ಗಿಲ್ಲಿ ಏಕೆ ಇಷ್ಟ ಆಗಲ್ಲ? ಕಾರಣ ಕೊಟ್ಟ ರಾಶಿಕಾ ಶೆಟ್ಟಿ
ಬಿಗ್ ಬಾಸ್ ಕನ್ನಡ 12ರ ಅಚ್ಚುಮೆಚ್ಚಿನ ಸ್ಪರ್ಧಿ ಗಿಲ್ಲಿಯ ಮನರಂಜನೆಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ, ರಾಶಿಕಾ ಶೆಟ್ಟಿ ಗಿಲ್ಲಿಯ ವ್ಯಕ್ತಿತ್ವದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಟಾಸ್ಕ್ ವೇಳೆ ನಡೆದ ಜಗಳ ಇದಕ್ಕೆ ಕಾರಣ. ಗಿಲ್ಲಿಯನ್ನು ಯಾಕೆ ಇಷ್ಟಪಡುವುದಿಲ್ಲ ಎಂದು ರಾಶಿಕಾ ಕಾವ್ಯಾ ಜೊತೆ ಹಂಚಿಕೊಂಡಿದ್ದಾರೆ. ಈ ಹೇಳಿಕೆ ಇದೀಗ ಚರ್ಚೆಯಲ್ಲಿದೆ.

ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ಫೇವರಿಟ್ ಹೀರೋ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಗಿಲ್ಲಿ ಮಾಡುವ ಹಾಸ್ಯಕ್ಕೆ ದೊಡ್ಡ ಅಭಿಮಾನಿವರ್ಗ ಇದೆ. ಆದರೆ, ಕೆಲವರು ಗಿಲ್ಲಿಯನ್ನು ಇಷ್ಟಪಡುತ್ತಿಲ್ಲ. ಇದರಲ್ಲಿ ಬಿಗ್ ಬಾಸ್ ಸ್ಪರ್ಧಿ ರಾಶಿಕಾ ಕೂಡ ಒಬ್ಬರು. ಅವರು ಏಕೆ ಇಷ್ಟ ಆಗಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ.
ಮೂರು ತಂಡಗಳನ್ನಾಗಿ ಮಾಡಿಕೊಂಡು ಟಾಸ್ಕ್ ಆಡುವಂತೆ ಬಿಗ್ ಬಾಸ್ ಸೂಚಿಸಿದ್ದರು. ಈ ವೇಳೆ ರಾಶಿಕಾ ಹಾಗೂ ರಘು ಒಂದು ತಂಡವಾಗುವ ಆಲೋಚನೆಯಲ್ಲಿ ಇದ್ದುರು. ಮತ್ತೊಂದು ಸ್ಥಾನಕ್ಕೆ ರಕ್ಷಿತಾನ ಆಯ್ಕೆ ಮಾಡಿಕೊಳ್ಳೋಣ ಎಂದು ರಘು ವಾದಿಸುತ್ತಿದ್ದರು. ಇದು ರಾಶಿಕಾ ಶೆಟ್ಟಿಗೆ ಇಷ್ಟ ಆಗಿಲ್ಲ. ಅವರು ಇದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಆಗ ಮಧ್ಯ ಪ್ರವೇಶಿಸಿದ ಗಿಲ್ಲಿ ಅವರು ರಾಶಿಕಾ ಜೊತೆ ಜಗಳ ಆಡಿದ್ದಾರೆ. ಇದು ರಾಶಿಕಾಗೆ ಇಷ್ಟ ಆಗಿಲ್ಲ. ಅವರು ಗಿಲ್ಲಿ ಜೊತೆ ಜಗಳವಾಡಿದ್ದಾರೆ.
ಆ ಬಳಿಕ ರಾಶಿಕಾ ಅವರು ಈ ವಿಷಯವನ್ನು ಕಾವ್ಯಾ ಜೊತೆ ಚರ್ಚೆ ಮಾಡಿದ್ದಾರೆ. ‘ಗಿಲ್ಲಿ ವ್ಯಕ್ತಿತ್ವ ಹಾಗೂ ಬುದ್ಧಿ ಬಿಟ್ಟು ಯಾವತ್ತೂ ಬಾಳಲ್ಲ. ಇದಕ್ಕೆ ಗಿಲ್ಲಿ ಇಷ್ಟ ಆಗೋದಿಲ್ಲ’ ಎಂದು ನೇರವಾಗಿ ರಾಶಿಕಾ ಹೇಳಿದರು. ಈ ವಿಷಯ ಚರ್ಚೆ ಆಗುತ್ತಿದೆ. ರಾಶಿಕಾ ಮಾತನ್ನು ಅನೇಕರು ಖಂಡಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್
ಬಿಗ್ ಬಾಸ್ ಮನೆಯಲ್ಲಿರೋ ಗಿಲ್ಲಿ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅವರು ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ. ಯಾರು ಕಪ್ ಎತ್ತುತ್ತಾರೆ ಎಂಬ ವಿಷಯ ಅಂದು ರಿವೀಲ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




