ಹೊಸ ಮನೆಯಲ್ಲಿ ಅದ್ಧೂರಿಯಾಗಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿದ ಮುಸ್ಲಿಮ್ ವ್ಯಕ್ತಿ!
ಕೊಪ್ಪಳದ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿರುವುದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಕನಕಗಿರಿ ನಗರದ ಐದನೇ ವಾರ್ಡ್ ನಿವಾಸಿ ಶ್ಯಾಮೀದ್ ಸಾಬ್ ಗುರಿಕಾರ್, ತಮ್ಮ ನೂತನ ಮನೆ ನಿರ್ಮಿಸಿದ ನಂತರ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಬೇಕೆಂಬುದು ಶ್ಯಾಮೀದ್ ಅವರ ಬಹುದಿನಗಳ ಆಸೆಯಾಗಿತ್ತು. ಜನವರಿ ಒಂದರಂದು ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿದ ಬಳಿಕ, ಜನವರಿ ಮೂರರಂದು ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಯ್ಯಪ್ಪ ಸ್ವಾಮಿ ಸೇವೆ ಸಲ್ಲಿಸುವ ತಮ್ಮ ಹಂಬಲ ಈಡೇರಿರುವುದಕ್ಕೆ ಶ್ಯಾಮೀದ್ ಸಾಬ್ ಗುರಿಕಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ಜನವರಿ 04: ಕೊಪ್ಪಳದ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿಸಿದ್ದಾರೆ. ಕನಕಗಿರಿ ನಗರದ ಐದನೇ ವಾರ್ಡ್ ನಿವಾಸಿ ಶ್ಯಾಮೀದ್ ಸಾಬ್ ಗುರಿಕಾರ್, ತಮ್ಮ ನೂತನ ಮನೆ ನಿರ್ಮಿಸಿದ ನಂತರ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಬೇಕೆಂಬುದು ಶ್ಯಾಮೀದ್ ಅವರ ಬಹುದಿನಗಳ ಆಸೆಯಾಗಿತ್ತು. ಜನವರಿ ಒಂದರಂದು ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿದ ಬಳಿಕ, ಜನವರಿ ಮೂರರಂದು ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಯ್ಯಪ್ಪ ಸ್ವಾಮಿ ಸೇವೆ ಸಲ್ಲಿಸುವ ತಮ್ಮ ಹಂಬಲ ಈಡೇರಿರುವುದಕ್ಕೆ ಶ್ಯಾಮೀದ್ ಸಾಬ್ ಗುರಿಕಾರ್ ಸಂತಸ ವ್ಯಕ್ತಪಡಿಸಿದ್ದು, ಇವರ ಈ ಕಾರ್ಯ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

