- Kannada News Photo gallery A Thousand Year Journey of Somnath Temple: Destruction, Revival and Faith
ಸೋಮನಾಥ ದೇವಾಲಯದ ಮೇಲೆ 1026ರಿಂದ ಎಷ್ಟು ಬಾರಿ ನಡೆದಿತ್ತು ದಾಳಿ ಮತ್ತು ಯಾವಾಗ? ಇಲ್ಲಿದೆ ಮಾಹಿತಿ
ಗುಜರಾತ್‌ನ ಪ್ರಭಾಸ್ ಪಠಾಣ್‌ನಲ್ಲಿರುವ ಸೋಮನಾಥ ದೇವಾಲಯವು 1026ರಲ್ಲಿ ಮೊದಲ ಬಾರಿಗೆ ದಾಳಿಯನ್ನು ಕಂಡಿತ್ತು. ಅದಾದ ಬಳಿಕ 17 ಬಾರಿ ದೇವಾಲಯದ ಮೇಲೆ ದಾಳಿ ನಡೆಸಲಾಗಿದೆ. ಇದು ದೇಶದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಪರಿಗಣಿಸಲಾದ ಇದು ಕೇವಲ ಧಾರ್ಮಿಕ ತಾಣವಲ್ಲ, ಬದಲಾಗಿ ಸಾವಿರಾರು ವರ್ಷಗಳ ಭಾರತೀಯ ನಾಗರಿಕತೆ, ನಂಬಿಕೆ ಮತ್ತು ಹೋರಾಟದ ಕಥೆಯಾಗಿದೆ. 17 ಬಾರಿ ದಾಳಿ ನಡೆಸಲಾಗಿದ್ದರೂ ಪ್ರಮುಖ ದಾಳಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.
Updated on: Jan 09, 2026 | 1:05 PM

2026ನೇ ವರ್ಷವು ಸೋಮನಾಥ ದೇವಾಲಯದ ಇತಿಹಾಸದಲ್ಲಿ ಒಂದು ವಿಶೇಷ ಮೈಲಿಗಲ್ಲು. ಈ ವರ್ಷ ದೇವಾಲಯದ ಮೇಲಿನ ಮೊದಲ ದಾಳಿಯ 1000ನೇ ವರ್ಷದ ನೆನಪು ಜತೆಗೆ ಸೋಮನಾಥನನ್ನು ಮತ್ತೆ ಕಟ್ಟಿದ್ದೇವೆಂಬ ತೃಪ್ತಿ.ಜನವರಿ 8 ರಿಂದ 11 ರವರೆಗೆ ಇಲ್ಲಿ ಮೂರು ದಿನಗಳ ಸೋಮನಾಥ ಸ್ವಾಭಿಮಾನ ಪರ್ವವನ್ನು ಆಯೋಜಿಸಲಾಗುತ್ತಿದೆ. ಸೋಮನಾಥ ದೇವಾಲಯದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ. ಸಾಗರದ ಅಲೆಗಳೊಂದಿಗೆ ಉಸಿರಾಡುತ್ತಾ, ಕಾಲದ ವಿನಾಶದ ಹೊರತಾಗಿಯೂ ದೃಢವಾಗಿ ನಿಂತಿರುವ ಸೋಮನಾಥ ದೇವಾಲಯವು ಶಾಶ್ವತ ನಂಬಿಕೆಯ ಕೇಂದ್ರವಾಗಿ ಉಳಿದಿದೆ, ಅಲ್ಲಿ ವಿನಾಶವನ್ನು ಸೋಲಿಸಿ ನಂಬಿಕೆ ಜಯಗಳಿಸಿತು.

ಸೋಮನಾಥ ದೇವಾಲಯವು ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ವೆರಾವಲ್‌ನ ಪ್ರಭಾಸ್ ಪಟನ್‌ನ ಕಡಲತೀರದಲ್ಲಿದೆ. ಇದು ಶಿವನಿಗೆ ಅರ್ಪಿತವಾದ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು. ಸೋಮನಾಥ ದೇವಾಲಯವನ್ನು ಶಿವನಿಗೆ ಅರ್ಪಿತವಾದ ಭೂಮಿಯ ಮೇಲಿನ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.

ಸೋಮನಾಥ ದೇವಾಲಯವನ್ನು ಭಗವಾನ್ ಚಂದ್ರದೇವ ನಿರ್ಮಿಸಿದನು. ಸೋಮನಾಥ ಜ್ಯೋತಿರ್ಲಿಂಗವನ್ನು ಋಗ್ವೇದದಲ್ಲಿಯೂ ಉಲ್ಲೇಖಿಸಲಾಗಿದೆ. ಶಿವನ ಈ ದೇವಾಲಯವನ್ನು ಹಿಂದೂ ಧರ್ಮದ ಏರಿಕೆ ಮತ್ತು ಪತನದ ಸಂಕೇತವೆಂದು ಪರಿಗಣಿಸಲಾಗಿದೆ.

ಸೋಮನಾಥ ದೇವಾಲಯದ ಮೇಲೆ ಮೊಘಲರು ಮೂರು ಬಾರಿ ದಾಳಿ ಮಾಡಿ ಲೂಟಿ ಮಾಡಿದರು. ಆದರೆ ಪ್ರತಿ ಬಾರಿಯೂ ಸೋಮನಾಥ ದೇವಾಲಯ ಮತ್ತೆ ತಲೆ ಎತ್ತಿ ನಿಂತಿದೆ. 1026 ರಲ್ಲಿ, ಮುಸ್ಲಿಂ ದೊರೆ ಮೊಹಮ್ಮದ್ ಘಜ್ನಿ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಲೂಟಿ ಮಾಡಿ, ಜ್ಯೋತಿರ್ಲಿಂಗವನ್ನು ನಾಶಪಡಿಸಿದ್ದ. ಮೊಹಮ್ಮದ್ ಘಜ್ನವಿ ಶಿವಲಿಂಗವನ್ನು ಮುರಿದಿದ್ದ, 1169 ರ ಶಾಸನದ ಪ್ರಕಾರ, ಕುಮಾರಪಾಲ (ಆಡಳಿತ 1143-72) ಅದನ್ನು ಪುನರ್ನಿರ್ಮಿಸಿ ರತ್ನಗಳಿಂದ ಅಲಂಕರಿಸಿದ್ದ.

ಸೋಮನಾಥ ದೇವಾಲಯವು ಯಾವಾಗಲೂ ಮುಸ್ಲಿಂ ಆಡಳಿತಗಾರರ ಗುರಿಯಾಗಿತ್ತು. ಘಜ್ನಿ ನಂತರ, ದೇವಾಲಯವನ್ನು ಅಲಾವುದ್ದೀನ್ ಖಿಲ್ಜಿ ಗುರಿಯಾಗಿಸಿಕೊಂಡಿದ್ದ. 1299 ರಲ್ಲಿ ಗುಜರಾತ್ ಮೇಲೆ ಆಕ್ರಮಣ ಮಾಡಿದಾಗ, ಖಿಲ್ಜಿಯ ಸೈನ್ಯವು ವಘೇಲ ರಾಜ ಕರ್ಣನನ್ನು ಸೋಲಿಸಿ ಸೋಮನಾಥ ದೇವಾಲಯವನ್ನು ಲೂಟಿ ಮಾಡಿತು.ನಂತರ 1308 ರಲ್ಲಿ, ಸೌರಾಷ್ಟ್ರದ ಚೂಡಾಸಮ ರಾಜ ಮಹಿಪಾಲ ಈ ದೇವಾಲಯವನ್ನು ಪುನರ್ನಿರ್ಮಿಸಿದ್ದರು. ಶಿವಲಿಂಗವನ್ನು ಅವನ ಮಗ ಖೆಂಗರನು ಪ್ರತಿಷ್ಠಾಪಿಸಿದ್ದರು.

1395 ರಲ್ಲಿ, ಸೋಮನಾಥ ದೇವಾಲಯದ ಮೇಲೆ ಮೂರನೇ ಬಾರಿಗೆ ದಾಳಿ ಮಾಡಲಾಯಿತು. ಈ ದಾಳಿಯನ್ನು ದೆಹಲಿ ಸುಲ್ತಾನರ ಗುಜರಾತ್ ಗವರ್ನರ್ ಮತ್ತು ಗುಜರಾತ್ ಸುಲ್ತಾನರ ಸ್ಥಾಪಕ ಜಾಫರ್ ಖಾನ್ ನಡೆಸಿದ್ದಾಗಿತ್ತು. ಮುಸ್ಲಿಂ ಆಡಳಿತಗಾರರ ಆಳ್ವಿಕೆಯಲ್ಲಿ ಸೋಮನಾಥ ದೇವಾಲಯವು ಹಲವಾರು ದಾಳಿಗಳನ್ನು ಕಂಡಿತ್ತು, ಆದರೆ ಪ್ರತಿ ಬಾರಿಯೂ ಪುನರ್ನಿರ್ಮಿಸಲಾಯಿತು.

ಸೋಮನಾಥ ದೇವಾಲಯವು ಮೂಲತಃ ಚಿನ್ನದಿಂದ ಮಾಡಲ್ಪಟ್ಟಿತ್ತು. ಮೊದಲ ಆಕ್ರಮಣದ ಸಮಯದಲ್ಲಿ ಅದರ ಚಿನ್ನವನ್ನು ಲೂಟಿ ಮಾಡಲಾಯಿತು. ನಂತರ ಅದನ್ನು ಬೆಳ್ಳಿಯಲ್ಲಿ ಪುನರ್ನಿರ್ಮಿಸಲಾಯಿತು. ಮೊಘಲರ ಆಕ್ರಮಣವು ಅದನ್ನು ನಾಶಮಾಡಿತು. ಪ್ರಸ್ತುತ, ಇದು ಕಲ್ಲಿನಿಂದ ಮಾಡಲ್ಪಟ್ಟಿದೆ.

ಪದೇ ಪದೇ ದಾಳಿ ನಡೆದ ನಂತರ, ಭಾರತದ ಉಕ್ಕಿನ ಮನುಷ್ಯ ಮತ್ತು ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನವೆಂಬರ್ 12, 1947 ರಂದು ಜುನಾಗಢಕ್ಕೆ ಭೇಟಿ ನೀಡಿದಾಗ ದೇವಾಲಯದ ಭವ್ಯತೆಯು ಹೆಚ್ಚಾಯಿತು. ಅವರು ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ ಆದೇಶಿಸಿದರು. ದೇವಾಲಯದ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಹಣಕಾಸು ವ್ಯವಸ್ಥೆ ಮಾಡಲು ಅವರು ಸೋಮನಾಥ ಟ್ರಸ್ಟ್ ಅನ್ನು ಸ್ಥಾಪಿಸಿದರು. ತರುವಾಯ, ಮೇ 11, 1951 ರಂದು, ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನಾ ಸಮಾರಂಭವನ್ನು ನೆರವೇರಿಸಿದರು.

ಘಜ್ನಿಯ ರಾಜ ಸುಬುಕ್ ಟಿಗಿನ್ 997 ರಲ್ಲಿ ನಿಧನರಾದಾಗ, ಅವರ ಹಿರಿಯ ಮಗ ಮಹಮ್ಮದ್ ಸಿಂಹಾಸನವನ್ನು ಏರಿದ್ದ. ಅವನು ತನ್ನ ತಂದೆಯ ಸಿಂಹಾಸನದ ಆಯ್ಕೆಯಾಗಲೀ ಅಥವಾ ಅವನ ಆಯ್ಕೆಯ ಉತ್ತರಾಧಿಕಾರಿಯಾಗಲೀ ಅಲ್ಲದಿದ್ದರೂ, ಸುಬುಕ್ ಟಿಗಿನ್ ತನ್ನ ಕಿರಿಯ ಮಗ ಇಸ್ಮಾಯಿಲ್‌ನನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡಿದ್ದನ, ಅವನ ಮರಣದ ನಂತರ, ಸಿಂಹಾಸನವನ್ನು ಕತ್ತಿಯಿಂದ ನಿರ್ಧರಿಸಲಾಯಿತು, ಅವನ ತಂದೆಯ ಇಚ್ಛೆಯಿಂದಲ್ಲ.

ಅಬ್ರಹಾಂ ಎರಾಲಿಯವರ ಪುಸ್ತಕದ ಪ್ರಕಾರ, ಭಾರತದಲ್ಲಿನ ಹಿಂದೂ ದೇವಾಲಯಗಳು ಒಂದು ಕಾಲದಲ್ಲಿ ಶ್ರೀಮಂತವಾಗಿದ್ದವು. ಹೀಗಾಗಿ, ದೇವಾಲಯಗಳನ್ನು ನಾಶಮಾಡುವುದು ಮಹಮ್ಮದ್ ಘಜ್ನಿಯ ಪ್ಲ್ಯಾನ್ ಆಗಿತ್ತು. ಕೆಲವೊಮ್ಮೆ ಆತ ಊಹಿಸಲೂ ಸಾಧ್ಯವಾಗಷ್ಟು ನಿಧಿ ಆತನಿಗೆ ಸಿಕ್ಕಿತ್ತು. ಘಜ್ನಿ ಮೊಹಮ್ಮದ್ ತನ್ನ 32 ವರ್ಷದ ಆಳ್ವಿಕೆಯಲ್ಲಿ ಭಾರತದ ಮೇಲೆ 17 ದಾಳಿಗಳನ್ನು ನಡೆಸಿದ್ದ.
