ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ನಟ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಸೋಮಣ್ಣ ಅವರು ಬಿಗ್ ಬಾಸ್ ಶೋನಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ. ‘ಟಿವಿ9’ ಜೊತೆ ಮಾತನಾಡಿದ ಅವರು ಬಿಗ್ ಬಾಸ್ ಮನೆಯೊಳಗಿನ ವಿಷಯಗಳನ್ನು ಹಂಚಿಕಂಡಿದ್ದಾರೆ. ಫ್ಯಾಮಿಲಿ ವೀಕ್ನಲ್ಲಿ ಸ್ಪಂದನಾ ಅವರ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಾಗ ಗಿಲ್ಲಿ ನಟ ಜೊತೆ ಹೆಚ್ಚು ಮಾತನಾಡಿದ್ದರು.
ಕಿರುತೆರೆ ಸೀರಿಯಲ್ ಮೂಲಕ ಫೇಮಸ್ ಆದ ನಟಿ ಸ್ಪಂದನಾ ಸೋಮಣ್ಣ ಅವರು ಬಿಗ್ ಬಾಸ್ (BBK 12) ಶೋನಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ. ‘ಟಿವಿ9’ ಜೊತೆ ಮಾತನಾಡಿದ ಅವರು ಬಿಗ್ ಬಾಸ್ ಮನೆಯೊಳಗಿನ ವಿಷಯಗಳನ್ನು ಹಂಚಿಕಂಡಿದ್ದಾರೆ. ಫ್ಯಾಮಿಲಿ ವೀಕ್ನಲ್ಲಿ ಸ್ಪಂದನಾ ಅವರ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಾಗ ಗಿಲ್ಲಿ ನಟ (Gilli Nata) ಜೊತೆ ಹೆಚ್ಚು ಮಾತನಾಡಿದ್ದರು. ಅದಕ್ಕೆ ಕಾರಣ ಏನು ಎಂಬುದನ್ನು ಸ್ಪಂದನಾ ವಿವರಿಸಿದ್ದಾರೆ. ‘ಅದು ತುಂಬಾ ಸ್ಪೆಷಲ್ ಆಗಿತ್ತು. ಯಾಕೆಂದರೆ ನಮ್ಮ ಅಪ್ಪ ಪೂರ್ತಿ ಗಿಲ್ಲಿ ರೀತಿಯೇ ಮಾತನಾಡುತ್ತಿದ್ದರು. ತುಂಬಾ ಗೊತ್ತಿರುವವರ ರೀತಿ ಮಾತನಾಡುತ್ತಿದ್ದರು. ನಾನು ಮತ್ತು ಗಿಲ್ಲಿ ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದೆವು. ಅದಕ್ಕೆ ಅವರು ಕನೆಕ್ಟ್ ಆಗಿದ್ದಾರೆ ಎನಿಸುತ್ತದೆ. ಅವರ ಅಪ್ಪ-ಅಮ್ಮ ಬಂದಾಗ ಕೂಡ ಚೆನ್ನಾಗಿ ಮಾತಾಡಿದರು. ನಾವು ಒಂದೇ ಕಡೆಯವರು ಆದ್ದರಿಂದ ಗಿಲ್ಲಿ ಜೊತೆ ನಮ್ಮ ತಂದೆ ಕನೆಕ್ಟ್ ಆದರು’ ಎಂದು ಸ್ಪಂದನಾ ಸೋಮಣ್ಣ (Spandana Somanna) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
