AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಿಲ್ಲಿ ಎಲಿಮಿನೇಟ್ ಆಗಿದ್ದಾನೆ, ಅದಕ್ಕೆ ಕಾರಣ ನಾನು’ ಸಂಭ್ರಮಿಸಿದ ಸತೀಶ್

ಬಿಗ್ ಬಾಸ್ ಕನ್ನಡದ ಸ್ಪರ್ಧಿ ಸತೀಶ್, ಗಿಲ್ಲಿ ಎಲಿಮಿನೇಷನ್ ಬಗ್ಗೆ ಕುಣಿದಾಡಿದ್ದಾರೆ. 'ಗಿಲ್ಲಿ ಔಟ್ ಮಾಡಲು ನಾನೇ ಕಾರಣ' ಎಂದು ಹೇಳಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಆದರೆ, ಗಿಲ್ಲಿ ನಾಮಿನೇಟ್ ಆಗಿರಲಿಲ್ಲ ಎಂದು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸತೀಶ್ ಅವರ ಈ ಹೇಳಿಕೆಯನ್ನು ಪ್ರಚಾರಕ್ಕಾಗಿ ಎಂದು ಹಲವರು ಟೀಕಿಸಿದ್ದಾರೆ.

‘ಗಿಲ್ಲಿ ಎಲಿಮಿನೇಟ್ ಆಗಿದ್ದಾನೆ, ಅದಕ್ಕೆ ಕಾರಣ ನಾನು’ ಸಂಭ್ರಮಿಸಿದ ಸತೀಶ್
ಸತೀಶ್-ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on: Jan 05, 2026 | 7:04 AM

Share

ಬಿಗ್ ಬಾಸ್ (Bigg Boss) ಮನೆಗೆ ಬಂದ ವಿಚಿತ್ರ ಸ್ಪರ್ಧಿಗಳಲ್ಲಿ ಡಾಗ್ ಬ್ರೀಡರ್ ಸತೀಶ್ ಕೂಡ ಒಬ್ಬರು. ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದರೆ ಅವರಿಗೆ ಇಷ್ಟು ಪ್ರಚಾರ ಸಿಗುತ್ತಿತ್ತೋ ಅಥವಾ ಇಲ್ಲವೋ, ಆದರೆ, ಹೊರಗೆ ಅವರು ಸಂದರ್ಶನಗಳನ್ನು ನೀಡಿ ಪ್ರಚಾರದಲ್ಲಿರಲು ಪ್ರಯತ್ನಿಸುತ್ತಿದ್​ದಾರೆ. ಈಗ ಸತೀಶ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ಗಿಲ್ಲಿ ಹೊರ ಹೋಗಿದ್ದಾರೆ ಎಂದು ಅವರು ಸಂಭ್ರಮಿಸಿದ್ದಾರೆ.

ಗಿಲ್ಲಿ ನಟನ ಕಂಡರೆ ಸತೀಶ್ ಅವರಿಗೆ ಆಗೋದಿಲ್ಲ. ಸಂದರ್ಶನಗಳಲ್ಲಿ ಅವರು ಗಿಲ್ಲಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ‘ಬಿಗ್ ಬಾಸ್ ಮುಗಿದ ಬಳಿಕ ಪಾರ್ಟಿ ಆಯೋಜಿಸುತ್ತೇನೆ. ಅದಕ್ಕೆ ಗಿಲ್ಲಿಗೆ ಮಾತ್ರ ಆಹ್ವಾನ ನೀಡೋದಿಲ್ಲ’ ಎಂದು ಈ ಮೊದಲು ಹೇಳಿಕೆ ನೀಡಿದ್ದರು. ಗಿಲ್ಲಿಗೆ ಕೊಳಕ, ಗಲೀಜು ಎಂದೆಲ್ಲ ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ಜೊತೆ ಇರೋದು ಒಂದು ದೊಡ್ಡ ಟಾರ್ಚರ್ ಎಂಬುದು ಕೂಡ ಅವರ ಹೇಳಿಕೆ ಆಗಿತ್ತು.

View this post on Instagram

A post shared by @shriya_vlogs.34

ಈಗ ಗಿಲ್ಲಿ ನಟ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಸತೀಶ್ ಕುಣಿದಾಡಿದ್ದಾರೆ. ‘ಗಿಲ್ಲಿ ಔಟ್ ಆಗಿ ಆಚೆ ಬಂದಾಯ್ತು. ಇದಕ್ಕೆ ಕಾರಣ ನಾನೇ. ಪಾರ್ಟಿ ಕೊಡಿಸ್ತಾ ಇದೀನಿ. ಅವನನ್ನು ಹೊರಗೆ ಕಳಿಸಬೇಕು ಎಂದು ಹಠ ಹಿಡಿದಿದ್ದೆ. ಅದನ್ನು ಸಾಧಿಸಿದ್ದೇನೆ’ ಎಂದು ಕುಣಿದಾಡಿದ್ದಾರೆ ಸತೀಶ್. ಆದರೆ, ಅವರ ಹೇಳಿಕೆಯನ್ನು ಅಲ್ಲಿದ್ದವರೇ ನಂಬಿಲ್ಲ, ಇನ್ನು ಜನರು ನಂಬೋದು ಹೇಗೆ? ಭಾನುವಾರ ಸ್ಪಂದನಾ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್

ಈ ವಿಡಿಯೋ ವೈರಲ್ ಆಗಿದೆ. ‘ಕಳೆದ ವಾರ ಗಿಲ್ಲಿ ನಾಮಿನೇಟ್ ಆಗಿರಲೇ ಇಲ್ಲ ಕಣಣ್ಣ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಪ್ರಚಾರಕ್ಕಾಗಿ ಈ ರೀತಿಯೆಲ್ಲ ಮಾಡಬಾರದು’ ಎಂದು ಕೆಲವರು ಹೇಳಿದ್ದಾರೆ. ಗಿಲ್ಲಿ ಅವರು ಈ ಬಾರಿಯ ಬಿಗ್ ಬಾಸ್ ಗೆಲ್ಲುತ್ತಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆ. ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ