ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್
ಬಿಗ್ ಬಾಸ್ ಶೋನಲ್ಲಿ ಗಿಲ್ಲಿ ನಟ ಬಹುತೇಕರ ಫೇವರಿಟ್. ಗಿಲ್ಲಿ ಬಗ್ಗೆ ಸ್ಪರ್ಧಿಗಳಿಗೆ ಟೀಕೆಗಳು ಇದ್ದರೂ ಸಹ ಅವರ ಕಾಮಿಡಿಯನ್ನು ಎಲ್ಲರೂ ಎಂಜಾಯ್ ಮಾಡುತ್ತಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಆರಂಭದಿಂದಲೂ ಆಸಕ್ತಿ ಹೊಂದಿದ್ದಾರೆ. ಆ ಬಗ್ಗೆ ಜ.4ರ ಸಂಚಿಕೆಯಲ್ಲಿ ಸುದೀಪ್ ಚರ್ಚೆ ಮಾಡಿದ್ದಾರೆ.
ಬಿಗ್ ಬಾಸ್ ಆಟದಲ್ಲಿ ಗಿಲ್ಲಿ ನಟ (Gilli Nata) ಅವರು ವೀಕ್ಷಕರ ಫೇವರಿಟ್ ಆಗಿದ್ದಾರೆ. ಗಿಲ್ಲಿ ಬಗ್ಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಕೆಲವು ಟೀಕೆಗಳು ಇದ್ದರೂ ಕೂಡ ಅವರ ಕಾಮಿಡಿಯನ್ನು ಎಲ್ಲರೂ ಎಂಜಾಯ್ ಮಾಡುತ್ತಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ (Rakshitha Shetty) ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಆ ಬಗ್ಗೆ ಜನವರಿ 4ರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ. ಹೆಂಗಾದರೂ ಕಾವ್ಯಾನ ಹೊರಗೆ ಕಳಿಸಿದರೆ ನಾನು ಹೋಗಿ ಗಿಲ್ಲಿ ಪಕ್ಕ ಕೂರಬಹುದು ಅಂತ ಅಂದುಕೊಳ್ಳುತ್ತೀರಿ’ ಎಂದು ಕಿಚ್ಚ ಸುದೀಪ್ (Kichcha Sudeep) ಅವರು ಹೇಳಿದ್ದಾರೆ. ಜ.4ರ ಎಪಿಸೋಡ್ ಪ್ರೋಮೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

