ಬಿಗ್ಬಾಸ್ ಮನೆಯಲ್ಲಿ ನಡೆಯಿತು ಅದ್ಭುತ, ಗಿಲ್ಲಿ-ಅಶ್ವಿನಿ ಆಡಿದ ಮಾತು ಕೇಳಿದ್ರಾ?
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಇಬ್ಬರ ನಡುವೆ ಜಗಳ ಇಲ್ಲದ, ಪರಸ್ಪರರ ಬಗ್ಗೆ ಟೀಕೆ, ವಿಮರ್ಶೆ ಮಾಡದ ದಿನವೇ ಇಲ್ಲ ಎನ್ನಬಹುದು. ಬಿಗ್ಬಾಸ್ ಮನೆಯಲ್ಲಿ ಅತಿಹೆಚ್ಚು ಕಿತ್ತಾಡಿರುವವರೆಂದರೆ ಅದು ಗಿಲ್ಲಿ ಮತ್ತು ಅಶ್ವಿನಿಯೇ ಆಗಿದ್ದಾರೆ. ಆದರೆ ಇನ್ನೇನು ಫಿನಾಲೆ ಹತ್ತಿರ ಬಂದಾಗ ಬಿಗ್ಬಾಸ್ ಮನೆಯಲ್ಲಿ ಅದ್ಭುತ ನಡೆದಿದ್ದು, ಗಿಲ್ಲಿ, ಅಶ್ವಿನಿ ಅವರನ್ನು ಒಳ್ಳೆಯವರು ಎಂದರೆ, ಅಶ್ವಿನಿ, ಗಿಲ್ಲಿಯನ್ನು ನನಗೆ ಇಷ್ಟದ ಸ್ಪರ್ಧಿ ಎಂದಿದ್ದಾರೆ. ಇದು ನಡೆದಿದ್ದು ಹೇಗೆ?

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೇನು ಮುಗಿಯಲು ಬಂದಿದೆ. ಫಿನಾಲೆಗೆ ಕೆಲವೇ ದಿನಗಳಷ್ಟೆ ಬಾಕಿ ಇದೆ. ಈ ಸೀಸನ್ ಶುರು ಆದಾಗಿನಿಂದ ಮುಗಿಯುವ ವರೆಗೂ ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ಪರಸ್ಪರ ಕಿತ್ತಾಡುತ್ತಲೇ ಬಂದಿದ್ದಾರೆ. ಇಬ್ಬರ ನಡುವೆ ಜಗಳ ಇಲ್ಲದ, ಪರಸ್ಪರರ ಬಗ್ಗೆ ಟೀಕೆ, ವಿಮರ್ಶೆ ಮಾಡದ ದಿನವೇ ಇಲ್ಲ ಎನ್ನಬಹುದು. ಬಿಗ್ಬಾಸ್ ಮನೆಯಲ್ಲಿ ಅತಿಹೆಚ್ಚು ಕಿತ್ತಾಡಿರುವವರೆಂದರೆ ಅದು ಗಿಲ್ಲಿ ಮತ್ತು ಅಶ್ವಿನಿಯೇ ಆಗಿದ್ದಾರೆ. ಆದರೆ ಇನ್ನೇನು ಫಿನಾಲೆ ಹತ್ತಿರ ಬಂದಾಗ ಬಿಗ್ಬಾಸ್ ಮನೆಯಲ್ಲಿ ಅದ್ಭುತ ನಡೆದಿದ್ದು, ಗಿಲ್ಲಿ, ಅಶ್ವಿನಿ ಅವರನ್ನು ಒಳ್ಳೆಯವರು ಎಂದರೆ, ಅಶ್ವಿನಿ, ಗಿಲ್ಲಿಯನ್ನು ನನಗೆ ಇಷ್ಟದ ಸ್ಪರ್ಧಿ ಎಂದಿದ್ದಾರೆ. ಇದು ನಡೆದಿದ್ದು ಹೇಗೆ?
ಸುದೀಪ್ ನಡೆಸಿಕೊಡುವ ವೀಕೆಂಡ್ ಎಪಿಸೋಡ್ನಲ್ಲಿ ಶನಿವಾರದ ಎಪಿಸೋಡ್ ಗಂಭೀರವಾಗಿದ್ದರೆ ಭಾನುವಾರದ ಎಪಿಸೋಡ್ ತುಸು ಲೈಟ್ ಆಗಿರುತ್ತದೆ. ಹಾಸ್ಯ ತುಂಬಿರುತ್ತದೆ. ಅಂತೆಯೇ ಸುದೀಪ್ ಅವರು, ಹೊಸ ವರ್ಷದ ಮೊದಲ ವೀಕೆಂಡ್ ಎಪಿಸೋಡ್ನಲ್ಲಿ ಒಳ್ಳೆಯ ಮಾತುಗಳನ್ನಾಡೋಣ ಎಂದು ಹೇಳಿದ ಸುದೀಪ್, ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಬಗ್ಗೆ ಮೂರು ಒಳ್ಳೆಯ ವಿಷಯಗಳನ್ನು ಹೇಳಿ ಎಂದರು.
ಮೊದಲು ಗಿಲ್ಲಿ, ಅಶ್ವಿನಿ ಅವರ ಬಗ್ಗೆ ಮೂರು ಒಳ್ಳೆಯ ಮಾತುಗಳನ್ನು ಹೇಳಬೇಕಿತ್ತು, ಆಗ ಮಾತನಾಡಿದ ಗಿಲ್ಲಿ, ‘ಅಶ್ವಿನಿ ಅವರು ಯಾರೊಂದಿಗೆ ಏನೇ ಜಗಳ ಮಾಡಿರಲಿ ಆದರೆ ಊಟದ ವಿಷಯ ಬಂದಾಗ ಎಂದಿಗೂ ಎಲ್ಲರನ್ನೂ ಸಮಾನವಾಗಿ ನೋಡಿದ್ದಾರೆ. ಏನೇ ಜಗಳ ಮಾಡಿದ್ದರೂ ಅಡುಗೆ ಮಾಡಿ, ಎಲ್ಲರೂ ಊಟ ಮಾಡುವಂತೆ ನೋಡಿಕೊಳ್ಳುತ್ತಾರೆ’ ಎಂದರು. ಬಳಿಕ, ‘ಅಶ್ವಿನಿ ಅವರು ಟಾಸ್ಕ್ ವಿಷಯದಲ್ಲಿ ಗೇಮ್ ವಿಷಯದಲ್ಲಿ ಜಗಳ ಮಾಡುತ್ತಾರೆ ಆದರೆ ಅವರು ಜಗಳ ಬಿಟ್ಟು ಬೇರೆ ಸಂದರ್ಭದಲ್ಲಿ ಬಹಳ ಒಳ್ಳೆಯವರು, ಪಾಸಿಟಿವ್ ವ್ಯಕ್ತಿ ಎನಿಸುತ್ತಾರೆ’ ಎಂದರು ಗಿಲ್ಲಿ.
ಇದನ್ನೂ ಓದಿ:ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್
ಕೊನೆಗೆ, ‘ಅಶ್ವಿನಿ ಅವರು ಬಹಳ ಟಫ್ ಸ್ಪರ್ಧಿ, ನಾನು ಅವರನ್ನು ಬಹಳ ಗೋಳು ಹೊಯ್ದಿಕೊಂಡಿದ್ದೀನಿ, ಅವರ ವಯಸ್ಸಿನ ಬಗ್ಗೆ ತಮಾಷೆ ಮಾಡಿದ್ದೀನಿ ಆದರೆ ಅವರು ಎಲ್ಲವನ್ನೂ ಎದುರಿಸಿ ಕಾಂಪಿಟೇಶನ್ ಕೊಟ್ಟಿದ್ದಾರೆ. ಟಫ್ ಆಟ ಆಗಿದ್ದಾರೆ. ಫಿಸಿಕಲ್ ಟಾಸ್ಟ್ನಲ್ಲಿಯೂ ಸಹ ಅವರನ್ನು ಎದುರಿಸುವವರು ಇಲ್ಲ. ಅವರು ಬಹಳ ಗಟ್ಟಿ ಸ್ಪರ್ಧಿ’ ಎಂದಿದ್ದಾರೆ ಗಿಲ್ಲಿ.
ಇನ್ನು ಅಶ್ವಿನಿ ಸಹ ಗಿಲ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ‘ನನಗೆ ಗಿಲ್ಲಿ ಬಹಳ ಇಷ್ಟವಾಗುವ ಸ್ಪರ್ಧಿ. ಅವರು ತಮ್ಮ ಪ್ರೀತಿಯನ್ನು ಮೌನವಾಗಿ ತೋರಿಸುತ್ತಾನೆ. ಅನ್ನುವುದು ಅಂದುಬಿಡುತ್ತಾನೆ ಆ ಮೇಲೆ ಅವರಿಗೆ ಹರ್ಟ್ ಆಗಿದೆಯಾ ಎಂದು ಮರೆಯಲ್ಲಿ ನಿಂತು ನೋಡುತ್ತಾನೆ. ಅವನು ಯಾರನ್ನಾದರೂ ಇಷ್ಟ ಪಟ್ಟರೆ ಅವರನ್ನು ಬಹಳ ಪ್ರೊಟೆಕ್ಟ್ ಮಾಡುತ್ತಾನೆ. ಅವರಿಗಾಗಿ ರಿಸ್ಕ್ ತೆಗೆದುಕೊಳ್ಳುತ್ತಾನೆ. ಮತ್ತು ಅವನ ಇಲ್ಲಿಯವರೆಗಿನ ಜರ್ನಿ ಸಹ ಬಹಳ ಕಷ್ಟವಾದುದು ಎಂಬುದು ನನಗೆ ಗೊತ್ತಿದೆ. ಅವನು ಅದನ್ನು ಹೇಳಿಕೊಂಡು ಕಣ್ಣೀರು ಹಾಕಿದವನಲ್ಲ, ವೀಕ್ನೆಸ್ ತೋರಿಸಿಕೊಳ್ಳುವುದು ಅವನಿಗೆ ಇಷ್ಟ ಇಲ್ಲ ಅವನ ಆ ಗುಣ ನನಗೆ ಇಷ್ಟ’ ಎಂದಿದ್ದಾರೆ ಅಶ್ವಿನಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




