‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವಿನ ಜಗಳ ತಾರಕಕ್ಕೇರಿದೆ. ಗಿಲ್ಲಿಗೆ ನೇರವಾಗಿ ಎಚ್ಚರಿಕೆ ನೀಡಿದ ಅಶ್ವಿನಿ, "ನಿನ್ನ ಟೈಮ್ ಸ್ಟಾರ್ಟ್ ಆಗಿದೆ" ಎಂದಿದ್ದಾರೆ. ನಾಮಿನೇಷನ್ ವೇಳೆ ನಡೆದ ಈ ವಾಕ್ಸಮರದಲ್ಲಿ ಗಿಲ್ಲಿ ಆರೋಪಗಳಿಗೆ ಅಶ್ವಿನಿ ಕೆರಳಿದರು. ನಂತರ ತಾಳ್ಮೆ ಕಳೆದುಕೊಂಡು ಬಿಗ್ ಬಾಸ್ ಬಳಿ ವಿಶೇಷ ಮನವಿ ಮಾಡಿಕೊಂಡರು. ಈ ಘಟನೆ ಜನವರಿ 5ರ ಸಂಚಿಕೆಯಲ್ಲಿ ಹೈಲೈಟ್ ಆಗಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಹಾವು ಮುಂಗುಸಿ ರೀತಿ ಯಾವಾಗಲೂ ಕಚ್ಚಾಡುತ್ತಾ ಇರುತ್ತಾರೆ. ಇವರ ಮಧ್ಯೆ ಆಗಾಗ ಕಿರಿಕ್ಗಳು ಆಗುತ್ತಲೇ ಇರುತ್ತವೆ. ಅಶ್ವಿನಿ ಗೌಡ ಅವರು ಈ ಮೊದಲು ಸಿಟ್ಟನ್ನು ಬಿಟ್ಟು ಮೌನಕ್ಕೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಪರಿಸ್ಥಿತಿ ಹಾಗೂ ಗಿಲ್ಲಿ ನಟನ ಚುಚ್ಚು ಮಾತುಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ. ಅವರು ಮತ್ತೆ ಮತ್ತೆ ಕೆರಳುತ್ತಿದ್ದಾರೆ. ಈಗ ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ. ಜನವರಿ 5ರ ಎಪಿಸೋಡ್ನಲ್ಲಿ ಇದು ಹೈಲೈಟ್ ಆಗಿದೆ.
ಗಿಲ್ಲಿ ಅವರು ಅಶ್ವಿನಿ ಅವರನ್ನು ನಾಮಿನೇಟ್ ಮಾಡಿದರು. ಈ ವೇಳೆ ಅಶ್ವಿನಿ ವಿರುದ್ಧ ಗಿಲ್ಲಿ ಒಂದಷ್ಟು ಆರೋಪಗಳನ್ನು ಮಾಡಿದರು. ಇತ್ತೀಚೆಗೆ ರಾಶಿಕಾ ವಿರುದ್ಧ ಆರೋಪ ಮಾಡುವಾಗ ಅಶ್ವಿನಿ ಅವರು, ‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’ ಎಂದು ಆರೋಪಿಸಿದ್ದರು. ಇದನ್ನು ಗಿಲ್ಲಿ ಖಂಡಿಸಿದ್ದಾರೆ. ‘ಅಶ್ವಿನಿ ಗೌಡ 2.O’ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿಯನ್ನು ಕೊಚ್ಚೆ ಎಂದು ಕರೆದರು ಅಶ್ವಿನಿ.
ಆ ಬಳಿಕ ಅಶ್ವಿನಿ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದರು. ಈ ವೇಳೆಯೂ ಕಿತ್ತಾಟ ನಡೆದಿದೆ. ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’ ಎಂದು ಅಶ್ವಿನಿ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಗಿಲ್ಲಿ ತಲೆಕೆಡಿಸಿಕೊಳ್ಳಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕೆ ಎಲ್ಲರೂ ಪದೇ ಪದೇ ಅಶ್ವಿನಿ ಅವರನ್ನು ಟ್ರಿಗರ್ ಮಾಡಿದರು. ಇದರಿಂದ ಅಶ್ವಿನಿ ಅವರಿಗೆ ಕೋಪ ಬಂದಿದೆ. ಆದರೂ ಅದನ್ನು ಅವರ ಅದುಮಿಟ್ಟುಕೊಂಡರು. ‘ಇದೆಲ್ಲವನ್ನೂ ಸಹಿಸಿಕೊಳ್ಳಲು ತಾಳ್ಮೆ ಕೊಡಿ’ ಎಂದು ಬಿಗ್ ಬಾಸ್ ಬಳಿ ವಿಶೇಷ ಮನವಿ ಮಾಡಿಕೊಂಡರು.
ಇದನ್ನೂ ಓದಿ: ರಕ್ಷಿತಾ ಶೆಟ್ಟಿಯಿಂದ ಮ್ಯಾನ್ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು?
ಅಶ್ವಿನಿ ಗೌಡ ಅವರು ಫಿನಾಲೆಗೆ ಏರುವ ಕನಸು ಕಾಣುತ್ತಿದ್ದಾರೆ. ಅವರು ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಗಿಲ್ಲಿ ನಟ ಅವರು ಅವರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Tue, 6 January 26




