ಎಲಿಮಿನೇಷನ್ ಬಗ್ಗೆ ಮಾಳು ಹೇಳಿದ ಶಾಕಿಂಗ್ ವಿಷಯ ಬಿಚ್ಚಿಟ್ಟ ಸ್ಪಂದನಾ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪಂದನಾ ಎಲಿಮಿನೇಟ್ ಆಗಿದ್ದು, ಇದು ಅವರಿಗೆ ಬೇಸರ ಮೂಡಿಸಿದೆ. ಹೊರಬಂದ ನಂತರ ಮಾಳು ಅವರ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಮಾಳು ಹೊರಹೋಗುವ ಒಂದು ವಾರದ ಮೊದಲೇ ತಾನು ಎಲಿಮಿನೇಟ್ ಆಗುತ್ತೇನೆ ಎಂದು ಹೇಳಿದ್ದರು ಎಂಬ ಶಾಕಿಂಗ್ ವಿಷಯವನ್ನು ಸ್ಪಂದನಾ ಬಹಿರಂಗಪಡಿಸಿದ್ದಾರೆ. ಮಾಳು ಸ್ಟ್ರಾಂಗ್ ಸ್ಪರ್ಧಿಯಾಗಿದ್ದರೂ ತಮ್ಮ ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಸ್ಪಂದನಾ ಅಭಿಪ್ರಾಯಪಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) 99 ದಿನ ಪೂರೈಸಿ ಸ್ಪಂದನಾ ಎಲಿಮಿನೇಟ್ ಆಗಿದ್ದಾರೆ. ಈ ಎಲಿಮಿನೇಷನ್ ಅವರಿಗೆ ಬೇಸರ ಮೂಡಿಸಿದೆ. ಎರಡು ವಾರ ಪೂರೈಸಿದ್ದರೆ ಫಿನಾಲೆಯಲ್ಲಿ ಇರಬಹುದಿತ್ತು ಎಂದು ಅವರಿಗೆ ಅನಿಸಿದೆ. ಈ ಮಧ್ಯೆ ಸ್ಪಂದನಾ ಮಾಳು ಅವರು ಆಡಿದ ಒಂದು ಮಾತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕಳೆದ ವಾರ ಮಾಳು ಎಲಿಮಿನೇಟ್ ಆದರು. ಅವರು ಹೊರ ಬರುತ್ತಿದ್ದಂತೆ ವಿವಿಧ ರೀತಿಯ ಹೇಳಿಕೆ ನೀಡಿದ್ದರು. ‘ನಾನು ಕಪ್ ಗೆಲ್ಲುತ್ತಿದ್ದೆ. ಆದರೆ, ಅರ್ಧಕ್ಕೆ ಹೊರಕ್ಕೆ ಕರೆಸಿದರು’ ಎಂಬರ್ಥದಲ್ಲಿ ಅವರು ಮಾತನಾಡಿದ್ದರು. ಸ್ಪಂದನಾ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದ್ದರು.
‘ಸ್ಪಂದನಾಗೆ ಟಾಸ್ಕ್ ಆಡೋಕೆ ಬರೋದಿಲ್ಲ. ಫಿಸಿಕಲ್ ಟಾಸ್ಕ್ ಎಂಬುದು ಬಂದರೆ ನಾನು ಅಥವಾ ಸೂರಜ್ ಉತ್ತಮ ಆಯ್ಕೆ ಆಗಿತ್ತು. ಅವರು ಒಳಗೆ ಇದ್ದು, ತಾವು ಹೊರಕ್ಕೆ ಬಂದಿದ್ದು ಸರಿ ಅಲ್ಲ. ನಮ್ಮಿಬ್ಬರಲ್ಲಿ (ಸೂರಜ್ ಅಥವಾ ಮಾಳು) ಒಬ್ಬರು ಒಳಗೆ ಇರಬೇಕಿತ್ತು’ ಎಂದು ಮಾಳು ಹೇಳಿದ್ದರು . ಈ ಹೇಳಿಕೆಗಳು ಸ್ಪಂದನಾಗೆ ಅಚ್ಚರಿ ತರಿಸಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಮಾಳು ಹೀಗೆ ಹೇಳಿದ್ದಾರೆ ಎಂಬುದೇ ನಂಗೆ ಸರ್ಪ್ರೈಸ್’ ಎಂದಿರೋ ಸ್ಪಂದನಾ, ಮಾಳುಗೆ ಈ ಮೊದಲೇ ಎಲಿಮಿನೇಷನ್ ಭಯ ಕಾಡಿತ್ತು ಎಂಬ ಶಾಕಿಂಗ್ ವಿಷಯ ರಿವೀಲ್ ಮಾಡಿದ್ದಾರೆ. ‘ಅವರು ಎಲಿಮಿನೇಟ್ ಆಗುವದ್ದಕ್ಕಿಂತ ಒಂದು ವಾರದ ಹಿಂದೆ ಎಲಿಮಿನೇಷನ್ ಬಗ್ಗೆ ಮಾತನಾಡಿದ್ದರು. ‘ಈ ವಾರ ನಾಮಿನೇಟ್ ಆಗಿದ್ದೇನೆ. ನಾನೇ ಹೊರಹೋಗೋದು ಎಂದು ನನಗೆ ಅನಿಸುತ್ತಿದೆ, ಇದಕ್ಕಾಗಿ ಬಟ್ಟೆಗಳು ಬಂದಿಲ್ಲ’ ಎಂದು ಮಾಳು ಅವರು ಸ್ಪಂದನಾ ಬಳಿ ಹೇಳಿದ್ದರಂತೆ.
ಇದನ್ನೂ ಓದಿ: ರಕ್ಷಿತಾ ಶೆಟ್ಟಿಯಿಂದ ಮ್ಯಾನ್ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು?
ಬಿಗ್ ಬಾಸ್ ಮನೆಯಲ್ಲಿ ತಾವೇ ಎಲಿಮಿನೇಟ್ ಆಗೋದು ಎಂದು ಮಾಳುಗೆ ಅನಿಸಿತ್ತು. ಆದರೆ, ಹೊರಗೆ ಬಂದು ಹೀಗೆ ಏಕೆ ಹೇಳಿದ್ರು ಎಂಬ ಪ್ರಶ್ನೆ ಸ್ಪಂದನಾ ಅವರನ್ನು ಕಾಡಿದೆ. ‘ಮಾಳು ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಆದರೆ, ತಮ್ಮ ಜನಪ್ರಿಯತೆಯನ್ನು ಅವರು ಸರಿಯಾಗಿ ಬಳಸಿಕೊಂಡಿಲ್ಲ’ ಎಂದು ಸ್ಪಂದನಾ ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




