ಬಿಗ್ ಬಾಸ್ ಮನೆ ಒಳಗೆ ‘ಡೆವಿಲ್’ ಬಗ್ಗೆ ಗಿಲ್ಲಿ ಮಾತಾಡಿದ್ದ: ಅಸಲಿ ವಿಷಯ ತಿಳಿಸಿದ ಸ್ಪಂದನಾ
ಡಿಸೆಂಬರ್ 11ರಂದು ರಿಲೀಸ್ ಆದ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ ಅವರಿಗೂ ಒಂದು ಪಾತ್ರವಿದೆ. ಹಾಗಾಗಿ ಬಿಗ್ ಬಾಸ್ ಮನೆಯ ಒಳಗೆ ಕೂಡ ಗಿಲ್ಲಿ ಅವರು ‘ದಿ ಡೆವಿಲ್’ ಚಿತ್ರದ ಬಗ್ಗೆ ಮಾತನಾಡಿದ್ದರು. ಆ ಬಗ್ಗೆ ಸ್ಪಂದನಾ ಸೋಮಣ್ಣ ಅವರು ‘ಟಿವಿ 9’ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಟಿವಿ9 ಜೊತೆ ಮಾತನಾಡಿ ಬಿಗ್ ಬಾಸ್ ಮನೆಯೊಳಗಿನ ಅನೇಕ ವಿಚಾರಗಳನ್ನು ಸ್ಪಂದನಾ (Spandana Somanna) ಅವರು ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಜೊತೆ ಸ್ಪಂದನಾ ಉತ್ತಮ ಬಾಂಧವ್ಯ ಹೊಂದಿದ್ದರು. ಈ ಬಾರಿ ಧನುಷ್ ಅಥವಾ ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಸ್ಪಂದನಾ ಹೇಳಿದ್ದಾರೆ. ಅಲ್ಲದೇ, ಬಿಗ್ ಬಾಸ್ ಮನೆ ಒಳಗೆ ಗಿಲ್ಲಿ ನಟ (Gilli Nata) ಅವರು ‘ದಿ ಡೆವಿಲ್’ ಸಿನಿಮಾ ಬಗ್ಗೆ ಮಾತನಾಡಿದ್ದನ್ನು ಕೂಡ ಸ್ಪಂದನಾ ಈಗ ನೆನಪಿಸಿಕೊಂಡಿದ್ದಾರೆ.
ದರ್ಶನ್ ಅಭಿನಯದ ಸಿನಿಮಾದಲ್ಲಿ ತಾವು ಕೂಡ ನಟಿಸಬೇಕು ಎಂಬುದು ಬಹುತೇಕ ಎಲ್ಲ ಕಲಾವಿದರ ಆಸೆ ಆಗಿರುತ್ತದೆ. ಗಿಲ್ಲಿ ನಟ ಅವರು ‘ದಿ ಡೆವಿಲ್’ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಿದ್ದಾರೆ. ಡಿಸೆಂಬರ್ 11ರಂದು ಆ ಸಿನಿಮಾ ಬಿಡುಗಡೆ ಆಯಿತು. ಆದರೆ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎಂಬುದು ಬಿಗ್ ಬಾಸ್ ಮನೆಯ ಒಳಗೆ ಇರುವ ಗಿಲ್ಲಿಗೆ ತಿಳಿಯಲಿಲ್ಲ.
ಗಿಲ್ಲಿ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿರುವುದರಿಂದ ಬಿಗ್ ಬಾಸ್ ಮನೆಯ ಒಳಗೆ ಆ ಚಿತ್ರದ ಟ್ರೇಲರ್ ಪ್ರಸಾರ ಮಾಡಬೇಕಿತ್ತು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಸಿನಿಮಾ ಬಗ್ಗೆ ಹೆಚ್ಚು ಪ್ರಸ್ತಾಪ ಆಗಲೇ ಇಲ್ಲ. ಆದರೆ ಗಿಲ್ಲಿ ನಟ ಅವರು ಮನೆಮಂದಿಯ ಜೊತೆ ‘ದಿ ಡೆವಿಲ್’ ಸಿನಿಮಾ ಬಗ್ಗೆ ತುಂಬಾ ಮಾತುಗಳನ್ನು ಆಡಿದ್ದರು ಎಂದು ಸ್ಪಂದನಾ ಹೇಳಿದ್ದಾರೆ.
‘ಡೆವಿಲ್ ಸಿನಿಮಾ ಬಗ್ಗೆ ಗಿಲ್ಲಿ ಮಾತನಾಡುತ್ತಿದ್ದ. ಈ ವಾರ ರಿಲೀಸ್ ಆಗಿರಬಹುದು ಎನ್ನುತ್ತಿದ್ದ. ದೊಡ್ಡ ಪಾತ್ರ ಅಲ್ಲ, ಆದರೆ ಇಂಟರ್ವಲ್ನಲ್ಲಿ ತಾನೇ ಬರುವುದು ಎಂಬ ವಿಷಯವನ್ನು ಹೇಳಿಕೊಂಡಿದ್ದ. ಅದರ ಬಗ್ಗೆ ಅವನು ಬಹಳ ಖುಷಿಯಾಗಿದ್ದ. ಗೆಸ್ಟ್ ಯಾರೋ ಬಂದಾಗ ಕೂಡ ಡೆವಿಲ್ ಬಗ್ಗೆ ಹೇಳಿದಾದ ಗಿಲ್ಲಿ ತುಂಬಾ ಹೆಮ್ಮೆಪಟ್ಟಿದ್ದ’ ಎಂದು ಸ್ಪಂದನಾ ಸೋಮಣ್ಣ ಅವರು ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ನಟ ಅವರು ಫೇಮಸ್ ಆಗಿದ್ದರು. ಯೂಟ್ಯೂಬ್ ವಿಡಿಯೋ ಹಾಗೂ ರಿಯಾಲಿಟಿ ಶೋಗಳ ಮೂಲಕ ಅವರು ಮಿಂಚಿದ್ದರು. ಆಗಲೇ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಬರಲು ಆರಂಭಿಸಿತ್ತು. ಬಿಗ್ ಬಾಸ್ ಶೋಗೆ ಬಂದ ಬಳಿಕ ಅವರು ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



