ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟ ಫ್ಯಾನ್ಸ್; ಧನ್ಯವಾದ ಹೇಳಿದ ಗಿಲ್ಲಿ ನಟ
ಬಿಗ್ ಬಾಸ್ ಗಿಲ್ಲಿ ನಟ ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ ಹಿಂಬಾಲಕರನ್ನು ಗಳಿಸಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಅಭಿಮಾನಿಗಳು ಅವರ ಆಸೆಯನ್ನು ಪೂರೈಸಿದ್ದಾರೆ. ಕೇವಲ 24 ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಸೇರಿದ್ದು, ಅಭಿಮಾನಿಗಳ ಶಕ್ತಿಯನ್ನು ತೋರಿಸುತ್ತದೆ. ಈ ಸಾಧನೆ ಅವರಿಗೆ ಬಿಗ್ ಬಾಸ್ ಗೆಲ್ಲಲು ಇನ್ನಷ್ಟು ಬೆಂಬಲ ನೀಡಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿರುವ ಗಿಲ್ಲಿ ನಟ ಅವರು ಇತ್ತೀಚೆಗೆ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಸೇರುವಾಗ ಇನ್ಸ್ಟಾಗ್ರಾಮ್ನಲ್ಲಿ ಇದ್ದಿದ್ದು ಕೇವಲ 1 ಲಕ್ಷದ 9 ಸಾವಿರ ಹಿಂಬಾಲಕರು. ಈಗ ಈ ಸಂಖ್ಯೆ 1 ಮಿಲಿಯನ್ ದಾಟಿದೆ. ಕ್ಷಣ ಕ್ಷಣಕ್ಕೂ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಬಿಗ್ ಬಾಸ್ ಪೂರ್ಣಗೊಳ್ಳುವ ವೇಳೆಗೆ ಈ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
ಕಳೆದ ಕೆಲ ದಿನಗಳಿಂದ ಗಿಲ್ಲಿ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಇದಕ್ಕೆ ಕಾರಣ ಆಗಿದ್ದು, ಗಿಲ್ಲಿ ಅವರ ಒಂದು ಹೇಳಿಕೆ. ಅವರು ಕಾವ್ಯಾ ಬಳಿ ಮಾತನಾಡುವಾಗ, ‘ಒಂದ್ ಮಿಲಿಯನ್ ಫಾಲೋವರ್ಸ್ ಆಗಿದ್ರೆ ಕಾವು’ ಎಂದು ಹೇಳಿಕೊಂಡಿದ್ದರು. ಇದನ್ನು ಆದೇಶ ಎಂಬಂತೆ ಪಾಲಿಸಿದ ಫ್ಯಾನ್ಸ್ ಗಿಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಿಸಿದ್ದಾರೆ. ತಮ್ಮ ಪರಿಚಯದವರ ಇನ್ಸ್ಟಾ ಖಾತೆಗಳಿಂದ ಗಿಲ್ಲಿ ಅಕೌಂಟ್ಗೆ ಫಾಲೋ ಕೊಟ್ಟಿರಬಹುದು ಎಂದು ಊಹಿಸಲಾಗುತ್ತಿದೆ. ಕೇವಲ 24 ಗಂಟೆಯಲ್ಲಿ ಲಕ್ಷಕ್ಕೂ ಅಧಿಕ ಹಿಂಬಾಲಕರು ಸಿಕ್ಕಿದ್ದಾರೆ.
View this post on Instagram
ರಜತ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಗಿಲ್ಲಿ ನಟ ಇದೇ ಮಾತನ್ನು ಹೇಳಿದ್ದರು. ‘ನಾನು ಹೊರ ಹೋಗುವಾಗ ಇನ್ಸ್ಟಾ ಖಾತೆಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಬೇಕಿತ್ತು’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಜತ್ ಅವರು, ‘ಹುಡುಗರ ಅಕೌಂಟ್ಗೆಲ್ಲ ಯಾರು ಫಾಲೋ ಕೊಡ್ತಾರೆ ಹೋಗೋ’ ಎಂದಿದ್ದರು. ಆದರೆ, ಈ ಕಲ್ಪನೆ ತಪ್ಪು ಎಂಬುದು ಗಿಲ್ಲಿ ಕಟ್ಟಾಭಿಮಾನಿಗಳು ಸುಳ್ಳು ಮಾಡಿ ತೋರಿಸಿದ್ದಾರೆ. 1 ಮಿಲಿಯನ್ ಫಾಲೋವರ್ಸ್ ಆಗಿದ್ದಕ್ಕೆ ಗಿಲ್ಲಿ ಇನ್ಸ್ಟಾ ಖಾತೆ ಮೂಲಕ ಧನ್ಯವಾದ ತಿಳಿಸಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್
ಕಲರ್ಸ್ ಕನ್ನಡದ ಯಾವುದೇ ಪ್ರೋಮೋ ಬಿಡುಗಡೆ ಆದರೂ ಅದಕ್ಕೆ ಗಿಲ್ಲಿಯ ಕಮೆಂಟ್ ಇರುತ್ತದೆ. ಸತೀಶ್ ಗಿಲ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿರೋ ಪೋಸ್ಟ್ಗೆ ಗಿಲ್ಲಿ, ಗಿಲ್ಲಿ ಎಂದು ಕಮೆಂಟ್ ಹಾಕಿದ ಉದಾಹರಣೆ ಸಾಕಷ್ಟಿದೆ. ಗಿಲ್ಲಿ ನಟ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಅವರೇ ಈ ಬಾರಿ ಕಪ್ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಶಯ. ಅಶ್ವಿನಿ ಗೌಡ, ಧನುಶ್ ಗಿಲ್ಲಿಗೆ ಸ್ಪರ್ಧೆ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




