AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 04 January: ಇಂದು ಈ ರಾಶಿಯವರು ಪ್ರೇಮಿಗೆ ಸಮಯ ಕೊಡುವರು

ದಿನ ಭವಿಷ್ಯ ಜನವರಿ 04,​​ 2026: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಭಾನುವಾರ ನೋವು ಪ್ರಕಟ, ಉದ್ಯೋಗದಲ್ಲಿ ಅಸಮಾಧಾನ, ಬೆಳವಣಿಗೆಗೆ ಅಡೆತಡೆ, ದೂರ ವಾಸ, ಇವೆಲ್ಲ ಇಂದಿನ ವಿಶೇಷ.

Horoscope Today 04 January: ಇಂದು ಈ ರಾಶಿಯವರು ಪ್ರೇಮಿಗೆ ಸಮಯ ಕೊಡುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 04, 2026 | 12:58 AM

Share

ಮೇಷ ರಾಶಿ :

ವಿಭಿನ್ನ ಯೋಚನೆಗಳಿಗೆ ಮಾನ್ಯತೆ ಸಿಗುತ್ತದೆ. ಸ್ನೇಹಿತರ ಸಹಕಾರದಿಂದ ಕೆಲಸ ಸುಲಭ. ಹಣಕಾಸಿನಲ್ಲಿ ಸುಧಾರಣೆ. ತಾಂತ್ರಿಕ ಅಥವಾ ಹೊಸ ಯೋಜನೆಗೆ ಅನುಕೂಲಕರ ದಿನ. ಹಿರಿಯರನ್ನು ಅನಾದರ ಮಾಡಿದಂತೆ ಅನ್ನಿಸಬಹುದು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ವೇತನವು ಹೆಚ್ಚಾಗಬಹುದು. ಬೆನ್ನುತಟ್ಟಿಸಿಕೊಳ್ಳಯವುದೂ ಒಂದು‌ ಕಲೆ. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಮಕ್ಕಳ ಆರೋಗ್ಯಕ್ಕೆ ಖರ್ಚು ಮಾಡಬೇಕಾದೀತು. ಅಂತರಂಗದ ಧ್ವನಿ ಬಲವಾಗಿರುತ್ತದೆ. ಭಾವನಾತ್ಮಕ ನಿರ್ಧಾರಗಳಲ್ಲಿ ಸ್ಪಷ್ಟತೆ ಅಗತ್ಯ. ಉದ್ಯೋಗದಲ್ಲಿ ನಿಧಾನ ಪ್ರಗತಿ. ಹಣಕಾಸಿನಲ್ಲಿ ಮಿತ ವ್ಯಯ ಒಳಿತು. ಧ್ಯಾನ ಅಥವಾ ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ ಪ್ರಸಿದ್ಧ ಸಂಸ್ಥೆಗೆ ಹೂಡಿಕೆ ಮಾಡಲಿದ್ದೀರಿ. ಯಾರ ಜೊತೆಗಾದರೂ ವಿವಾದವಾಗುವ ಸಾಧ್ಯತೆ ಇದೆ. ಇಂದು ಚರಾಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಅಪಮಾನದಿಂದ ದ್ವೇಷವುಂಟಾಗಬಹುದು.

ವೃಷಭ ರಾಶಿ:

ಹೊಣೆಗಾರಿಕೆ ಹೆಚ್ಚುವ ದಿನ. ಶ್ರಮಕ್ಕೆ ತಕ್ಕ ಗೌರವ ಸಿಗುವ ಸೂಚನೆ. ಉದ್ಯೋಗದಲ್ಲಿ ಹಿರಿಯರಿಂದ ಬೆಂಬಲ. ಹಣಕಾಸಿನಲ್ಲಿ ನಿಧಾನವಾದರೂ ಭದ್ರತೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಬೇರೆ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಆರೋಗ್ಯದಲ್ಲಿ ದೈಹಿಕ ಆಯಾಸ. ಸಮಯಪಾಲನೆ ಮಾಡಿದರೆ ಎಲ್ಲ ಕೆಲಸ ಸರಾಗವಾಗಿ ಮುಗಿಯುತ್ತವೆ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು. ಬೇಡವೆಂದರೂ ಬೇಡದ ವಿಚಾರಗಳು ತಲೆಯಲ್ಲಿ ಗಿರಿಕಿಯಾಗಬಹುದು.

ಮಿಥುನ ರಾಶಿ:

ಹೊಸ ಗುರಿಗಳ ಬಗ್ಗೆ ಚಿಂತನೆ. ವಿದ್ಯಾಭ್ಯಾಸ ಅಥವಾ ತರಬೇತಿಗೆ ಒಳ್ಳೆಯ ದಿನ. ದೂರ ಪ್ರಯಾಣ ಅಥವಾ ವಿದೇಶ ಸಂಪರ್ಕ ಸಾಧ್ಯ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಶಿಕ್ಷಕರು ವೇತನವನ್ನು ಹೆಚ್ಚಿಸಿಕೊಳ್ಳುವರು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಬೇರೆಯವರಿಂದ ದೂರನ್ನೂ ಕೇಳಬೇಕಾದೀತು. ಆತುರದಿಂದ ಮಾಡಿದ ಮಾತು ಸಂಬಂಧಕ್ಕೆ ಧಕ್ಕೆ ತರಬಹುದು. ಸಂಯಮದಿಂದ ನಡೆದುಕೊಂಡರೆ ದಿನ ಫಲಪ್ರದ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಲಲಿತಕಲೆಗಳಲ್ಲಿ ನಿಮ್ಮ ಛಾಪು ಮೂಡಿಸುವ ಪ್ರಯತ್ನ ಇರುವುದು. ಕೆಲವನ್ನು ನೀವು ಅನುಭವಿಸುವುದು ಅನಿವಾರ್ಯ.

ಕರ್ಕಾಟಕ ರಾಶಿ:

ಗುಪ್ತ ಚಿಂತನೆಗಳು ಹೆಚ್ಚಾಗುತ್ತವೆ. ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಕೆಲಸದಲ್ಲಿ ಒತ್ತಡ ಇದ್ದರೂ ಫಲ ಸಿಗುತ್ತದೆ. ಶತ್ರುಗಳಿಂದ ಎಚ್ಚರ. ಹಣಕಾಸಿನಲ್ಲಿ ನಿಧಾನ ಪ್ರಗತಿ. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ಒಪ್ಪಿಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಆಗದು.‌ ಇಂದು ಬಹಳ ವಾಗ್ವಾದದ ಅನಂತರ ಸಂಗಾತಿಯ ಬೆಂಬಲವು ನಿಮ್ಮ‌‌ ಕಾರ್ಯಗಳಿಗೆ ಸಿಗಲಿದೆ. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಕ್ಕೆ ತಯಾರಿ ಆಗಬಹುದು. ಹಳೆಯ ರೋಗಗಳು ಮರುಕಳಿಸದಂತೆ ಎಚ್ಚರಿಕೆ ಬೇಕಾದೀತು. ನೆರಮನೆಯವರ ಜೊತೆ ವಾದ ಮಾಡಬೇಕಾದೀತು. ಎಲ್ಲವನ್ನೂ ಬೇರೆಯವರ ದೃಷ್ಟಿಯಲ್ಲಿ ನೋಡುವುದು ಸರಿಯಾಗದು.

ಸಿಂಹ ರಾಶಿ:

ಯೋಜಿತ ಕಾರ್ಯಗಳು ಫಲ ನೀಡುತ್ತವೆ. ಲೆಕ್ಕಾಚಾರದಲ್ಲಿ ತಪ್ಪು ಮಾಡದಿರಿ. ಉದ್ಯೋಗದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ. ಆರೋಗ್ಯದಲ್ಲಿ ಹೊಟ್ಟೆ ಸಂಬಂಧಿತ ತೊಂದರೆ. ಮೇಲಿಂದ‌ ಮೇಲೆ‌ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ಮೌನ ಮತ್ತು ಸಹನೆ ನಿಮ್ಮ ಶಕ್ತಿಯಾಗಲಿದೆ. ಸಂಜೆ ವೇಳೆಗೆ ಮನಃಶಾಂತಿ. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಆಗಮನದಿಂದ ಸಂತೋಷವು ಇರಲಿದೆ. ರಾಜಕೀಯ ನೇತಾರರ ಸಹವಾಸವನ್ನು ಹೇಗೋ ಸಂಪಾದಿಸುವಿರಿ. ಜೊತೆಗಾರರಲ್ಲಿ ಭಾವೈಕ್ಯತೆಯನ್ನು ಸಾಧಿಸಲು ಪ್ರಯತ್ನಿಸುವರು.

ಕನ್ಯಾ ರಾಶಿ:

ಸಂಬಂಧಗಳಲ್ಲಿ ಸಮತೋಲನ ಅಗತ್ಯ. ವಿವಾದ ಮಾತಿನ ಮೂಲಕವೇ ಬಗೆಹರಿಯುತ್ತದೆ. ಉದ್ಯೋಗದಲ್ಲಿ ಸಹಕಾರ ಸಿಗುತ್ತದೆ. ಹಣಕಾಸಿನಲ್ಲಿ ಸ್ಥಿರತೆ. ಕಲಾತ್ಮಕ ಅಥವಾ ಸೃಜನಾತ್ಮಕ ಕೆಲಸಗಳಿಗೆ ಉತ್ತಮ ದಿನ. ವಿದ್ಯಾಭ್ಯಾಸವು ಪೂರ್ಣ ಸಮಾಧಾನ ಕೊಡದು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಮುಂದುವರಿಯುವಿರಿ. ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸಿನ ಜೊತೆಗೆ ಬುದ್ಧಿಯನ್ನೂ ಬಳಸಿ. ಕುಟುಂಬ ಜೊತೆ ಸಮಯ ಕಳೆಯಲು ಆಗದು. ನಿಮಗೆ ಕಾಣಿಸಿದ್ದನ್ನು ಮಾತ್ರ ನಂಬುವಿರಿ. ಯಾರ ಮೇಲೋ ಅವಲಂಬಿತರಾಗಿ ಇರುವುದು ನಿಮಗೆ ಇಷ್ಟವಾಗದು.

ತುಲಾ ರಾಶಿ:

ಗೌರವ ಮತ್ತು ಪ್ರಭಾವ ಹೆಚ್ಚುವ ದಿನ. ನಾಯಕತ್ವ ಗುಣಗಳು ಹೊರಹೊಮ್ಮುತ್ತವೆ. ಆದರೆ ಅಹಂಕಾರದಿಂದ ದೂರವಿರುವುದು ಅಗತ್ಯ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ಸತ್ಯವನ್ನು ಮರೆಮಾಚಲು ತಂತ್ರವನ್ನು ಹೆಣೆಯಬಹುದು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಹಣಕಾಸು ಸರಾಸರಿ. ಸಂಗಾತಿಯ ಮಾತು ಗಮನಿಸಿದರೆ ಸಂಬಂಧ ಬಲವಾಗುತ್ತದೆ. ಸಂಜೆ ವೇಳೆಗೆ ಯಶಸ್ಸಿನ ಅನುಭವ. ಆಕರ್ಷಕವಾಗಿ‌ ನೀವು ಇಂದು ಕಾಣಲಿದ್ದೀರಿ. ಮನೆಯ ನಿರ್ಮಣಾದ ಕನಸನ್ನು ಕಾಣುವಿರಿ.‌ ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ.

ವೃಶ್ಚಿಕ ರಾಶಿ:

ಭಾವನಾತ್ಮಕ ಒತ್ತಡ ಹೆಚ್ಚಾಗಬಹುದು. ಹಳೆಯ ಘಟನೆಗಳು ನೆನಪಿಗೆ ಬರುತ್ತವೆ. ಕೆಲಸದಲ್ಲಿ ಗಮನ ತಪ್ಪದಂತೆ ನೋಡಿಕೊಳ್ಳಿ. ಹಣಕಾಸಿನಲ್ಲಿ ಅಪ್ರತ್ಯಾಶಿತ ಖರ್ಚು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ತಾಳ್ಮೆ ಮತ್ತು ಮೌನವೇ ಇಂದು ನಿಮ್ಮ ರಕ್ಷಣೆ. ತಾಯಿಯ ಆಶೀರ್ವಾದದಿಂದ ಆತ್ಮಸ್ಥೈರ್ಯ ದೊರೆಯುತ್ತದೆ. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ. ದೂರದಲ್ಲಿ ಎಲ್ಲೋ ನೆಮ್ಮದಿಯ ತಾಣ ಕಾಣಿಸುವುದು.

ಧನು ರಾಶಿ:

ಇಂದು ಸಂವಹನವೇ ನಿಮ್ಮ ಶಕ್ತಿ. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯೋಗವಾಗುತ್ತವೆ. ಕೆಲಸದಲ್ಲಿ ಬುದ್ಧಿವಂತಿಕೆಯ ಅಗತ್ಯ. ಆತುರದ ನಿರ್ಧಾರ ತಪ್ಪಿಸಿ. ನೂತನ ವೃತ್ತಿಪರರಿಗೆ ಉತ್ಸಾಹವು ಅಧಿಕವಾಗಿ ಇರಲಿದೆ. ಲೆಕ್ಕಾಚಾರದ ವಿಚಾರದಲ್ಲಿ ನಿಮಗೆ ಅಚ್ಚರಿ ಇರುವುದು. ಸತ್ಯವನ್ನು ನೋವಾಗದಂತೆ ತಿಳಿಸಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ. ವೃತ್ತಿಯು ಬೇಸರ ತರಿಸಬಹುದು. ಇಂದು ಸರ್ಕಾರಿ ನೌಕರರು ಅಧಿಕ‌ ಕಾರ್ಯಗಳ‌ ಕಡೆ ಗಮನ ಹರಿಸಬೇಕಾದೀತು. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಸಹೋದರರಿಂದ ಸಹಾಯ ಸಿಗುತ್ತದೆ. ಪ್ರಯಾಣ ಸೂಚನೆ ಇದೆ. ರಾತ್ರಿ ವೇಳೆಗೆ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ. ವಾಹನ ಚಲಾವಣೆಯಲ್ಲಿ ನಿಯಂತ್ರಣ ತಪ್ಪಬಹುದು. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ.

ಮಕರ ರಾಶಿ:

ಕುಟುಂಬದ ವಿಚಾರಗಳು ಪ್ರಮುಖವಾಗುತ್ತವೆ. ಆಸ್ತಿ ಅಥವಾ ಹಣಕ್ಕೆ ಸಂಬಂಧಿಸಿದ ಚರ್ಚೆ ನಡೆಯಬಹುದು. ಶಾಂತವಾಗಿ ಮಾತನಾಡಿದರೆ ಸಮಸ್ಯೆ ಪರಿಹಾರ. ಉದ್ಯೋಗದಲ್ಲಿ ಸ್ಥಿರತೆ. ಅಧ್ಯಾತ್ಮದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗುವುದು. ಸುಮ್ಮನೇ ದೇಹಾಯಾಸವನ್ನು ಮಾಡಿಕೊಳ್ಳುವಿರಿ. ನೆರೆಯವರ ಜೊತೆ ಕಲಹವು ಬೇಡ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಅತಿಯಾದ ಹಠದಿಂದ ನಷ್ಟ ಸಂಭವ. ಆಹಾರ ಕ್ರಮದಲ್ಲಿ ನಿಯಮ ಪಾಲಿಸಿ. ದೈವಭಕ್ತಿ ಮನೋಬಲ ಹೆಚ್ಚಿಸುತ್ತದೆ. ಸ್ವಂತ ಕೆಲಸಕ್ಕೆ ನೀವು ಸಮಯವನ್ನು ಕೊಡುವಿರಿ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳುವಿರಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.

ಕುಂಭ ರಾಶಿ:

ಇಂದು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೈಗೊಂಡ ಕೆಲಸದಲ್ಲಿ ವಿಳಂಬವಾದರೂ ಅಂತಿಮವಾಗಿ ಜಯ ನಿಮ್ಮದೇ. ಅಧಿಕಾರಿಗಳೊಂದಿಗೆ ಮಾತಿನಲ್ಲಿ ಎಚ್ಚರ ಅಗತ್ಯ. ಹಣಕಾಸಿನಲ್ಲಿ ಮಿತ ವ್ಯಯ ಉತ್ತಮ. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನೀವು ಜಯಶಾಲಿಯಾಗುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ. ಆರೋಗ್ಯದಲ್ಲಿ ತಲೆನೋವು ಅಥವಾ ದಣಿವು ಕಾಣಬಹುದು. ಸಂಜೆ ವೇಳೆಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸ್ನೇಹಿತರ ಕಾರಣಕ್ಕೆ ತೊಂದರೆಯಲ್ಲಿ ಸಿಕ್ಕಿಬೀಳುವಿರಿ. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ.

ಮೀನ ರಾಶಿ:

ಅತಿಯಾದ ಪ್ರಯೋಗ ತಪ್ಪಿಸಿ. ಸಂಜೆ ವೇಳೆಗೆ ಸಂತೋಷದ ಕ್ಷಣಗಳು. ಸ್ತ್ರೀಯರ ಜೊತೆ ವೈರವನ್ನು ಕಟ್ಟಿಕೊಳ್ಳಬೇಕಾದೀತು. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ಧಾರ್ಮಿಕ ಮುಖಂಡರ ಭೇಟಿಯಾಗುವುದು.‌ ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ದಿನಾಂತ್ಯದಲ್ಲಿ ತೃಪ್ತಿಯ ಅನುಭವ. ಏನಾದರೂ ಕೃಷಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸುವಿರಿ.

ಜನವರಿ 04,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ ನಿತ್ಯನಕ್ಷತ್ರ : ಆರ್ದ್ರಾ ಯೋಗ : ಆಯುಷ್ಮಾನ್, ಕರಣ : ಬವ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 07 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16-43 – 18:08, ಯಮಗಂಡ ಕಾಲ 12:29 – 13:54, ಗುಳಿಕ ಕಾಲ 17:19 – 16:43

-ಲೋಹಿತ ಹೆಬ್ಬಾರ್-8762924271 (what’s app only)