ರಘು ಮೇಲಿನ ಎಮೋಷನ್: ‘ಟಿಕೆಟ್ ಟು ಟಾಪ್ 6’ ಆಟ ಬಿಟ್ಟುಕೊಟ್ಟ ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಅವರು ಅಷ್ಟು ಸುಲಭಕ್ಕೆ ಸೋಲುವವರಲ್ಲ. ಆದರೆ ರಘು ಮೇಲಿನ ಎಮೋಷನ್ಗೆ ಅವರು ಸೋತಿದ್ದಾರೆ. ‘ಟಿಕೆಟ್ ಟು ಟಾಪ್ 6’ ಟಾಸ್ಕ್ ಆಡುವಾಗ ರಕ್ಷಿತಾ ಶೆಟ್ಟಿ ಔಟ್ ಆಗಿ, ರಘು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಟಾಪ್ 6 ಆಟದಲ್ಲಿ ಸ್ಪರ್ಧಿಸುವ ಅರ್ಹತೆ ಇಲ್ಲದಂತಾಗಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ..

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಈಗ ಅಂತಿಮ ಹಂತದ ಹಣಾಹಣಿಗೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಎಲ್ಲರ ನಡುವೆ ಪೈಪೋಟಿ ಜಾಸ್ತಿ ಆಗಿದೆ. ಈ ವಾರ ‘ಟಿಕೆಟ್ ಟು ಟಾಪ್ 6’ ಟಾಸ್ಕ್ ನಡೆಯುತ್ತಿದೆ. ಅಂದರೆ, ಅಂತಿಮ 6 ಮಂದಿಯ ನಡುವೆ ನಡೆಯಲಿರುವ ಸ್ಪರ್ಧೆಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸಲು ಟಾಸ್ಕ್ ನೀಡಲಾಗುತ್ತಿದೆ. ಈ ಆಟದಲ್ಲಿ ಈಗಾಗಲೇ ಧ್ರುವಂತ್ ವಿರುದ್ಧ ಸೋತು ಗಿಲ್ಲಿ ನಟ ಅವರು ಔಟ್ ಆಗಿದ್ದಾರೆ. ಅಚ್ಚರಿ ಎಂದರೆ, ರಕ್ಷಿತಾ ಶೆಟ್ಟಿ (Rakshitha Shetty) ಅವರು ಸ್ವತಃ ಆಟದಿಂದ ಹೊರಗೆ ಬಂದಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಮ್ಯೂಟೆಂಟ್ ರಘು ಮೇಲಿನ ಎಮೋಷನ್!
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಎಮೋಷನ್ಗೆ ಬೆಲೆ ಇಲ್ಲ. ತಾವೇ ಗೆಲ್ಲಬೇಕು ಎಂಬ ಕಾರಣಕ್ಕೆ ಸ್ನೇಹವನ್ನು ಬಲಿಕೊಡುತ್ತಾರೆ. ಹಲವು ದಿನಗಳಿಂದ ಒಟ್ಟಿಗೆ ಇದ್ದವರು ಒಂದು ಆಟಕ್ಕಾಗಿ ಕಿರಿಕ್ ಮಾಡಿಕೊಳ್ಳುತ್ತಾರೆ. ಆದರೆ ಈ ವಾರ ರಕ್ಷಿತಾ ಶೆಟ್ಟಿ ಅವರು ಎಮೋಷನ್ಗೆ ಒಳಗಾಗಿದ್ದಾರೆ. ರಘು ಅವರನ್ನು ಸೇವ್ ಮಾಡುವ ಸಲುವಾಗಿ ರಕ್ಷಿತಾ ಶೆಟ್ಟಿ ಸ್ವತಃ ಆಟದಿಂದ ಹೊರಗೆ ಬಂದರು.
ಟಾಸ್ಕ್ ವೇಳೆ ರಾಶಿಕಾ ಶೆಟ್ಟಿ, ಮ್ಯೂಟೆಂಟ್ ರಘು ಮತ್ತು ರಕ್ಷಿತಾ ಶೆಟ್ಟಿ ಅವರು ಒಂದು ತಂಡವಾಗಿ ಆಟ ಆಡಿದರು. ಆದರೆ ಅವರ ತಂಡಕ್ಕೆ ಹಿನ್ನಡೆ ಆಯಿತು. ಹಾಗಾಗಿ ಒಬ್ಬರನ್ನು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಇಡಬೇಕು ಎಂದು ಸೂಚಿಸಲಾಯಿತು. ಮೂವರೂ ಒಟ್ಟಿಗೆ ಚರ್ಚಿಸಿ ಒಬ್ಬರನ್ನು ಹೊರಗೆ ಇಡಬೇಕಿತ್ತು.
ರಾಶಿಕಾ ಶೆಟ್ಟಿ ಅವರನ್ನು ಆಟದಿಂದ ಹೊರಗೆ ಇಡಲು ರಘು ಮತ್ತು ರಕ್ಷಿತಾ ಆರಂಭದಲ್ಲಿ ತೀರ್ಮಾನಿಸಿದರು. ಆದರೆ ಆ ತೀರ್ಮಾನಕ್ಕೆ ರಾಶಿಕಾ ಒಪ್ಪಿಕೊಳ್ಳಲಿಲ್ಲ. ಒಂದು ವೇಳೆ ಒಮ್ಮತದ ನಿರ್ಧಾರಕ್ಕೆ ಬರದೇ ಇದ್ದರೆ ಮೂವರಿಗೂ ಅವಕಾಶ ತಪ್ಪುತ್ತಿತ್ತು. ಹಾಗಾಗಿ ಅಂತಿಮ ಹಂತದಲ್ಲಿ ರಘು ಅವರು ತಾನೇ ಔಟ್ ಆಗಲು ನಿರ್ಧರಿಸಿದರು. ಆದರೆ ಆಗ ರಕ್ಷಿತಾ ಶೆಟ್ಟಿ ಅವರು ಮನಸ್ಸು ಬದಲಾಯಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್
ಮ್ಯೂಟೆಂಟ್ ರಘು ಅವರನ್ನು ರಕ್ಷಿತಾ ಶೆಟ್ಟಿ ಅವರು ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಅವರಿಬ್ಬರು ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ. ರಘು ಮೇಲೆ ರಕ್ಷಿತಾ ಶೆಟ್ಟಿ ಅವರಿಗೆ ಬಹಳ ಪ್ರೀತಿ ಇದೆ. ಹಾಗಾಗಿ ರಘು ಅವರು ಆಟದಿಂದ ಹೊರಗೆ ಉಳಿಯುವುದು ರಕ್ಷಿತಾಗೆ ಇಷ್ಟ ಆಗಲಿಲ್ಲ. ಆದ್ದರಿಂದ ಎಮೋಷನ್ಗೆ ಒಳಗಾಗಿ ಅವರು ತಮ್ಮ ಆಟವನ್ನು ಬಿಟ್ಟುಕೊಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




