ಆಸ್ತಿ ಸಂಬಂಧಿತ ವಿಚಾರದಲ್ಲಿ ಯಶಸ್ಸು ದೊರಕುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ, ಗುರುವಾರ ಭವಿಷ್ಯದ ಚಿಂತೆ, ಆರ್ಥಿಕ ಅಸ್ಥಿರತೆ, ಉದ್ಯೋಗದಲ್ಲಿ ಉನ್ನತಿ, ವಿದ್ಯಾಭ್ಯಾಸಕ್ಕೆ ತಡೆ ಇವೆಲ್ಲ ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಬುಧವಾರ, ತಿಥಿ: ದಶಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 – 54 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:06 : 15:42, ಯಮಘಂಡ ಕಾಲ 06:05 – 07:41, ಗುಳಿಕ ಕಾಲ 09:17 – 10:53
ತುಲಾ ರಾಶಿ: ಕಾಣೆಯಾಗಿರುವುದನ್ನು ಹುಡುಕುವಾಗಲೇ ಸಮಯ ಬಹಳಷ್ಟು ಹೋಗುವುದು. ನಿಮ್ಮ ಕುಟುಂಬ ಜೀವನವು ಉತ್ತಮವಾಗಿರಲಿದೆ. ಇಂದು ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವಿರಿ. ಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕಳೆದುಹೋದ ವಸ್ತುವಿನ ಮೌಲ್ಯವು ನಿಮಗೆ ಇಂದು ಗೊತ್ತಾಗದೇ ಹೋಗುವುದು. ಕಾರ್ಯಭಾರದಿಂದ ಕೆಲವೊಂದು ನಿರಾಶೆಗಳಾಗಬಹುದು, ಆದರೆ ದಿನದ ಕೊನೆಗೆ ಸಮಾಧಾನ ಸಿಗಲಿದೆ. ಆಸ್ತಿ ಸಂಬಂಧಿತ ವಿಚಾರದಲ್ಲಿ ಯಶಸ್ಸು ದೊರಕುವುದು. ಕೆಲವರನ್ನು ಹತ್ತಿರಕ್ಕಿಂತ ದೂರದಲ್ಲಿದ್ದಾಗಲೇ ಚೆನ್ನಾಗಿ ತಿಳಿಯಬಹುದು. ಸ್ನೇಹಿತರೊಂದಿಗೆ ಪ್ರಮುಖ ಚರ್ಚೆ ನಡೆಯಬಹುದು. ನಿಮ್ಮ ಪ್ರೀತಿಯಲ್ಲಿ ನೀವು ಯಾವುದೇ ಮಹತ್ತ್ವದ ಬದಲಾವಣೆ ಇಲ್ಲದೇ ಸಪ್ಪೆ ಎನಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ವಿವಾದವನ್ನು ಮಾಡುವಿರಿ. ದೂರದೂರಿಗೆ ಪ್ರಯಾಣ ಮಾಡುವ ನಿಮಗೆ ಕೆಲವು ಸಲಹೆಗಳು ಬೇಕಾಗುವುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಸಿಟ್ಟಿನಿಂದ ಖುಷಿಯ ವಾತಾವರಣ ಹಾಳಾಗುವುದು.
ವೃಶ್ಚಿಕ ರಾಶಿ: ನಿಮಗಿಂತ ಹಿರಿಯರ ಜೊತೆ ವಾಗ್ವಾದ ಮಾಡುವಿರಿ. ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಇಂದು ನಕಾರಾತ್ಮಕತೆಯ ವಿರುದ್ಧ ತೀವ್ರವಾದ ಹೋರಾಟ ಮಾಡುವಿರಿ. ನಿಮ್ಮ ಯೋಜನೆಯನ್ನು ಹೇಳಬಾರದ ಸ್ಥಿತಿಯಲ್ಲಿ ಹೇಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಆರೋಗ್ಯದ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಬಹುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಾದೀತು. ಕೋಪ ಮತ್ತು ಅಹಂಕಾರವು ವಿಷಯಗಳನ್ನು ಹಾಳುಮಾಡಬಹುದು. ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಒಳ್ಳೆಯ ಸ್ಥಾನ ಲಭ್ಯವಾಗಲಿದೆ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವನ್ನು ಸತತ ಪ್ರಯತ್ನದಿಂದ ಪೂರ್ಣಮಾಡುವಿರಿ. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ.
ಧನು ರಾಶಿ: ಪರರ ಸಂಕಟಕ್ಕೆ ಸಣ್ಣ ಸಹಕಾರ ಕೊಡುವಿರಿ. ಇಂದು ನೀವು ಹೊಸ ಉತ್ಸಾಹದಿಂದ ಏನನ್ನಾದರೂ ಅಸಂಬದ್ಧ ಮಾಡಬಹುದು. ಆದಷ್ಟು ನಿಮ್ಮ ನಿಯಂತ್ರಣವನ್ನು ಬಿಟ್ಟು ಕದಲುವುದು ಬೇಡ. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ನಿಮಗೆ ಆಗದಿರುವುದನ್ನು ಬೇರೆಯವರಿಂದ ಮಾಡಿಸುವಿರಿ. ನಿಮ್ಮ ಕಾರ್ಯಕ್ಕೆ ಹಿರಿಯರಿಂದ ಮೆಚ್ಚುಗೆ ಸಿಗಬಹುದು. ವ್ಯಾಪಾರದ ತೊಂದರೆಗಳು ನಿಧಾನವಾಗಿ ಪರಿಹಾರ ಕಾಣುತ್ತವೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ನಿಮ್ಮ ಉತ್ಸಾಹವು ಇತರರಿಗೆ ಮಾರ್ಗದರ್ಶನವಾದೀತು. ಸಾಲ ಅಥವಾ ಸಾಲದ ಭಾದೆ ತಗ್ಗುವ ಲಕ್ಷಣಗಳಿವೆ. ಮನಸ್ಸಿನಲ್ಲಿ ಅಳವಾದ ಯೋಚನೆಗಳಿರಬಹುದು. ಒಂಟಿತನದಿಂದ ದೂರವಿರಲು ಪ್ರಯತ್ನಿಸಿ. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಸಿಕ್ಕ ಆದರದಿಂದ ಉತ್ಸಾಹವು ಬರಲಿದೆ. ನಿಮ್ಮ ಸಾವಧಾನತೆಯು ಕಿರಿಕಿರಿಯನ್ನು ಇತರರಿಗೆ ಕೊಟ್ಟೀತು.
ಮಕರ ರಾಶಿ: ನಿಮ್ಮೆದುರು ವಿದ್ಯಾವಂತರಿಗಿಂತ ಬುದ್ಧಿವಂತರೇ ಗೆಲ್ಲುವರು. ಯಾರನ್ನೋ ಅಪಹಾಸ್ಯ ಮಾಡಲು ಹೋಗಿ ನೋವನ್ನು ಕೊಡುವಿರಿ. ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಪ್ರವಾಸವನ್ನು ಮಾಡಿ ಆನಂದಿಸುವಿರಿ. ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ನಿಮ್ಮನ್ನು ಅರಸಿಕೊಂಡ ಬರುವ ಗೌರವವೇ ನಿಜವಾದ ಸಮ್ಮಾನ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ನೀಡಲಿದೆ. ವೃತ್ತಿಪರ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ನೀವು ಅದನ್ನು ಸಮರ್ಥವಾಗಿ ನಿರ್ವಹಿಸಬಹುದು. ಹಣಕಾಸು ವಿಚಾರಗಳು ಸಾಧಾರಣವಾಗಿರಬಹುದು. ವಾಹನ ಖರೀದಿಯಿಂದ ಮೋಸ ಹೋಗುವಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಯಾರದೋ ಅನುಭವವು ನಿಮ್ಮದಾಗದು. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ದೂರದೃಷ್ಟಿಯು ನಿಮ್ಮ ಚಿಂತನೆಗೆ ಇರಲಿ.
ಕುಂಭ ರಾಶಿ: ಬೆಳೆಸಿದವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ತಾಳ್ಮೆಯಿಂದ ಗಮನಿಸುಕೊಂಡು. ಕೆಟ್ಟ ಸಮಯವು ಬರಬಾರದೆಂದು ಇಷ್ಟದೇವರನ್ನು ಪಾರ್ಥಿಸಿ. ನೂತನ ಗೃಹಾರಂಭದ ಕನಸು ಕಾಣಲಿದ್ದೀರಿ. ನಿಮ್ಮ ಮನಃಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ಯಾವುದೇ ಪರಿವರ್ತನೆಗೆ ಸಮಯವೂ ಅವಶ್ಯಕ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರುವುದು. ಆಸ್ತಿ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದಿರಿ. ಮನಸ್ಸಿನಲ್ಲಿ ಕೆಲವು ಗೊಂದಲಗಳು ಬರುವ ಸಾಧ್ಯತೆ ಇದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಬೇರೆಯವರ ನಕಾರಾತ್ಮಕ ಮಾತುಗಳಿಗೆ ಕಿವಿಗೊಟ್ಟರೆ ನಿಮ್ಮ ಕೆಲಸ ಹಿಂದುಳಿಯುವುದು. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ.
ಮೀನ ರಾಶಿ: ಸ್ವಂತ ವಸ್ತುವಾದರೂ ನೀವು ಬಳಸದ ಸ್ಥಿತಿಯನ್ನು ತಂದುಕೊಳ್ಳವಿರಿ. ಇಂದು ನೀವು ಅಕಾರಣವಾಗಿ ಮನಸ್ಸಿನೊಳಗೇ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ಎದುರು ಮಾತನಾಡದೇ ಸುಮ್ಮನಿರಲಾಗದು. ಭವಿಷ್ಯದ ತುಂಬಾ ಆಲೋಚನೆಗಳನ್ನು ಮಾಡುವ ಅವಶ್ಯತೆ ಇಲ್ಲ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಯಾವುದೇ ಸಮಸ್ಯೆಗೆ ಯಾರಿಂದಲಾದರೂ ಪರಿಹಾರವಿದೆ. ಹಣಕಾಸು ವಿಚಾರದಲ್ಲಿ ಚಿಂತೆ ತಗ್ಗುವ ಸಾಧ್ಯತೆ. ಕುಟುಂಬದ ಸದಸ್ಯರೊಂದಿಗೆ ಸೌಹಾರ್ದತೆ ಇರುವದು. ಯಾರಾದರೂ ಸ್ನೇಹಿತರಿಂದ ಸಂತಸದ ಸುದ್ದಿ ಬರಬಹುದು. ನಿಮ್ಮ ಗುರಿಯ ಸಾಧನೆಯವರೆಗೆ ಮೌನವಿದ್ದಷ್ಟೂ ಒಳ್ಳೆಯದೇ. ವಿವಾಹದ ಸಂಭ್ರಮ ಮನೆಯಲ್ಲಿ ಇರುವುದು. ಗೌರವವನ್ನು ನಿರೀಕ್ಷಿಸದಿದ್ದರೂ ನಿಮಗೆ ಇಂದು ಲಭ್ಯವಾಗಲಿದೆ. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ.