವಂತವಾಗಿ ಆಲೋಚಿಸುವುದೂ ಮುಖ್ಯವಾಗುವುದು. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ. ಧೈರ್ಯ ಮತ್ತು ಮನಸ್ಸಿಗೆ ಶಾಂತಿ ದೊರಕಲಿದೆ. ಇಲ್ಲವಾದರೆ ಪರಿಸ್ಥಿತಿಯು ಮತ್ತೇನೋ ಆಗುವುದು. ಕಚೇರಿಯಲ್ಲಿನ ಸೂಕ್ಷ್ಮ ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು.

ಮಿಥುನ ರಾಶಿ: ಪ್ರೀತಿ‌ ಮಾಡಲು ನಿಮ್ಮ ಮನಃಸ್ಥಿತಿಯವರನ್ನೇ ಹುಡುಕುವಿರಿ. ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಬೇಕಾಗಬಹುದು. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ನಿಮಗೆ ಅತೃಪ್ತಿಯ ಭಾವವು ಕಾಡಲಿದೆ. ಪಕ್ಕದರ ಪರಿಚಯವು ಸ್ನೇಹವಾಲಿದೆ. ನಿಮ್ಮ ಅಪಕ್ವತೆಯನ್ನು ತೋರಿಸುವುದು ಬೇಡ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಅಥವಾ ಸ್ಥಾನಮಾನ ಅಲ್ಲಗಳೆಯುವಿರಿ. ನಿಮ್ಮ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡುವರು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು. ಹಿಂದಿನ ಪ್ರಯತ್ನಗಳ ಫಲವನ್ನು ನೀವು ಈಗ ಪಡೆಯಲು ಪ್ರಾರಂಭಿಸುತ್ತೀರಿ. ಕಛೇರಿಯಲ್ಲಿ ಸಂತೋಷದ ವಾತಾವರಣ ಇದ್ದು ನಿಮಗೆ ಕೆಲಸವನ್ನು ಮಾಡಲು ಅನುಕೂಲವಾಗುವುದು. ಇಷ್ಟು ದಿನ ಮಾತಮಾಡದೇ ಇರುವವರು ಇಂದು ಮಾತನಾಡುವರು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ.

ಕರ್ಕಾಟಕ ರಾಶಿ: ನಿಂದನೆ ಮಾಡುವ ಜನರನ್ನು ನೀವು ತಿರಸ್ಕರಿಸಿ ಅವರ ಜೊತೆ ಎಲ್ಲ ಬಂಧವನ್ನು ಕಳೆದುಕೊಳ್ಳುವಿರಿ. ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ ಅಥವಾ ಧ್ಯಾನವನ್ನು ಮಾಡುವುದು ಉತ್ತಮ. ನಿಮಗೆ ಪ್ರಿಯವಾದದ್ದನ್ನು ಪಡೆದುಕೊಳ್ಳುವಿರಿ. ಬಹಳ ಕಾಲದಿಂದ ಮಾಡುತ್ತಿರುವ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಉದ್ವೇಗದಲ್ಲಿ ಇರುವಾಗ ಸುಮ್ಮನೆ‌ ಒಂದು ಕಡೆ ಕುಳಿತು ಶಾಂತರಾಗಿ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಗಳು ಕೂಡಲೇ ಫಲ ನೀಡಬಹುದು. ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಸ್ನೇಹಿತರಿಂದ ಬೆಂಬಲ ಸಿಗುವುದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮನಸ್ಸನ್ನು ದೃಢವಾಗಿಟ್ಟುಕೊಳ್ಳಿ. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಕಲಾವಿದರಿಗೆ ಪ್ರಶಂಸೆಯು ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಜೊತೆ ಗೌರವದಿಂದ ವರ್ತಿಸಿ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು.

ಸಿಂಹ ರಾಶಿ: ನಿಮ್ಮ ಬುಡಕ್ಕೆ ಬಂದಿದ್ದನ್ನು ಯಾವತ್ತೂ ಬಿಡಲಾರಿರಿ. ಇಂದು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಸಂಶೋಧನೆ ಮಾಡುತ್ತಿರುವವರಿಗೆ ಶುಭವಾರ್ತೆ ಇರಲಿದೆ. ಅನವಶ್ಯಕ ವೆಚ್ಚದಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಸಂಭವಿಸಬಹುದು, ಸಂಯಮ ಅಗತ್ಯ. ಅಧ್ಯಾತ್ಮದ ಬಗ್ಗೆ ಪರಿಚಿತರ ಬಳಿ ಸಂವಾದ ಮಾಡುವಿರಿ. ನೆಮ್ಮದಿಗಾಗಿ ಚಡಪಡಿಸುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು. ತಾಳ್ಮೆಯಿಂದ ಕೆಲಸಗಳನ್ನು ನಿರ್ವಹಿಸಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಸಹೋದ್ಯೋಗಿಗಳ ಜೊತೆ ಸಣ್ಣ ವಿವಾದ ಆಗಬಹುದು. ಯಾರಿಂದಲಾದರೂ ಮೋಸ ಹೋಗುವ ಸಾಧ್ಯತೆ ಇದೆ. ಕೆಲವು ಘಟನೆಗಳು ನೀವು ಅಂದಿಕೊಂಡಂತೆ ಆಗುವುದು. ಆದಾಯದ ಭಾಗವನ್ನು ದಾನ ಮಾಡುವ ಆಸೆ ಬರಬಹುದು.

ಕನ್ಯಾ ರಾಶಿ: ಸುಮ್ಮನೆ‌ ಕುಳಿತಿರುವುದು ನಿಮಗೆ ನಿರುದ್ಯೋಗದಂತೆ ಭಾಸವಾಗುವುದು. ನಿಮ್ಮ ವೃತ್ತಿಜೀವನವನ್ನು ಯಶಸ್ಸನ್ನು ಸಾಧಿಸಲು ಶ್ರಮವಹಿಸುವಿರಿ. ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡಯುವಿರಿ. ಮನೆಯವರೊಂದಿಗೆ ಪ್ರವಾಸ ಹಾಗೂ ಬೇಕಾದ ವಸ್ತುಗಳ ಖರೀದಿಮಾಡುವಿರಿ. ಕಳಂಕರಹಿತ ವ್ಯವಹಾರವನ್ನು ಮಾಡುವಿರಿ. ಆರೋಗ್ಯದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯವಿದೆ. ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬೆಳೆಯುತ್ತದೆ. ಒರಟುತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ಅತಿಯಾದ ಮೋಹವು ಬೇಡ. ಶಾಂತಿಯಿಂದ ಮುನ್ನಡೆಯಿರಿ. ನಿಮ್ಮ ಸಂಬಂಧವು ಮತ್ತಷ್ಟು ಆಪ್ತವಾಗಲು ಯೋಚಿಸುವಿರಿ. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದೇ ಕಲಹವಾಗುವುದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು.

ತುಲಾ ರಾಶಿ: ಕಾಣೆಯಾಗಿರುವುದನ್ನು ಹುಡುಕುವಾಗಲೇ‌ ಸಮಯ ಬಹಳಷ್ಟು ಹೋಗುವುದು. ನಿಮ್ಮ ಕುಟುಂಬಜೀವನವು ಉತ್ತಮವಾಗಿರಲಿದೆ. ಇಂದು ಕೌಟುಂಬಿಕಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವಿರಿ. ಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕಳೆದುಹೋದ ವಸ್ತುವಿನ ಮೌಲ್ಯವು ನಿಮಗೆ ಇಂದು ಗೊತ್ತಾಗದೇ ಹೋಗುವುದು. ಕಾರ್ಯಭಾರದಿಂದ ಕೆಲವೊಂದು ನಿರಾಶೆಗಳಾಗಬಹುದು, ಆದರೆ ದಿನದ ಕೊನೆಗೆ ಸಮಾಧಾನ ಸಿಗಲಿದೆ. ಆಸ್ತಿ ಸಂಬಂಧಿತ ವಿಚಾರದಲ್ಲಿ ಯಶಸ್ಸು ದೊರಕುವುದು. ಕೆಲವರನ್ನು ಹತ್ತಿರಕ್ಕಿಂತ‌ ದೂರದಲ್ಲಿದ್ದಾಗಲೇ ಚೆನ್ನಾಗಿ ತಿಳಿಯಬಹುದು. ಸ್ನೇಹಿತರೊಂದಿಗೆ ಪ್ರಮುಖ ಚರ್ಚೆ ನಡೆಯಬಹುದು. ನಿಮ್ಮ ಪ್ರೀತಿಯಲ್ಲಿ ನೀವು ಯಾವುದೇ ಮಹತ್ತ್ವದ ಬದಲಾವಣೆ ಇಲ್ಲದೇ ಸಪ್ಪೆ ಎನಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ವಿವಾದವನ್ನು ಮಾಡುವಿರಿ. ದೂರದೂರಿಗೆ ಪ್ರಯಾಣ ಮಾಡುವ ನಿಮಗೆ ಕೆಲವು ಸಲಹೆಗಳು ಬೇಕಾಗುವುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಸಿಟ್ಟಿನಿಂದ ಖುಷಿಯ ವಾತಾವರಣ ಹಾಳಾಗುವುದು.

ವೃಶ್ಚಿಕ ರಾಶಿ: ನಿಮಗಿಂತ ಹಿರಿಯರ ಜೊತೆ ವಾಗ್ವಾದ ಮಾಡುವಿರಿ. ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಇಂದು ನಕಾರಾತ್ಮಕತೆಯ ವಿರುದ್ಧ ತೀವ್ರವಾದ ಹೋರಾಟ ಮಾಡುವಿರಿ. ನಿಮ್ಮ ಯೋಜನೆಯನ್ನು ಹೇಳಬಾರದ ಸ್ಥಿತಿಯಲ್ಲಿ ಹೇಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಆರೋಗ್ಯದ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಬಹುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಾದೀತು. ಕೋಪ ಮತ್ತು ಅಹಂಕಾರವು ವಿಷಯಗಳನ್ನು ಹಾಳುಮಾಡಬಹುದು. ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಒಳ್ಳೆಯ ಸ್ಥಾನ ಲಭ್ಯವಾಗಲಿದೆ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವನ್ನು ಸತತ ಪ್ರಯತ್ನದಿಂದ ಪೂರ್ಣಮಾಡುವಿರಿ. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ.

ಧನು ರಾಶಿ: ಪರರ ಸಂಕಟಕ್ಕೆ ಸಣ್ಣ ಸಹಕಾರ ಕೊಡುವಿರಿ. ಇಂದು ನೀವು ಹೊಸ ಉತ್ಸಾಹದಿಂದ ಏನನ್ನಾದರೂ ಅಸಂಬದ್ಧ ಮಾಡಬಹುದು. ಆದಷ್ಟು ನಿಮ್ಮ ನಿಯಂತ್ರಣವನ್ನು ಬಿಟ್ಟು ಕದಲುವುದು ಬೇಡ. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ನಿಮಗೆ ಆಗದಿರುವುದನ್ನು ಬೇರೆಯವರಿಂದ ಮಾಡಿಸುವಿರಿ. ನಿಮ್ಮ ಕಾರ್ಯಕ್ಕೆ ಹಿರಿಯರಿಂದ ಮೆಚ್ಚುಗೆ ಸಿಗಬಹುದು. ವ್ಯಾಪಾರದ ತೊಂದರೆಗಳು ನಿಧಾನವಾಗಿ ಪರಿಹಾರ ಕಾಣುತ್ತವೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ನಿಮ್ಮ ಉತ್ಸಾಹವು ಇತರರಿಗೆ ಮಾರ್ಗದರ್ಶನವಾದೀತು. ಸಾಲ ಅಥವಾ ಸಾಲದ ಭಾದೆ ತಗ್ಗುವ ಲಕ್ಷಣಗಳಿವೆ. ಮನಸ್ಸಿನಲ್ಲಿ ಅಳವಾದ ಯೋಚನೆಗಳಿರಬಹುದು. ಒಂಟಿತನದಿಂದ ದೂರವಿರಲು ಪ್ರಯತ್ನಿಸಿ. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಸಿಕ್ಕ ಆದರದಿಂದ ಉತ್ಸಾಹವು ಬರಲಿದೆ. ನಿಮ್ಮ ಸಾವಧಾನತೆಯು ಕಿರಿಕಿರಿಯನ್ನು ಇತರರಿಗೆ ಕೊಟ್ಟೀತು.

ಮಕರ ರಾಶಿ: ನಿಮ್ಮೆದುರು ವಿದ್ಯಾವಂತರಿಗಿಂತ ಬುದ್ಧಿವಂತರೇ ಗೆಲ್ಲುವರು. ಯಾರನ್ನೋ ಅಪಹಾಸ್ಯ ಮಾಡಲು ಹೋಗಿ ನೋವನ್ನು ಕೊಡುವಿರಿ. ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಪ್ರವಾಸವನ್ನು ಮಾಡಿ ಆನಂದಿಸುವಿರಿ. ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ನಿಮ್ಮನ್ನು ಅರಸಿಕೊಂಡ ಬರುವ ಗೌರವವೇ ನಿಜವಾದ ಸಮ್ಮಾನ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ನೀಡಲಿದೆ. ವೃತ್ತಿಪರ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ನೀವು ಅದನ್ನು ಸಮರ್ಥವಾಗಿ ನಿರ್ವಹಿಸಬಹುದು. ಹಣಕಾಸು ವಿಚಾರಗಳು ಸಾಧಾರಣವಾಗಿರಬಹುದು. ವಾಹನ ಖರೀದಿಯಿಂದ ಮೋಸ ಹೋಗುವಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಯಾರದೋ ಅನುಭವವು ನಿಮ್ಮದಾಗದು. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ದೂರದೃಷ್ಟಿಯು ನಿಮ್ಮ ಚಿಂತನೆಗೆ ಇರಲಿ.

ಕುಂಭ ರಾಶಿ: ಬೆಳೆಸಿದವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ತಾಳ್ಮೆಯಿಂದ ಗಮನಿಸುಕೊಂಡು. ಕೆಟ್ಟ ಸಮಯವು ಬರಬಾರದೆಂದು ಇಷ್ಟದೇವರನ್ನು ಪಾರ್ಥಿಸಿ. ನೂತನ ಗೃಹಾರಂಭದ ಕನಸು‌ ಕಾಣಲಿದ್ದೀರಿ. ನಿಮ್ಮ ಮನಃಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ಯಾವುದೇ ಪರಿವರ್ತನೆಗೆ ಸಮಯವೂ ಅವಶ್ಯಕ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರುವುದು. ಆಸ್ತಿ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದಿರಿ. ಮನಸ್ಸಿನಲ್ಲಿ ಕೆಲವು ಗೊಂದಲಗಳು ಬರುವ ಸಾಧ್ಯತೆ ಇದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಬೇರೆಯವರ‌‌ ನಕಾರಾತ್ಮಕ ಮಾತುಗಳಿಗೆ ಕಿವಿಗೊಟ್ಟರೆ ನಿಮ್ಮ ಕೆಲಸ ಹಿಂದುಳಿಯುವುದು. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ.

ಮೀನ ರಾಶಿ: ಸ್ವಂತ ವಸ್ತುವಾದರೂ ನೀವು ಬಳಸದ ಸ್ಥಿತಿಯನ್ನು ತಂದುಕೊಳ್ಳವಿರಿ. ಇಂದು ನೀವು ಅಕಾರಣವಾಗಿ ಮನಸ್ಸಿನೊಳಗೇ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ಎದುರು ಮಾತನಾಡದೇ ಸುಮ್ಮನಿರಲಾಗದು. ಭವಿಷ್ಯದ ತುಂಬಾ ಆಲೋಚನೆಗಳನ್ನು ಮಾಡುವ ಅವಶ್ಯತೆ ಇಲ್ಲ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಯಾವುದೇ ಸಮಸ್ಯೆಗೆ ಯಾರಿಂದಲಾದರೂ ಪರಿಹಾರವಿದೆ. ಹಣಕಾಸು ವಿಚಾರದಲ್ಲಿ ಚಿಂತೆ ತಗ್ಗುವ ಸಾಧ್ಯತೆ. ಕುಟುಂಬದ ಸದಸ್ಯರೊಂದಿಗೆ ಸೌಹಾರ್ದತೆ ಇರುವದು. ಯಾರಾದರೂ ಸ್ನೇಹಿತರಿಂದ ಸಂತಸದ ಸುದ್ದಿ ಬರಬಹುದು. ನಿಮ್ಮ ಗುರಿಯ ಸಾಧನೆಯವರೆಗೆ ಮೌನವಿದ್ದಷ್ಟೂ ಒಳ್ಳೆಯದೇ. ವಿವಾಹದ ಸಂಭ್ರಮ ಮನೆಯಲ್ಲಿ ಇರುವುದು. ಗೌರವವನ್ನು ನಿರೀಕ್ಷಿಸದಿದ್ದರೂ ನಿಮಗೆ ಇಂದು ಲಭ್ಯವಾಗಲಿದೆ. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ.

-ಲೋಹಿತ ಹೆಬ್ಬಾರ್-8762924271 (what’s app only)

ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್