AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ಇಂದೋರ್​ಗೆ ನೀರು ಪೂರೈಸುತ್ತಿದ್ದ ಟ್ಯಾಂಕಿನಲ್ಲಿತ್ತು ವ್ಯಕ್ತಿಯ ಶವ, 30 ವರ್ಷಗಳ ಹಿಂದೆ ಏನಾಗಿತ್ತು?

ಇಂದೋರ್‌ನ ಭಾಗೀರಥಪುರದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿ ಗಂಭೀರ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದೆ. ಅತಿಸಾರದಿಂದ 142 ಮಂದಿ ಆಸ್ಪತ್ರೆ ಸೇರಿದ್ದು, 11 ಮಂದಿ ಐಸಿಯುನಲ್ಲಿದ್ದಾರೆ. ಈ ಹಿಂದೆ 30 ವರ್ಷಗಳ ಹಿಂದೆ ಇದೇ ರೀತಿಯ ಕಲುಷಿತ ನೀರಿನ ಘಟನೆ ಸಂಭವಿಸಿತ್ತು. ಆಡಳಿತವು ಆರು ಸಾವುಗಳನ್ನು ದೃಢಪಡಿಸಿದೆ. ಆರೋಗ್ಯ ತಂಡಗಳು ಸಮೀಕ್ಷೆ ನಡೆಸುತ್ತಿದ್ದು, ಸೋಂಕಿನ ಮೂಲ ಪತ್ತೆಗೆ ಪ್ರಯತ್ನಿಸುತ್ತಿವೆ.

ಇಡೀ ಇಂದೋರ್​ಗೆ ನೀರು ಪೂರೈಸುತ್ತಿದ್ದ ಟ್ಯಾಂಕಿನಲ್ಲಿತ್ತು ವ್ಯಕ್ತಿಯ ಶವ, 30 ವರ್ಷಗಳ ಹಿಂದೆ ಏನಾಗಿತ್ತು?
ಟ್ಯಾಂಕ್
ನಯನಾ ರಾಜೀವ್
|

Updated on: Jan 05, 2026 | 11:14 AM

Share

ಇಂದೋರ್, ಜನವರಿ 05: ಇಂದೋರ್​ನಲ್ಲಿ ಚರಂಡಿ ನೀರು( Sewage Water) ಕುಡಿಯುವ ನೀರಿನ ಜತೆ ಮಿಶ್ರಣವಾಗಿ ಹಲವು ಜನರ ಜೀವಕ್ಕೆ ಕುತ್ತು ತಂದಿದೆ. ಆದರೆ ಭಾಗೀರಥಪುರದಲ್ಲಿ ಈ ರೀತಿಯ ದುರಂತ ಹೊಸದೇನಲ್ಲ. ಇಂದೋರ್​ 30 ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಅಲ್ಲಿನ ಜನತೆ ನೆನಪಿಸಿಕೊಂಡಿದ್ದಾರೆ. ಸುಭಾಷ್ ಚೌಕ್ ಟ್ಯಾಂಕ್‌ನಲ್ಲಿ ಕೊಳೆತ ಶವವೊಂದು ಪತ್ತೆಯಾಗಿತ್ತು. ಸಾವಿರಾರು ಜನರು ಆ ಟ್ಯಾಂಕಿನ ನೀರನ್ನೇ ಕುಡಿದಿದ್ದರು.

ಪಶ್ಚಿಮ ಇಂದೋರ್‌ನ ಸಾವಿರಾರು ಮನೆಗಳಿಗೆ ವಾರಗಳವರೆಗೆ ನೀರು ಪೂರೈಸುತ್ತಿದ್ದ ಟ್ಯಾಂಕ್‌ನೊಳಗೆ ಮಾನವ ಅಸ್ಥಿಪಂಜರ ಪತ್ತೆಯಾಗಿತ್ತು. ಜನರು ಅನಾರೋಗ್ಯಕ್ಕೆ ಒಳಗಾಗುತ್ತಲೇ ಇದ್ದರು. ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದರು. ಆದರೆ ನೀರಿನ ಟ್ಯಾಂಕಿನಲ್ಲಿ ಕೊಳೆತ ಶವವಿರಬಹುದು ಎನ್ನುವ ಸಣ್ಣ ಕಲ್ಪನೆಯೂ ಜನರಿಗಿರಲಿಲ್ಲ.

ನಲ್ಲಿಗಳಲ್ಲಿ ವಾಸನೆ ಬರಲು ಶುರುವಾಗಿತ್ತು ಆಗ ಟ್ಯಾಂಕ್ ತೆರೆದು ನೋಡಿದಾಗ ಅಲ್ಲಿದ್ದ ಅಸ್ಥಪಂಜರ ಕಂಡು ಜನರು ಗಾಬರಿಗೊಂಡಿದ್ದರು.ಮುನ್ಸಿಪಲ್ ಕಾರ್ಪೊರೇಷನ್ ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿತ್ತು ಮತ್ತು ಮಧುಕರ್ ವರ್ಮಾ ಮೇಯರ್ ಆಗಿದ್ದರು. ಇಂದಿನ ಪರಿಸ್ಥಿತಿಯೂ ಅಷ್ಟೇ ಗಂಭೀರವಾಗಿದೆ.ಭಾಗೀರಥಪುರದ ಇತ್ತೀಚಿನ ಅಂಕಿಅಂಶಗಳು ಆತಂಕಕಾರಿಯಾಗಿವೆ.

ಮತ್ತಷ್ಟು ಓದಿ: ಇಂದೋರ್: ಚರಂಡಿ ನೀರಿನ ಜತೆ ಮಿಶ್ರಣವಾಗಿದ್ದ ನೀರು ಕುಡಿದು 3 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಕಲುಷಿತ ಕುಡಿಯುವ ನೀರಿನಿಂದಾಗಿ ಭಗೀರಥಪುರದಲ್ಲಿ ಅತಿಸಾರ ಹರಡುವಿಕೆಯಿಂದಾಗಿ, 142 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ 11 ಜನರು ಐಸಿಯುನಲ್ಲಿದ್ದಾರೆ. ಏತನ್ಮಧ್ಯೆ, ಸೋಂಕಿನ ಮೂಲ ತಿಳಿದುಬಂದಿಲ್ಲ. ಭಾಗೀರಥಪುರದಲ್ಲಿ 9,000 ಕ್ಕೂ ಹೆಚ್ಚು ಜನರ ತಪಾಸಣೆಯ ಸಮಯದಲ್ಲಿ 20 ಹೊಸ ಪ್ರಕರಣಗಳು ಕಂಡುಬಂದಿವೆ.

ಭಾಗೀರಥಪುರದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಮಯದಲ್ಲಿ ಆರೋಗ್ಯ ತಂಡಗಳು 2,354 ಮನೆಗಳಿಂದ 9,416 ಜನರನ್ನು ಪರೀಕ್ಷಿಸಿವೆ. ಅಲ್ಲಿ ಆರು ಜನರು ಕಲುಷಿತ ನೀರಿನಿಂದ ಸಾವನ್ನಪ್ಪಿದ್ದಾರೆ ಮತ್ತು 20 ಹೊಸ ಪ್ರಕರಣಗಳನ್ನು ಗುರುತಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕ ರೋಗ ಹರಡಿದ ನಂತರ 398 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಪೈಕಿ 256 ಜನರನ್ನು ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 142 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದರಲ್ಲಿ 11 ಮಂದಿ ಐಸಿಯುನಲ್ಲಿದ್ದಾರೆ ಎಂದು ಅವರು ಹೇಳಿದರು.

ಆರೋಗ್ಯ ಬಿಕ್ಕಟ್ಟಿನ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾದ ರಾಷ್ಟ್ರೀಯ ಬ್ಯಾಕ್ಟೀರಿಯಾ ಸೋಂಕು ಸಂಶೋಧನಾ ಸಂಸ್ಥೆಯ (NIRBI) ತಂಡವು ಇಂದೋರ್‌ಗೆ ಆಗಮಿಸಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮಾಧವ ಪ್ರಸಾದ್ ಹಸಾನಿ ಹೇಳಿದ್ದಾರೆ. ಆಡಳಿತವು ಇದುವರೆಗೆ ಆರು ಸಾವುಗಳನ್ನು ದೃಢಪಡಿಸಿದೆ. ಆರು ತಿಂಗಳ ಮಗು ಸೇರಿದಂತೆ 16 ಜನರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ