ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್
ಬಿಗ್ ಬಾಸ್ ವಿನ್ನರ್ ಆದ ಪ್ರಥಮ್ ಮತ್ತು ಹನುಮಂತನ ರೀತಿ ಗಿಲ್ಲಿ ನಟ ಅವರು ಕೂಡ ಆಡುತ್ತಿದ್ದಾರೆ. ಅದನ್ನು ಕಿಚ್ಚ ಸುದೀಪ್ ಅವರು ಗಮನಿಸಿ ಹೇಳಿದ್ದಾರೆ. ಆ ಮೂಲಕ ಅವರು ದೊಡ್ಡ ಸೂಚನೆ ಕೊಟ್ಟಿದ್ದಾರೆ. ಈ ಹಿಂದಿನ ಎಲ್ಲ ಸೀಸನ್ ಸಂಚಿಕೆಗಳನ್ನು ನೋಡಿಕೊಂಡು ಬಂದು ಗಿಲ್ಲಿ ನಟ ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ.

ಈ ಬಾರಿ ಗಿಲ್ಲಿ ನಟ ಅವರೇ ಬಿಗ್ ಬಾಸ್ (Bigg Boss Kannada Season 12) ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಬಹುತೇಕರಿಗೆ ಇದೆ. ಆ ಅಭಿಪ್ರಾಯಕ್ಕೆ ತಕ್ಕಂತೆಯೇ ಗಿಲ್ಲಿ ಅವರು ಆಟ ಆಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಈಗಾಗಲೇ ಗಿಲ್ಲಿ (Gilli Nata) ಅವರ ಆಟವನ್ನು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೂ ಗಿಲ್ಲಿ ಆಟ ಇಷ್ಟ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ಗಿಲ್ಲಿಯೇ ಗೆಲ್ಲಬಹುದು ಎಂಬ ಸೂಚನೆಯನ್ನು ಕಿಚ್ಚ ಸುದೀಪ್ (Kichcha Sudeep) ಅವರು ಪರೋಕ್ಷವಾಗಿ ನೀಡಿದ್ದಾರೆ. ಶನಿವಾರದ (ಜನವರಿ 3) ಬಿಗ್ ಬಾಸ್ ಸಂಚಿಕೆಯಲ್ಲಿ ಈ ರೀತಿಯ ಮಾತುಕತೆ ನಡೆದಿದೆ.
ಕಳೆದ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದರು. ಅವರು ಕ್ಯಾಪ್ಟೆನ್ಸಿ ಮಾಡಿದ್ದು ಸರಿ ಇಲ್ಲ ಎಂದು ಇಡೀ ಮನೆಯ ಸದಸ್ಯರು ಆರೋಪ ಮಾಡಿದ್ದರು. ಆದರೆ ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಬೇರೆಯದೇ ಆಯಾಮ ಬಂತು. ಗಿಲ್ಲಿ ಹೇಳುವುದಕ್ಕೂ ಮುನ್ನವೇ ಎಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಕೆಲಸವನ್ನು ಮಾಡಿ ಮುಗಿಸಿದ್ದರು. ಅದರಿಂದ ಗಿಲ್ಲಿಗೆ ಪ್ಲಸ್ ಆಯಿತು. ಬೇರೆ ಎಲ್ಲರಿಗಿಂತ ಗಿಲ್ಲಿ ಅವರೇ ಬಿಗ್ ಬಾಸ್ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಸುದೀಪ್ ಒತ್ತಿ ಹೇಳಿದರು.
ಈ ಹಿಂದೆ ಪ್ರಥಮ್ ಮತ್ತು ಹನುಮಂತ ಅವರು ‘ಬಿಗ್ ಬಾಸ್’ ಟ್ರೋಫಿ ಗೆದ್ದಿದ್ದರು. ಈಗ ಗಿಲ್ಲಿ ನಟ ಆಡುತ್ತಿರುವ ಆಟದಲ್ಲಿ ಕೂಡ ಪ್ರಥಮ್ ಮತ್ತು ಹನುಮಂತ ಅವರ ಛಾಯೆ ಕಾಣುತ್ತಿದೆ. ಅದನ್ನು ಕಿಚ್ಚ ಸುದೀಪ್ ಅವರು ಗಮನಿಸಿದ್ದಾರೆ. ‘ಗಿಲ್ಲಿ ನಟ ಬಿಗ್ ಬಾಸ್ ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ’ ಎಂದು ಸುದೀಪ್ ಅವರು ಹೇಳಿದ್ದಾರೆ.
ಗಿಲ್ಲಿ ನಟ ಅವರು ಈ ಹಿಂದಿನ ಎಲ್ಲ ಬಿಗ್ ಬಾಸ್ ಸೀಸನ್ಗಳನ್ನು ನೋಡಿಕೊಂಡು ಬಂದಿದ್ದಾರೆ. ಪ್ರಥಮ್ ಮತ್ತು ಹನುಮಂತ ವಿನ್ ಆದ ಸೀಸನ್ಗಳನ್ನು ಹೆಚ್ಚು ಗಮನಿಸಿಕೊಂಡು ಬಂದಿದ್ದಾರೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡು ಬಂದಿದ್ದಾರೆ. ಈ ಎಲ್ಲ ವಿಷಯವನ್ನು ಅವರು ಸುದೀಪ್ ಎದುರು ಬಾಯಿಬಿಟ್ಟಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್
‘ಗಿಲ್ಲಿ ಪಾತ್ರದಲ್ಲಿ ಒಂದು ಸ್ವಲ್ಪ ಹನುಮಂತ, ಒಂದು ಸ್ವಲ್ಪ ಪ್ರಥಮ್ ಇದ್ದಾರೆ. ಎಷ್ಟು ಸಲ ನಾನು ಈ ಸುಳಿವನ್ನು ಪರೋಕ್ಷವಾಗಿ ಕೊಟ್ಟಿದ್ದೆ. ಗಿಲ್ಲಿ ರೀತಿ ತಯಾರಿ ಮಾಡಿಕೊಂಡು ಬರುವುದು ಖಂಡಿತಾ ತಪ್ಪಲ್ಲ. ಎಲ್ಲ ಸೀಸನ್ ನೋಡಿಕೊಂಡು ಬಂದಿದ್ದಾರೆ. ಗಿಲ್ಲಿ ಹಾಕಿರುವುದು ಬನಿಯನ್ ಇರಬಹುದು. ಆದರೆ ಬಾಳುತ್ತಿರುವ ಬಾಳು ರಾಜಂದು’ ಎಂದು ಸುದೀಪ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




