ನಿಮ್ಮ ಮಗುವಿಗೆ ಮೊದಲ ವರ್ಷ ಈ ಆಹಾರ ಪದಾರ್ಥ ನೀಡ್ಲೇಬೇಡಿ, ಎಚ್ಚರಾ!

ಮುದ್ದು ಮಕ್ಕಳು, ಚಿಕ್ಕ ಶಿಶುಗಳು ದಷ್ಟಪುಷ್ಟವಾಗಿರಬೇಕು. ಡುಮ್ಮಡುಮ್ಮಗೆ ಅಂದವಾಗಿ ಕಾಣಬೇಕು ಅನ್ನೋದು ಎಲ್ಲಾ ತಂದೆ-ತಾಯಿಯ ಬಯಕೆ. ಅದಕ್ಕಾಗಿ ಕೆಲವರು ಅತಿಯಾಗಿ ತಿನ್ನಿಸೋದಿದೆ. ನಿಮ್ಮ ಮಕ್ಕಳು ಎಷ್ಟೇ ತಿಂದರೂ ನಿಮಗೆ ಸಮಾಧಾನವೇ ಇರೋದಿಲ್ಲ. ಆದ್ರೆ ನಿಮ್ಮ ಮುದ್ದು ಮಗುವಿಗೆ ಒಂದು ವರ್ಷದ ಒಳಗೆ ನೀಡಲೇಬಾರದ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ ನೋಡಿ. ಮಗುವಿಗೆ ಹಸು ಹಾಲು ನೀಡಬೇಡಿ: ಎದೆ ಹಾಲು ಒಂದು ವರ್ಷದ ಒಳಗಿನ ಮಗುವಿಗೆ ಉತ್ತಮ ಆಹಾರ. ಆದ್ರೆ, ಇನ್ನೂ ಒಂದು ವರ್ಷ ತುಂಬದ ನಿಮ್ಮ ಮಗುವಿಗೆ […]

ನಿಮ್ಮ ಮಗುವಿಗೆ ಮೊದಲ ವರ್ಷ ಈ ಆಹಾರ ಪದಾರ್ಥ ನೀಡ್ಲೇಬೇಡಿ, ಎಚ್ಚರಾ!
Follow us
ಸಾಧು ಶ್ರೀನಾಥ್​
|

Updated on:Nov 13, 2019 | 3:06 PM

ಮುದ್ದು ಮಕ್ಕಳು, ಚಿಕ್ಕ ಶಿಶುಗಳು ದಷ್ಟಪುಷ್ಟವಾಗಿರಬೇಕು. ಡುಮ್ಮಡುಮ್ಮಗೆ ಅಂದವಾಗಿ ಕಾಣಬೇಕು ಅನ್ನೋದು ಎಲ್ಲಾ ತಂದೆ-ತಾಯಿಯ ಬಯಕೆ. ಅದಕ್ಕಾಗಿ ಕೆಲವರು ಅತಿಯಾಗಿ ತಿನ್ನಿಸೋದಿದೆ. ನಿಮ್ಮ ಮಕ್ಕಳು ಎಷ್ಟೇ ತಿಂದರೂ ನಿಮಗೆ ಸಮಾಧಾನವೇ ಇರೋದಿಲ್ಲ. ಆದ್ರೆ ನಿಮ್ಮ ಮುದ್ದು ಮಗುವಿಗೆ ಒಂದು ವರ್ಷದ ಒಳಗೆ ನೀಡಲೇಬಾರದ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ ನೋಡಿ.

ಮಗುವಿಗೆ ಹಸು ಹಾಲು ನೀಡಬೇಡಿ: ಎದೆ ಹಾಲು ಒಂದು ವರ್ಷದ ಒಳಗಿನ ಮಗುವಿಗೆ ಉತ್ತಮ ಆಹಾರ. ಆದ್ರೆ, ಇನ್ನೂ ಒಂದು ವರ್ಷ ತುಂಬದ ನಿಮ್ಮ ಮಗುವಿಗೆ ಹಸುವಿನ ಹಾಲು ನೀಡಬೇಡಿ. ನಿಮ್ಮ ಮಗು ಹಸುವಿನ ಹಾಲು ಸೇವಿಸಬಾರದು ಎಂಬುದಕ್ಕೆ ಕೆಲವು ನಿರ್ದಿಷ್ಟ ಕಾರಣವಿದೆ.

ಹಸುವಿನ ಹಾಲು ಮಗುವಿಗೆ ಕಬ್ಬಿಣದಾಂಶದ ಕೊರತೆಯನ್ನು ತಂದೊಡ್ಡಬಹುದು. ಇದರ ಜೊತೆಗೆ ಹಸುವಿನ ಹಾಲಿನಲ್ಲಿ ವಿಟಮಿನ್ ಸಿ, ಇ ಮತ್ತು ಸತುವಿನ ಅಂಶ ಇರುವುದಿಲ್ಲ. ಮಗು ಹಸುವಿನ ಹಾಲನ್ನು ಜೀರ್ಣಿಸಿಕೊಳ್ಳುವುದು ಕೂಡಾ ಕಷ್ಟ. ಅದಿರಲಿ ಹಸುವಿನ ಹಾಲನ್ನು ಕುಡಿಸುವುದರಿಂದ ನಿಮ್ಮ ಮಗುವಿನ ಕಿಡ್ನಿಗೆ ತೊಂದರೆಯಾಗಬಹುದು.

ನಟ್ಸ್‌ ಶಿಶುಗಳಿಗೆ ಅಗತ್ಯವಿಲ್ಲ: ಕೆಲವರು ನೆಟ್ಸ್‌ ಪೌಡರ್ ಮಾಡಿ ಮಕ್ಳಿಗೆ ಕೊಡ್ತಾರೆ. ಮಕ್ಕಳಿಗೆ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರೋದಿಲ್ಲ. ಇದ್ರಿಂದ ಉಸಿರು ಕಟ್ಟುವ ಸಂಭವ ಇರುತ್ತದೆ. ಇತ್ತೀಚಿಗೆ ಸಾಕಷ್ಟು ಜನರಿಗೆ ಅಲರ್ಜಿ ಸಂಭವಿಸುತ್ತಿದೆ. ಈ ವಿಚಾರದಲ್ಲಿ ಅಗತ್ಯ ಸಲಹೆ ಪಡೆಯಲೇಬೇಕು.

ಕೆಲ ಮೀನಿನಿಂದ ಅಲರ್ಜಿ ಬರುತ್ತೆ: ಮೀನಿನಲ್ಲಿರುವ ಪಾದರಸದ ಅಂಶಗಳು ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಅದರಲ್ಲೂ ಕತ್ತಿ ಮೀನು ಮತ್ತು ಕಿಂಗ್ ಮಾರ್ಷಲ್ ಮೀನನ್ನು ಮಗುವಿಗೆ ಕೊಡಲೇ ಬಾರದು. ಅವುಗಳಲ್ಲಿ ಪಾದರಸ ಅಂಶ ಹೆಚ್ಚಿರುತ್ತದೆ. ಕೆಲವು ಮೀನಿನಿಂದ ಅಲರ್ಜಿ ಕೂಡ ಸಂಭವಿಸುತ್ತದೆ. ಆದ್ದರಿಂದ ಮಗುವು ಎರಡು ಅಥವಾ ಮೂರು ವರ್ಷವಾಗುವವರೆಗೆ ಕಾದು ನಂತರ ಮೀನನ್ನು ಚೆನ್ನಾಗಿ ಬೇಯಿಸಿ ಮಗುವಿಗೆ ನೀಡಿ. ಈ ರೀತಿ ಮಾಡುವುದರಿಂದ ನಿಮ್ಮ ಮಗುವಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ಮೊಟ್ಟೆ ಮಗುವಿನ ಆರೋಗ್ಯಕ್ಕೆ ಹಾನಿಕಾರಕ:

ಎಲ್ಲಾ ತಾಯಂದಿರು ಕೂಡ ಮಗುವಿಗೆ ಮೊಟ್ಟೆ ಅಲರ್ಜಿ ಎಂಬುದನ್ನು ತಿಳಿದುಕೊಳ್ಳಲೇಬೇಕು. ಮಕ್ಕಳು ಬೆಳೆದಂತೆ ಅಲರ್ಜಿ ಸಂಭವ ಕೂಡ ಕಡಿಮೆಯಾಗುತ್ತದೆ. ನಿಮ್ಮ ಮಗು ಐದು ವರ್ಷವಾಗುತ್ತಿದ್ದಂತೆ ಮೊಟ್ಟೆ ಕೊಡಬಹುದು. ಮೊಟ್ಟೆಯಿಂದ ಕೆಲವು ಅಲರ್ಜಿ ಚಿನ್ಹೆಗಳನ್ನು ಪ್ರತಿಯೊಬ್ಬ ತಾಯಿಯೂ ತಿಳಿದಿರಬೇಕು. ಅವುಗಳೆಂದರೆ ತೀವ್ರ ಹೃದಯ ಬಡಿತ, ಉಸಿರಾಟದ ತೊಂದರೆ ಇವುಗಳು ಕಂಡು ಬಂದಲ್ಲಿ ವೈದ್ಯರನ್ನು ಕಾಣುವುದು ಒಳಿತು.

ಹಸಿ ತರಕಾರಿ ನೀಡಬೇಡಿ: ತಾಜಾ ತರಕಾರಿ ಮತ್ತು ಹಣ್ಣುಗಳು ಆರೋಗ್ಯಕ್ಕೆ ಒಳಿತು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಆದರೆ ಇದು ವಯಸ್ಕರಿಗೆ ಮಾತ್ರ. ನೀವು ನಿಮ್ಮ ಮಕ್ಕಳಿಗೆ ಹಸಿ ತರಕಾರಿಯನ್ನು ನೀಡಿದರೆ ಮಗುವಿಗೆ ಹಾನಿಯಾಗುವ ಸಂಭವ ಇರುತ್ತದೆ. ಮೊದಲನೆಯದಾಗಿ ಮಗುವಿಗೆ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಕಷ್ಟವಾಗುತ್ತದೆ. ಎರಡನೆಯದಾಗಿ ಮಗುವಿಗೆ ಇದರಿಂದ ಉಸಿರಾಡಲು ಕಷ್ಟವಾಗಬಹುದು.

ಜೀನುತುಪ್ಪದಿಂದ ನಂಜು ಬರುವ ಸಾಧ್ಯತೆ:

ಜೇನಿನಿಂದ ಸಾಕಷ್ಟು ಉಪಯೋಗಗಳಿವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ನಾವು ಜೇನುತುಪ್ಪ ಬಳಸುವುದರಿಂದ ನಮ್ಮ ದೇಹ ಸಾಕಷ್ಟು ವಿಟಮಿನ್ ಮತ್ತು ಪೋಷಕಾಂಶಗಳನ್ನೂ ಪಡೆಯುತ್ತದೆ. ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಜೇನುತುಪ್ಪವನ್ನು ಮಗುವಿನ ಆಹಾರದಿಂದ ದೂರವಿರಿಸುವುದು ಒಳ್ಳೆಯದು. ಮಗುವಿಗೆ ಜೀನುತುಪ್ಪದಿಂದ ಏನು ತೊಂದರೆ ಎಂದರೆ ಇದು ನಂಜು ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗೆಂದು ಜೇನುತುಪ್ಪವನ್ನು ತಿಂದ ಪ್ರತಿಯೊಬ್ಬ ಮಗುವಿಗೂ ಇದು ಸಂಭವಿಸುತ್ತದೆ ಎನ್ನಲಾಗುವುದಿಲ್ಲ.

Published On - 8:10 am, Wed, 13 November 19