AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ತಂಡದಿಂದ ಇದೆಂಥಾ ತಪ್ಪು; ಟ್ರೋಲಿಗರಿಗೆ ಆಹಾರವಾದ ನಿರ್ದೇಶಕ

ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಟ್ರೇಲರ್ ಬಿಡುಗಡೆಯ ನಂತರ ದೊಡ್ಡ ವಿವಾದಕ್ಕೊಳಗಾಗಿದೆ. ಇದು ತೆಲುಗಿನ 'ಭಗವಂತ ಕೇಸರಿ' ರಿಮೇಕ್ ಎಂಬ ಆರೋಪಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಟ್ರೇಲರ್‌ನಲ್ಲಿ ಎಐ ತಂತ್ರಜ್ಞಾನದ ಶಾಟ್ ಬಳಕೆ ಆಗಿದೆ. ಇದು ಪ್ರೇಕ್ಷಕರನ್ನು ಕೆರಳಿಸಿದೆ.

‘ಜನ ನಾಯಗನ್’ ತಂಡದಿಂದ ಇದೆಂಥಾ ತಪ್ಪು; ಟ್ರೋಲಿಗರಿಗೆ ಆಹಾರವಾದ ನಿರ್ದೇಶಕ
ಜನ ನಾಯಗನ್
ರಾಜೇಶ್ ದುಗ್ಗುಮನೆ
|

Updated on:Jan 05, 2026 | 11:54 AM

Share

ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಗನ್’ (Jana Nayagan) ಮೂಡಿ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಯಾವಾಗ ಚಿತ್ರದ ಟ್ರೇಲರ್ ಬಿಡುಗಡೆ ಆಯಿತೋ ಅಲ್ಲಿಂದ ಸಿನಿಮಾಗೆ ಹಿನ್ನಡೆ ಉಂಟಾಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದು ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ವವಾಗಿದೆ. ಇದರ ಜೊತೆಗೆ ಎಐ ಚಿತ್ರ ಟ್ರೇಲರ್​​ನಲ್ಲಿ ಬಳಕೆ ಮಾಡಲಾಗಿದೆ. ಇದಕ್ಕೆ ಅನೇಕರು ಕೋಪ ಹೊರಹಾಕಿದ್ದಾರೆ.

‘ಜನ ನಾಯಗನ್’ ಇದು ದಳಪತಿ ವಿಜಯ್ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಇದು ಅವರ ಕೊನೆಯ ಚಿತ್ರ ಕೂಡ ಹೌದು. ಹೀಗಾಗಿ, ಸಹಜವಾಗಿಯೇ ನಿರೀಕ್ಷೆ ಇದೆ. ಸಿನಿಮಾಗೆ ಹೈಪ್ ಸಿಗಬೇಕು ಎಂದರೆ ಚಿತ್ರದ ಟ್ರೇಲರ್ ಬಿಡುಗಡೆ ಆಗಬೇಕು. ಆದರೆ, ‘ಜನ ನಾಯಗನ್’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಟ್ರೇಲರ್ ರಿಲೀಸ್ ಬಳಿಕ ಚಿತ್ರಕ್ಕೆ ನೆಗೆಟಿವ್ ಕಮೆಂಟ್ ಹೆಚ್ಚಿದೆ.

‘ಜನ ನಾಯಗನ್’ ಚಿತ್ರ ‘ಭಗವಂತ ಕೇಸರಿ’ಯ ರಿಮೇಕ್ ಎಂದು ಹೇಳಲಾಗುತ್ತಾ ಬರುತ್ತಿತ್ತು. ಆದರೆ, ತಂಡ ಇದನ್ನು ಒಪ್ಪಿಲ್ಲ. ಈಗ ಸಿನಿಮಾದ ಟ್ರೇಲರ್ ನೋಡಿದ ಬಳಿಕ ಇದು ಸ್ಪಷ್ಟವಾಗಿದೆ. ಇದರ ಜೊತೆಗೆ ಒಂದು ಶಾಟ್​​ನ ಜೆಮಿನಿ ಎಐ ಬಳಸಿ ರಚಿಸಲಾಗಿದೆ. ದುರಂತ ಎಂದರೆ ಜೆಮಿನಿ ಎಐ ಲೋಗೋನ ತೆಗೆಯಲು ತಂಡದವರು ಮರೆತಿದ್ದಾರೆ.

ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಹಾಕಿ ಮಾಡೋ ಸಿನಿಮಾದಲ್ಲಿ ಈ ರೀತಿಯ ತಪ್ಪುಗಳು ಆದರೆ ಪ್ರೇಕ್ಷಕರಿಗೆ ಅದು ಕೋಪ ತರಿಸುತ್ತದೆ. ಇನ್ನು ಕೆಲವು ಶಾಟ್​​ಗಳಿಗೆ ನಿರ್ದೇಶಕ ‘ಎಐ’ ಮೊರೆ ಹೋಗುತ್ತಾನೆ ಎಂದಾದರೆ ಅಸಲಿ ಸಿನಿಮಾದ ಮಜ ಹೇಗೆ ಸಿಗೋಕೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?

ಎಚ್​. ವಿನೋದ್ ಅವರು ‘ಜನ ನಾಯಗನ್’ ನಿರ್ದೇಶನ ಮಾಡಿದ್ದಾರೆ. ಅವರು ರಿಮೇಕ್ ಮಾಡೋದ್ರಲ್ಲಿ ಎತ್ತಿದ ಕೈ. ಈ ಮೊದಲು ಕೂಡ ಅವರು ರಿಮೇಕ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೆ. ಆದರೆ, ಅವರು ಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಆದರೆ, ಇಲ್ಲಿ ಆ ರೀತಿ ಮಾಡಿಲ್ಲ ಎನ್ನಲಾಗುತ್ತಿದೆ. ಕೆವಿಎನ್​ ಸಂಸ್ಥೆ ನಿರ್ಮಾಣದ ಈ ಚಿತ್ರ ಜನವರಿ 9ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:13 am, Mon, 5 January 26

Follow Us
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ