ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
ವಿಜಯಪುರದ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಯುವಕನೊಬ್ಬ ವಿಶಿಷ್ಟ ಸಾಹಸ ಕೈಗೊಂಡಿದ್ದಾರೆ. ಪ್ರತಿ ಮನೆಗೆ ಒಂದು ಗೋವು ಸಾಕುವಂತಾಗಲಿ, ಗೋಸಂಕ್ಷಣೆಯಾಗಲಿ ಎಂಬ ಹರಕೆ ಹೊತ್ತು 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಆರಂಭಿಸಿದ್ದಾರೆ. 2 ತಿಂಗಳಲ್ಲಿ ಅಯೋಧ್ಯೆ ತಲುಪುವ ಗುರಿ ಹೊಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ವಿಜಯಪುರ, ಜನವರಿ 5: ಶ್ರೀರಾಮನ ಭಕ್ತರೊಬ್ಬರು 56 ಕೆಜಿ ತೂಕದ ಗೋಧಿ ಮೂಟೆ ಹೊತ್ತುಕೊಂಡು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ ಎಂಬವರು ಗೋಧಿ ಮೂಟೆ ಹೊತ್ತು ಪಾದಯಾತ್ರೆ ಹೊರಟವರು. ಇದಕ್ಕಾಗಿಯೇ ಕೇದಾರಲಿಂಗ ಕುಂಬಾರ ಪ್ರತಿನಿತ್ಯ ಮೂಟೆ ಹೊತ್ತು 20 ಕಿಮೀ ನಡೆದಾಡಿ ಅಭ್ಯಾಸ ಮಾಡಿದ್ದರು.
ಗೋಸಂಕ್ಷಣೆ ಉದ್ದೇಶ, ಪ್ರತಿ ಮನೆಗೆ ಒಂದು ಗೋವು ಸಾಕುವಂತಾಗಲಿ ಎಂದು ರಾಮನಿಗೆ ಹರಕೆ ಹೊತ್ತು ಈ ಕೈಂಕರ್ಯ ಕೈಗೊಂಡಿದ್ದೇನೆ ಎಂದು ಕೇದಾರಲಿಂಗ ಕುಂಬಾರ ತಿಳಿಸಿದ್ದಾರೆ. ಸತತ ಎರಡು ತಿಂಗಳು ಪಾದಯಾತ್ರೆ ಮೂಲಕ ಸಾಗಿ ಅಯೋಧ್ಯೆ ತಲುಪುತ್ತೇನೆಂದು ತಿಳಿಸಿದ್ದಾರೆ. ಕೇದಾರಲಿಂಗ ಕುಂಬಾರ ಯಾತ್ರೆಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿ ನೆರವು ನೀಡಿದ್ದಾರೆ.
