Video: ಕುಡಿದ ಮತ್ತಿನಲ್ಲಿ ಹಾವನ್ನು ಕೈಗೆ ಸುತ್ತಿಕೊಂಡು ಟ್ರಾಫಿಕ್ ಪೊಲೀಸ್ಗೆ ಆವಾಜ್ ಹಾಕಿದ ಆಟೋ ಡ್ರೈವರ್
ಆಟೋ ಡ್ರೈವರ್ ಕುಡಿದ ಮತ್ತಿನಲ್ಲಿ ಹಾವನ್ನು ಕೈಯಲ್ಲಿ ಸುತ್ತಿಕೊಂಡು ಟ್ರಾಫಿಕ್ ಪೊಲೀಸರನ್ನು ಬೆದರಿಸುವ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್ನ ಹಳೆಯ ನಗರದ ಚಂದ್ರಾಯನಗುಟ್ಟ ಕ್ರಾಸ್ರೋಡ್ಸ್ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದಾಗ, ಈ ಚಾಲಕನಿದ್ದ ಆಟೋವನ್ನು ಕೂಡ ನಿಲ್ಲಿಸಿದ್ದಾರೆ. ಆಗ ಕೋಪಗೊಂಡ ಚಾಲಕ ಕೈಯಲ್ಲಿ ಜೀವಂತ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸರನ್ನು ಬೆದರಿಸಿದ್ದಾರೆ.
ಹೈದರಾಬಾದ್, ಜನವರಿ 05: ಆಟೋ ಡ್ರೈವರ್ ಕುಡಿದ ಮತ್ತಿನಲ್ಲಿ ಹಾವನ್ನು ಕೈಗೆ ಸುತ್ತಿಕೊಂಡು ಟ್ರಾಫಿಕ್ ಪೊಲೀಸರನ್ನು ಬೆದರಿಸುವ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್ನ ಹಳೆಯ ನಗರದ ಚಂದ್ರಾಯನಗುಟ್ಟ ಕ್ರಾಸ್ರೋಡ್ಸ್ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದಾಗ, ಈ ಚಾಲಕನಿದ್ದ ಆಟೋವನ್ನು ಕೂಡ ನಿಲ್ಲಿಸಿದ್ದಾರೆ. ಆಗ ಕೋಪಗೊಂಡ ಚಾಲಕ ಕೈಯಲ್ಲಿ ಜೀವಂತ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸರನ್ನು ಬೆದರಿಸಿದ್ದಾರೆ.
ಜನನಿಬಿಡ ಜಂಕ್ಷನ್‌ನಲ್ಲಿ ಭೀತಿ ಸೃಷ್ಟಿಸಿದ್ದ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚಾಲಕ ಆರಂಭದಲ್ಲಿ ಸಂಚಾರ ಪೊಲೀಸರಿಗೆ ಕೈಮುಗಿದು ಕ್ಷಮೆಯಾಚಿಸಿ ತನ್ನ ವಾಹನವನ್ನು ಹಿಂತಿರುಗಿಸುವಂತೆ ವಿನಂತಿಸುತ್ತಿರುವುದನ್ನು ನೋಡಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 05, 2026 09:50 AM

