ಅಶ್ವಿನಿ ಗೌಡಗೆ ಅಹಂಕಾರ ಇತ್ತು: ಪ್ರಶಾಂತ್ ಸಂಬರ್ಗಿ ಹೀಗೆ ಹೇಳಿದ್ದು ಯಾಕೆ?
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಅವರು 12ನೇ ಸೀಸನ್ ಬಗ್ಗೆ ಮಾತಾಡಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿ ಈ ಸೀಸನ್ನ ಸ್ಪರ್ಧಿಗಳ ಕುರಿತು ತಮ್ಮ ಅಭಿಪ್ರಾಯ ಏನೆಂಬುದನ್ನು ಹಂಚಿಕೊಂಡಿದ್ದಾರೆ. ಅಶ್ವಿನಿ ಗೌಡ ಅವರ ಆಟ ಆರಂಭದಲ್ಲಿ ಹೇಗಿತ್ತು ಹಾಗೂ ಈಗ ಹೇಗಿದೆ ಎಂಬುದನ್ನು ಪ್ರಶಾಂತ್ ಸಂಬರ್ಗಿ ವಿವರಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಅಶ್ವಿನಿ ಗೌಡ (Ashwini Gowda), ಗಿಲ್ಲಿ ನಟ, ಕಾವ್ಯ ಶೈವ, ಧ್ರುವಂತ್, ಮ್ಯೂಟೆಂಟ್ ರಘು, ಧನುಷ್, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ ಅವರು ಕೊನೇ ಹಂತದ ತನಕ ಬಂದಿದ್ದಾರೆ. ಗಿಲ್ಲಿ ನಟ ಅವರಿಗೆ ವಿಪರೀತ ಫ್ಯಾನ್ ಫಾಲೋಯಿಂಗ್ ಸೃಷ್ಟಿ ಆಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
‘ನನಗೆ ಮೊದಲು ಹತ್ತು ದಿನ ಅಶ್ವಿನಿ ಗೌಡ ಅವರು ಇಷ್ಟ ಆಗಲಿಲ್ಲ. ಅಹಂಕಾರ, ಜಂಭ, ಕೊಬ್ಬು ಇತ್ತು. ಮಾತಿನಲ್ಲಿ ಹಿಡಿತ ಇರಲಿಲ್ಲ. ಬೇರೆಯವರಿಗೆ ಅವರು ಗೌರವ ಕೊಡುತ್ತಿರಲಿಲ್ಲ. ಆದರೆ ಕ್ರಮೇಣ ಅವರ ಮೇಲೆ ಪ್ರೀತಿ, ಮರ್ಯಾದೆ, ಅನುಕಂಪ ಶುರು ಆಯಿತು. ಇದು ಹೇಗೆ ಎಂದರೆ.. ಎಲ್ಲರೂ ಅವರನ್ನೇ ಟಾರ್ಗೆಟ್ ಮಾಡಿದಾಗ ಹೊರಗಡೆ ತುಂಬಾ ಟ್ರೋಲ್ ಆಗಿದೆ. ಅದು ಅವರಿಗೆ ಗೊತ್ತಿಲ್ಲ. ಸುದೀಪ್ ಅವರು ಹೇಳಿದ್ದನ್ನು ಕೇಳಿ ಅಶ್ವಿನಿ ಗೌಡ ತಿದ್ದಿಕೊಂಡಿದ್ದಾರೆ’ ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.
‘ಗಿಲ್ಲಿ ನಟ ಕಾಮಿಡಿಯನ್ ಆಗಿ ನನಗೆ ಮೊದಲಿನಿಂದಲೂ ಇಷ್ಟ ಆಗುತ್ತಾರೆ. ಹಾಗಾಗಿ ನಾನು ಗಿಲ್ಲಿಯನ್ನು ಬಿಟ್ಟು ಕೊಡೋಕೆ ಆಗಲ್ಲ. ಆದರೆ ಅಶ್ವಿನಿ ಅವರು ಗಟ್ಟಿ ಮನಸ್ಸು, ಇಷ್ಟು ದಿನ ಫೈಟ್ ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ನನಗೆ ಪ್ರೀತಿ, ಅಭಿಮಾನ ಮೂಡಿದೆ. ಆದರೆ ಗೆಲ್ಲೋದು ಗಿಲ್ಲಿಯೇ’ ಎಂದು ಪ್ರಶಾಂತ್ ಸಂಬರ್ಗಿ ಅವರು ಹೇಳಿದ್ದಾರೆ.
‘ಆರಂಭದಲ್ಲಿ ಅಶ್ವಿನಿ ಗೌಡ ಬಹಳ ಗಲಾಟೆ ಮಾಡುತ್ತಿದ್ದರು. ಎಲ್ಲರನ್ನೂ ಅವರು ಎದುರು ಹಾಕಿಕೊಳ್ಳುತ್ತಿದ್ದರು. ತುಂಬಾ ಗಲಾಟೆ ಮಾಡುವವರನ್ನು ಜನರು ಇಷ್ಟಪಡಲ್ಲ. ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಆಗುತ್ತದೆ. ನೀವು ಒಬ್ಬರೇ ಆದಾಗ ಮಾನಸಿಕವಾಗಿ ಕುಗ್ಗುತ್ತೀರಿ. ಅಶ್ವಿನಿ ಗೌಡ ಅವರು ಆರಂಭದಲ್ಲಿ ಫುಲ್ ವೇಗದಲ್ಲಿ ಹೋಗಿ ಪೆಟ್ರೋಲ್ ಖಾಲಿ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಚೆನ್ನಾಗಿ ಆಡಿದ್ದಾರೆ. ಅವರು ಆಟ ಬದಲಾಯಿಸಿಕೊಂಡಿದ್ದಾರೆ. ನಾನು ನನ್ನ ಅಭಿಪ್ರಾಯ ಬದಲಾಯಿಸಿಕೊಂಡಿದ್ದೇನೆ’ ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.
ಇದನ್ನೂ ಓದಿ: ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಈ ಬಾರಿಯಾದರೂ ಮಹಿಳಾ ಸ್ಪರ್ಧಿಗೆ ಬಿಗ್ ಬಾಸ್ ಕಪ್ ಸಿಗುತ್ತಾ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಇದೆ. ಆದರೆ ಪ್ರಶಾಂತ್ ಸಂಬರ್ಗಿ ಅವರು ಈ ಬಾರಿ ಖಂಡಿತವಾಗಿಯೂ ಗಿಲ್ಲಿಯೇ ವಿನ್ ಆಗುತ್ತಾರೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ನೂರಾರು ದಿನಗಳ ಜರ್ನಿ ಮುಕ್ತಾಯ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



