ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ: ಸಚಿವ ಕೃಷ್ಣಬೈರೇಗೌಡ
ರಾಜ್ಯದ ಅತಿ ದುರ್ಬಲ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಪರಿಶಿಷ್ಟ ಪಂಗಡ ಇಲಾಖೆಯಡಿಯಲ್ಲಿ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಹೊಸದಾಗಿ ಸ್ಥಾಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಘೋಷಿಸಿದ್ದಾರೆ. ಈ ಕ್ರಮವು ರಾಜ್ಯದಲ್ಲಿನ ಸುಮಾರು 2.82 ಲಕ್ಷ ಆದಿವಾಸಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಬುನಾದಿ ಹಾಕಲಿದೆ
ಬೆಂಗಳೂರು, ಅಕ್ಟೋಬರ್ 29: ರಾಜ್ಯದಲ್ಲಿನ ಅತಿ ದುರ್ಬಲ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ. ಆದಿವಾಸಿ ಸಮುದಾಯ ಸುಮಾರು 2.82 ಲಕ್ಷ ಜನರಿದ್ದು, ಇವರು ಕಾಡಿನ ಅಂಚು ಅಥವಾ ಕಾಡಿನಲ್ಲಿ ವಾಸವಿರುವವರಾಗಿದ್ದಾರೆ. ಇರುಳ, ಸೋಲಿಗ, ಸಿದ್ಧಿ ಸೇರಿದಂತೆ ಈ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಈ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸಲಿದೆ. ಆರಂಭಿಕವಾಗಿ 33.36 ಕೋಟಿ ರೂ. ಅನುದಾನವನ್ನು ಇದಕ್ಕೆ ಒದಗಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’

