AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್

ಝಾಹಿರ್ ಯೂಸುಫ್
|

Updated on: Jan 05, 2026 | 8:59 AM

Share

Desert Vipers vs MI Emirates, Final: 183 ರನ್​ಗಳ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 18.3 ಓವರ್​ಗಳಲ್ಲಿ 136 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 46 ರನ್​​ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿಗೆ ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ದುಬೈ ಇಂಟರ್​​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಟರ್​​ನ್ಯಾಷನಲ್ ಲೀಗ್ ಟಿ20 ಫೈನಲ್ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡಕ್ಕೆ ಸೋಲುಣಿಸಿ ಡೆಸರ್ಟ್ ವೈಪರ್ಸ್ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ಪರ ನಾಯಕ ಸ್ಯಾಮ್ ಕರನ್ 51 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.

183 ರನ್​ಗಳ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 18.3 ಓವರ್​ಗಳಲ್ಲಿ 136 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 46 ರನ್​​ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿಗೆ ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಎಂಐ ಎಮಿರೇಟ್ಸ್ (ಪ್ಲೇಯಿಂಗ್ XI): ಮುಹಮ್ಮದ್ ವಸೀಮ್, ಆಂಡ್ರೆ ಫ್ಲೆಚರ್, ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್), ತಜೀಂದರ್ ಧಿಲ್ಲೋನ್, ಕೀರನ್ ಪೊಲಾರ್ಡ್(ನಾಯಕ), ಶಕೀಬ್ ಅಲ್ ಹಸನ್, ರೊಮಾರಿಯೋ ಶೆಫರ್ಡ್, ಅರಬ್ ಗುಲ್ ಮೊಮಂಡ್, ಅಲ್ಲಾ ಘಜನ್ಫರ್, ಮುಹಮ್ಮದ್ ರೋಹಿದ್ ಖಾನ್, ಫಝಲ್ಹಕ್ಫಾರೂಕಿ.

ಡೆಸರ್ಟ್ ವೈಪರ್ಸ್ (ಪ್ಲೇಯಿಂಗ್ XI): ಫಖರ್ ಝಮಾನ್, ಮ್ಯಾಕ್ಸ್ ಹೋಲ್ಡನ್, ಟಾಮ್ ಬ್ರೂಸ್ (ವಿಕೆಟ್ ಕೀಪರ್), ಜೇಸನ್ ರಾಯ್, ಸ್ಯಾಮ್ ಕರನ್ (ನಾಯಕ), ಹಸನ್ ನವಾಝ್, ಡಾನ್ ಲಾರೆನ್ಸ್, ವೃತ್ಯ ಅರವಿಂದ್, ಖುಝೈಮಾ ತನ್ವೀರ್, ನಸೀಮ್ ಶಾ, ಉಸ್ಮಾನ್ ತಾರಿಕ್.