AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ ಆಟಕ್ಕೆ ದಂಗಾದ ಇಡೀ ಮನೆ; ಭೇಷ್ ಎಂದ ಎದುರಾಳಿ ರಘು, ರಕ್ಷಿತಾ

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಫಿನಾಲೆ ಸಮೀಪಿಸುತ್ತಿದ್ದಂತೆ ಟಾಸ್ಕ್‌ಗಳಲ್ಲಿ ಮಿಂಚಿದ್ದಾರೆ. ‘ಟಾಪ್ 6’ ರೇಸ್‌ಗಾಗಿ ನಡೆದ ಕಠಿಣ ಟಾಸ್ಕ್‌ನಲ್ಲಿ ಧ್ರುವಂತ್ ಜೊತೆ ಸೇರಿ ದಾಖಲೆ ಮುರಿದು ಗೆದ್ದಿದ್ದಾರೆ. ಎದುರಾಳಿಗಳಾದ ರಘು ಮತ್ತು ರಾಶಿಕಾ ನೀರು ಎರಚಿದರೂ ಸ್ಥಿರವಾಗಿ ನಿಂತು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಅವರ ಅದ್ಭುತ ಆಟಕ್ಕೆ ರಕ್ಷಿತಾ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಶ್ವಿನಿ ಆಟಕ್ಕೆ ದಂಗಾದ ಇಡೀ ಮನೆ; ಭೇಷ್ ಎಂದ ಎದುರಾಳಿ ರಘು, ರಕ್ಷಿತಾ
ಅಶ್ವಿನಿ-ರಾಶಿಕಾ
ರಾಜೇಶ್ ದುಗ್ಗುಮನೆ
|

Updated on: Jan 08, 2026 | 12:19 PM

Share

ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವ ಎಷ್ಟು ಮುಖ್ಯವಾಗುತ್ತದೆಯೋ ಟಾಸ್ಕ್ ಆಡೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಟಾಸ್ಕ್​​​ ಉತ್ತಮವಾಗಿ ಆಡುತ್ತಾರೆ ಎಂದರೆ ಅವರಿಗೆ ಹೆಚ್ಚು ಸ್ಕೋಪ್ ಸಿಗುತ್ತದೆ. ಈ ಬಾರಿ ಎಲ್ಲರೂ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಟವನ್ನು ಹಲವು ಬಾರಿ ಹಾಳು ಮಾಡಿದ್ದಾರೆ. ಅಶ್ವಿನಿ ಅವರು ಈವರೆಗೆ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಿಲ್ಲ. ಆದರೆ, ಫಿನಾಲೆ ಸಮೀಪಿಸುವಾಗ ಅವರು ಆಡಿದ ರೀತಿ ಗಮನ ಸೆಳೆದಿದೆ. ಎದುರಾಳಿಗಳು ಕೂಡ ಭೇಷ್ ಎಂದಿದ್ದಾರೆ.

ಅಶ್ವಿನಿ ಗೌಡ ಅವರು ತಮ್ಮ ಮಾತುಗಳಿಂದ ಈ ಮೊದಲಿನಿಂದಲೂ ಚರ್ಚೆ ಆಗುತ್ತಾ ಬರುತ್ತಿದ್ದಾರೆ. ಅವರು ಕೆಟ್ಟ ಪದ ಬಳಕೆ ಮಾಡಿ ಚರ್ಚೆ ಹುಟ್ಟುಹಾಕಿದ್ದು ಇದೆ. ಅವರು ಕೆಲವು ಟಾಸ್ಕ್​​ಗಳಲ್ಲಿ ಉತ್ತಮವಾಗಿ ಆಡಿದ್ದು ಇದೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗೋಕೆ ಅವರಿಂದ ಸಾಧ್ಯವಾಗಿಲ್ಲ. ಈಗ ಜನವರಿ 7ರ ಎಪಿಸೋಡ್​​​ನಲ್ಲಿ ಅವರು ಉತ್ತಮವಾಗಿ ಟಾಸ್ಕ್ ಆಡಿದ್ದಾರೆ.

‘ಟಾಪ್ 6’ ರೇಸ್​ಗೆ ಸ್ಪರ್ಧಿಗಳಾಗಲು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಅನುಸಾರ ಸ್ಪರ್ಧಿಗಳು ಒಂದು ಕಂಬದ ಮಾದರಿಯ ವಸ್ತುವನ್ನು ಹಿಡಿದು ನಿಲ್ಲಬೇಕು. ಹಿಂಭಾಗದಲ್ಲಿ ಅವರಿಗೆ ತೂಕವನ್ನು ಹೊರಿಸಲಾಗಿತ್ತದೆ. ಇದರ ಜೊತೆಗೆ ಎದುರಿದ್ದವರು ನೀರನ್ನು ಎರಚುತ್ತಾರೆ. ರಘು ಹಾಗೂ ರಾಶಿಕಾ ಒಂದು ತಂಡವಾದರೆ, ಧ್ರುವಂತ್ ಹಾಗೂ ಅಶ್ವಿನಿ ಮತ್ತೊಂದು ಟೀಂನಲ್ಲಿ ಇದ್ದರು.

ಇದನ್ನೂ ಓದಿ: ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ್

ರಾಶಿಕಾ 29.51 ನಿಮಿಷ ಹಾಗೂ ರಘು ಅವರು 70.10 ನಿಮಿಷ ನಿಂತಿದ್ದರು. ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರು 70 ನಿಮಿಷದ ದಾಖಲೆಯನ್ನು ಮುರಿದು ಗೆಲುವು ಕಂಡಿದ್ದಾರೆ. ಅಶ್ವಿನಿ ಹಾಗೂ ಧ್ರುವಂತ್ ಅವರು ಅಷ್ಟಾಗಿ ನೀರೆರಚಲು ಹೋಗಿರಲಿಲ್ಲ. ಅಶ್ವಿನಿ-ಧ್ರುವಂತ್ ನಿಂತಾಗ ರಘು ಹಾಗೂ ರಾಶಿಕಾ ಜೋರಾಗಿಯೇ ನೀರು ಎರಚಿದ್ದರು. ಆದರೆ, ಇದೆಲ್ಲವನ್ನೂ ಎದುರಿಸಿ ಅವರು ನಿಂತರು. ಅವರ ಆಟ ನೋಡಿ ರಕ್ಷಿತಾ ಹಾಗೂ ರಘು ಮೆಚ್ಚಿಕೊಂಡರು. ‘ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ’ ಎಂದು ರಕ್ಷಿತಾ ಅವರು ಅಶ್ವಿನಿಗೆ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ