AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಮತ್ತೆ ಮಿಂಚಿದ ಸೌಂದರ್ಯಾ ಶೆಟ್ಟಿ​; ಬೋನಸ್ ಆಗಿ ಸಿಕ್ಕ ಪ್ರಶಾಂತ್, ತಾಂಡವ್

ಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸೌಂದರ್ಯಾ ಶೆಟ್ಟಿ, ತಾಂಡವ್ ರಾಮ್ ಹಾಗೂ ಪ್ರಶಾಂತ್ ತಮ್ಮ ಅತ್ಯುತ್ತಮ ಮನರಂಜನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮಂಜು ನಿರ್ಗಮನದ ನಂತರ ಶೆಟ್ಟಿ ಡಾನ್ ಮದುವೆ ಶಾಸ್ತ್ರದ ಟಾಸ್ಕ್‌ನಲ್ಲಿ ಈ ಸ್ಪರ್ಧಿಗಳು ನೀಡಿದ ಪ್ರದರ್ಶನ ವೀಕ್ಷಕರಿಗೆ ಅಪಾರ ಖುಷಿ ನೀಡಿದ್ದು, ದೊಡ್ಡ ಗಲಾಟೆಗಳಿಲ್ಲದೆ ಶೋ ಕಳೆಗಟ್ಟಿದೆ.

ಈ ವಾರ ಮತ್ತೆ ಮಿಂಚಿದ ಸೌಂದರ್ಯಾ ಶೆಟ್ಟಿ​; ಬೋನಸ್ ಆಗಿ ಸಿಕ್ಕ ಪ್ರಶಾಂತ್, ತಾಂಡವ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Oct 30, 2026 | 7:05 AM

Share

ಮುಖ್ಯಾಂಶಗಳು

  • ಶುರುವಾಯ್ತು ಸೌಂದರ್ಯಾ ಶೆಟ್ಟಿ ಅಸಲಿ ಆಟ
  • ಶೆಟ್ಟಿ ಡಾನ್ ಮದುವೆ ಶಾಸ್ತ್ರ
  • ತಂದೆಯಾಗಿ ತಾಂಡವ್, ತಾಯಿಯಾಗಿ ಪ್ರಶಾಂತ್ ಮಿಂಚಿಂಗ್

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಏನೋ ಕೊರತೆ ಇದೆ ಎಂದುಕೊಳ್ಳುವಾಗಲೇ ಸೌಂದರ್ಯಾ ಶೆಟ್ಟಿ ಅವರು ತಮ್ಮ ಅಸಲಿ ಆಟವನ್ನು ಪ್ರದರ್ಶಿಸಿದರು. ಆರಂಭದಲ್ಲಿ ಮಂಜು ಅವರು ಮಾಡಿದ ಅರಚಾಟ, ಕಿರುಚಾಟಗಳಿಂದ ಪ್ರೇಕ್ಷಕರು ಸುಸ್ತಾಗಿದ್ದರು. ಅವರು ಹೊರ ಹೋದ ಬಳಿಕ ಸೌಂದರ್ಯಾ ಶೆಟ್ಟಿ ಅವರ ಅಸಲಿ ಆಟ ಶುರುವಾಗಿದೆ. ಅವರು ನಡೆದುಕೊಳ್ಳುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿಶೇಷ ಎಂದರೆ ಈ ವಾರ ಅದಕ್ಕೆ ಮತ್ತಿಬ್ಬರ ಸೇರ್ಪಡೆ ಆಗಿದೆ.

ಕಳೆದ ವಾರ ಸೌಂದರ್ಯಾ ಹಾಗೂ ತಾಂಡವ್ ಅವರು ಗಮನ ಸೆಳೆದಿದ್ದರು. ಈ ವಾರ ಪ್ರಶಾಂತ್ ಕೂಡ ಭರಪೂರ ಮನರಂಜನೆ ಕೊಟ್ಟಿದ್ದಾರೆ. ಕಳೆದ ವಾರದಂತೆ ಈ ವಾರವೂ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವೇ ಹರಿದು ಬಂದಿದೆ. ಬಿಗ್ ಬಾಸ್ ವೀಕ್ಷಕರ ಖುಷಿಯನ್ನು ಇದು ಹೆಚ್ಚಿಸಿದೆ. ಕಳೆದ ವಾರ ಡೈಮಂಡ್ ಕದಿಯೋ ಟಾಸ್ಕ್ ಇತ್ತು. ಈ ವಾರ ಶೆಟ್ಟಿ ಡಾನ್ ಮದುವೆ ಶಾಸ್ತ್ರ ನಡೆದಿದೆ.

ಸೌಂದರ್ಯಾ ಅವರು ಆರಂಭದ ಕೆಲ ವಾರ ಸೈಲೆಂಟ್ ಆಗಿದ್ದರು. ಕಳೆದ ಕೆಲ ವಾರಗಳಿಂದ ಅವರು ಮನರಂಜನೆ ನೀಡುತ್ತಿದ್ದಾರೆ. ತಾಂಡವ್ ರಾಮ್ ಅವರು ಸದಾ ಗಗನ್ ಚಿನ್ನಪ್ಪ ಮನ ಒಲಿಸಿರುವುದರಲ್ಲೇ ಬ್ಯುಸಿ ಇರುತ್ತಿದ್ದರು. ಆದರೆ, ಈಗ ಅವರು ಉತ್ತಮವಾಗಿ ಆಡಿ ಮನರಂಜನೆ ನೀಡುತ್ತಿದ್ದಾರೆ. ಈ ವಾರ ಶೆಟ್ಟಿ ಡಾನ್ ತಂದೆ ಪಾತ್ರದಲ್ಲಿ ಅವರು ಮೆಚ್ಚುಗೆ ಪಡೆದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಟ್ಟು, ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಮಿಂಚಿದ ರಕ್ಷಿತಾ ಶೆಟ್ಟಿ

ಈ ವಾರ ಸೌಂದರ್ಯಾ ಶೆಟ್ಟಿ ತಾಯಿ ಪಾತ್ರದಲ್ಲಿ ಪ್ರಶಾಂತ್ ಮಿಂಚಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಬಹುವಾದ ಮೆಚ್ಚುಗೆ ಸಿಕ್ಕಿದೆ. ಅವರು ನಾರ್ಮಲ್​ ಆಗಿ ಇರುವುದಕ್ಕಿಂತ ಹುಡುಗಿ ಗೆಟಪ್​​ನಲ್ಲೇ ಹೆಚ್ಚು ಇಷ್ಟ ಆಗುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಈ ವಾರ ಅವರು ಭರಪೂರ ಮನರಂಜನೆ ನೀಡಿದ್ದು, ಕಿಚ್ಚನ ಚಪ್ಪಾಳೆಗೆ ಅವರು ಅರ್ಹರು ಎನ್ನುವ ಮಾತು ಕೇಳಿ ಬಂದಿದೆ. ಈ ವಾರ ಯಶಸ್ ಅವರು ಗಗನ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಬಿಟ್ಟರೆ ಅಂತಹ ದೊಡ್ಡ ಗಲಾಟೆ ನಡೆದಿಲ್ಲ. ಇದು ವೀಕ್ಷಕರಿಗೆ ನೆಮ್ಮದಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅರ್ನಬ್ ಚಂಡಮಾರುತದ ಅಬ್ಬರ; ಭೋರ್ಗರೆಯುತ್ತಿದೆ ಒಡಿಶಾದ ಗಂಡಹಾತಿ ಜಲಪಾತ
ಅರ್ನಬ್ ಚಂಡಮಾರುತದ ಅಬ್ಬರ; ಭೋರ್ಗರೆಯುತ್ತಿದೆ ಒಡಿಶಾದ ಗಂಡಹಾತಿ ಜಲಪಾತ
ಹಾಲಿನ ಬೆಲೆ ಹೆಚ್ಚಿಸಿದ್ರೆ ವಿರೋಧವೇಕೆ; ಕೃಷ್ಣಬೈರೇಗೌಡ ಪ್ರಶ್ನೆ
ಹಾಲಿನ ಬೆಲೆ ಹೆಚ್ಚಿಸಿದ್ರೆ ವಿರೋಧವೇಕೆ; ಕೃಷ್ಣಬೈರೇಗೌಡ ಪ್ರಶ್ನೆ
ದೀಪಾವಳಿ ಹಬ್ಬಕ್ಕೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಅಯೋಧ್ಯೆಯ ರಾಮ ಮಂದಿರ
ದೀಪಾವಳಿ ಹಬ್ಬಕ್ಕೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಅಯೋಧ್ಯೆಯ ರಾಮ ಮಂದಿರ
ಜಿಮ್ ಟ್ರೈನರ್ ಜೊತೆ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋ ನೋಡಿ
ಜಿಮ್ ಟ್ರೈನರ್ ಜೊತೆ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋ ನೋಡಿ
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್