ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್
ಗಿಲ್ಲಿ ನಟ ಅವರು ಬಿಗ್ ಬಾಸ್ ಆಟದ ಕೊನೇ ಹಂತದಲ್ಲಿ ಎಡವಿದ್ದಾರೆ. ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ‘ಟಿಕೆಟ್ ಟು ಟಾಪ್ 6’ ಟಾಸ್ಕ್ ವೇಳೆ ಧ್ರುವಂತ್ ಹಾಗೂ ಗಿಲ್ಲಿ ನಟ ನಡುವೆ ಭಾರಿ ಪೈಪೋಟಿ ನಡೆಯಿತು. ಈ ಟಾಸ್ಕ್ ವೇಳೆ ಗಿಲ್ಲಿ ನಟ ಅವರು ಸೋತರು. ಇದರಿಂದ ಧ್ರುವಂತ್ ಅವರಿಗೆ ಫಿನಾಲೆ ಹಾದಿ ಸುಲಭವಾಯಿತು.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಈಗ ‘ಟಿಕೆಟ್ ಟು ಫಿನಾಲೆ’ (Ticket to Finale) ಟಾಸ್ಕ್ ನಡೆಯುತ್ತಿದೆ. ಅಂದರೆ ಈ ಟಾಸ್ಕ್ನಲ್ಲಿ ಗೆಲ್ಲುವವರು ಫಿನಾಲೆಯ ಟಿಕೆಟ್ ಪಡೆಯುತ್ತಾರೆ. ಆದರೆ ಈ ಟಾಸ್ಕ್ ಪ್ರಕ್ರಿಯೆಯ ಆರಂಭದಲ್ಲೇ ಒಂದು ಶಾಕ್ ನೀಡಲಾಗಿದೆ. ಒಬ್ಬರನ್ನು ಟಾಸ್ಕ್ನಿಂದ ಹೊರಗಿಡಲು ನಿರ್ಧರಿಸಲಾಗಿದೆ. ಅಚ್ಚರಿ ಎಂದರೆ ಈ ಪ್ರಕ್ರಿಯೆಯಲ್ಲಿ ಧ್ರುವಂತ್ (Dhruvanth) ಮತ್ತು ಗಿಲ್ಲಿ ನಟ ನಡುವೆ ಪೈಪೋಟಿ ಬೆಳೆಯಿತು. ಮೊದಲ ಹಂತದಲ್ಲೇ ಧ್ರುವಂತ್ ಅವರು ಗಿಲ್ಲಿಯನ್ನು ಸೋಲಿಸಿದರು. ಆದ್ದರಿಂದ ಗಿಲ್ಲಿ ನಟ (Gilli Nata) ಅವರು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಉಳಿಯುವಂತಾಗಿದೆ.
ಆರಂಭದಲ್ಲಿ ಒಂದು ಟ್ವಿಸ್ಟ್ ನೀಡಲಾಗಿತ್ತು. ಮನೆಯ ಕ್ಯಾಪ್ಟನ್ ಧನುಷ್ ಅವರು ಒಬ್ಬರನ್ನು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಇಡಬೇಕು ಎಂದು ಸೂಚಿಸಲಾಯಿತು. ಆಗ ಧನುಷ್ ಅವರು ಧ್ರುವಂತ್ ಹೆಸರನ್ನು ಹೇಳಿದರು. ಆದರೆ ಧ್ರುವಂತ್ ಅವರು ತಮ್ಮನ್ನು ತಾವು ಸಮರ್ಥರು ಎಂದು ಸಾಬೀತು ಮಾಡಿಕೊಳ್ಳಲು ಒಂದು ಅವಕಾಶ ನೀಡಲಾಯಿತು.
ತಮ್ಮ ಎದುರಾಳಿಯನ್ನು ಆಯ್ಕೆ ಮಾಡಿಕೊಂಡು ಟಾಸ್ಕ್ ಗೆಲ್ಲುವಂತೆ ಸವಾಲು ಒಡ್ಡಲಾಯಿತು. ಆಗ ಧ್ರುವಂತ್ ಅವರು ಗಿಲ್ಲಿಯನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಇಬ್ಬರ ನಡುವೆ ಟಾಸ್ಕ್ ನಡೆಯಿತು. ತೀವ್ರ ಹಣಾಹಣಿ ಬಳಿಕ ಧ್ರುವಂತ್ ಅವರು ವಿನ್ ಆದರು. ಆಟದಲ್ಲಿ ಸೋತ ಗಿಲ್ಲಿ ನಟ ಅವರು ‘ಟಿಕೆಟ್ ಟು ಟಾಪ್ 6’ ಆಟದಿಂದ ಔಟ್ ಆದರು.
ಗಿಲ್ಲಿ ಅವರಿಗೆ ಇದರಿಂದ ತೀವ್ರ ಹಿನ್ನಡೆ ಆಗಿದೆ. ಹಾಗಾಗಿ ಕಾವ್ಯಾ, ರಘು, ರಾಶಿಕಾ, ರಕ್ಷಿತಾ, ಧನುಷ್ ಅವರಿಗೆ ಶಾಕ್ ಆಗಿದೆ. ಅಲ್ಲದೇ ಗಿಲ್ಲಿಯನ್ನು ಬೆಂಬಲಿಸುವ ಪ್ರೇಕ್ಷಕರಿಗೂ ಬೇಸರ ಆಗಿದೆ. ಮುಂದಿನ ದಿನಗಳಲ್ಲಿ ಗಿಲ್ಲಿ ಅವರ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಯೋಚಿಸಲಾಗುತ್ತಿದೆ. ಫಿನಾಲೆಯ ಟಿಕೆಟ್ ಪಡೆಯಲು ಎಲ್ಲರೂ ಕಷ್ಟಪಟ್ಟು ಆಟ ಆಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಧನುಷ್ ಬಿಟ್ಟು ಇಡೀ ಮನೆ ನಾಮಿನೇಟ್; ಗಿಲ್ಲಿಗೆ ದೊಡ್ಡ ಶಾಕ್
ಮೊದಲಿನಿಂದಲೂ ಧ್ರುವಂತ್ ಅವರನ್ನು ಗಿಲ್ಲಿ ನಟ ಸಿಕ್ಕಾಪಟ್ಟೆ ಹೀಯಾಳಿಸುತ್ತಿದ್ದರು. ಅಲ್ಲದೇ ಧ್ರುವಂತ್ ಅವರು ಅಶ್ವಿನಿ ಗೌಡ ಜೊತೆ ಕ್ಲೋಸ್ ಆಗಿರುವ ಕಾರಣಕ್ಕೆ ಅವರನ್ನು ಗಿಲ್ಲಿ ನಟ ಟಾರ್ಗೆಟ್ ಮಾಡಿದ್ದರು. ಆದರೆ ಈಗ ಕೊನೇ ಹಂತದಲ್ಲಿ ಧ್ರುವಂತ್ ಅವರಿಂದಲೇ ಗಿಲ್ಲಿ ನಟ ಸೋಲುವಂತಾಯಿತು. ಹಾಗಾಗಿ ಧ್ರುವಂತ್ ಅವರು ಈ ಗೆಲುವಿನ ಬಳಿಕ ಭರ್ಜರಿಯಾಗಿ ಸಂಭ್ರಮಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




