ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸುಳಿವು ಕೊಟ್ಟ ಸವದಿ
ಕೊನೆಗೂ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳ ಮಾಡಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್ಗಳಲ್ಲಿ ಕಾಫಿ,ಟೀ ಹಾಗೂ ತಿಂಡಿ ತಿನಿಸುಗಳ ದರ ಏರಿಕೆಯಾಗಲಿದೆ. ಇದರ ಮಧ್ಯೆ ಇದೀಗ ಹಾಲಿನ ಉತ್ಪನ್ನಗಳ ದರ ಸಹ ಹೆಚ್ಚಳವಾಗಲಿದೆ. ಈ ಬಗ್ಗೆ ಸ್ವತಃ ಸಹಕಾರಿ ಸಚಿವ ಲಕ್ಷ್ಮಣ ಸವದಿ ಸುಳಿವು ನೀಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 29): ಕೊನೆಗೂ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳ ಮಾಡಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್ಗಳಲ್ಲಿ ಕಾಫಿ,ಟೀ ಹಾಗೂ ತಿಂಡಿ ತಿನಿಸುಗಳ ದರ ಏರಿಕೆಯಾಗಲಿದೆ. ಇದರ ಮಧ್ಯೆ ಇದೀಗ ಹಾಲಿನ ಉತ್ಪನ್ನಗಳ ದರ ಸಹ ಹೆಚ್ಚಳವಾಗಲಿದೆ. ಈ ಬಗ್ಗೆ ಸ್ವತಃ ಸಹಕಾರಿ ಸಚಿವ ಲಕ್ಷ್ಮಣ ಸವದಿ ಸುಳಿವು ನೀಡಿದ್ದಾರೆ.
ಸಚಿವ ಸಂಪುಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಹಾಲಿನ ದರ 10 ರೂಪಾಯಿ ಏರಿಕೆ ಮಾಡುವಂತೆ ಒಕ್ಕೂಟಗಳ ಬೇಡಿಕೆ ಇತ್ತು. ಆದ್ರೆ, 8 ರೂಪಾಯಿ ಹೆಚ್ಚಳ ಮಾಡಿದ್ದೇವೆ. ರೈತರಿಗೆ 7 ರೂಪಾಯಿ ಒಕ್ಕೂಟಗಳಿಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಜಾಸ್ತಿ ಇದೆ. ನಮ್ಮ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡೋದು ಅನಿವಾರ್ಯವಾಗಿತ್ತು. ಇಲ್ಲದಿದ್ರೆ ರೈತರು ಬೇರೆ ರಾಜ್ಯಗಳಿಗೆ ಹಾಲು ಮಾರಾಟ ಮಾಡ್ತಾರೆ. ಆ ರೀತಿ ರೈತರು ಬೇರೆ ರಾಜ್ಯಗಳಿಗೆ ಹಾಲು ಮಾರಾಟ ಮಾಡಿದ್ರೆ ಹಾಲಿನ ಅಭಾವ ಉಂಟಾಗುತ್ತೆ. ಗ್ರಾಹಕರು ಕೂಡ ಈ ದರ ಏರಿಕೆಗೆ ಸಪೋರ್ಟ್ ಮಾಡಬೇಕು. ನೀವು ಕೊಡುವ ದುಡ್ಡು ರೈತರಿಗೆ ಹೋಗುತ್ತೆ. ಹಾಗೇ ಒಂದು ಏರಿಕೆ ಆದ್ರೆ ಎಲ್ಲವೂ ಏರಿಕೆ ಆಗುತ್ತೆ ಎಂದು ಹೇಳುವ ಮೂಲಕ ಹಾಲಿನ ಉತ್ಪನ್ನ ದರ ಹೆಚ್ಚಳದ ಸುಳಿವು ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ

