ಉಳಿದ ಅನ್ನ ಮರು ಬಿಸಿ ಮಾಡಬಹುದಾ? ಫುಡ್ ಪಾಯ್ಸನ್ ಹೇಗೆ ಆಗುತ್ತೇ..
ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಬಾರದಂತೆ. ಇದು ನಿಜನಾ..? ಕೆಲವರು ಇಲ್ಲಾಂತಾರೆ. ಇನ್ನು ಕೆಲವರ ಪ್ರಕಾರ ಒಮ್ಮೆ ಬೇಯಿಸಿದ ಅನ್ನವನ್ನು ಮತ್ತು ಬೇಯಿಸಿದ್ರೆ ಅದರಲ್ಲಿ ಬೆಸಿಲಸ್ ಸೆರೆಯೂಸ್ ಹೆಸರಿನ ಬ್ಯಾಕ್ಟೀರಿಯಾ ಕ್ರಿಯೇಟ್ ಆಗುತ್ತಂತೆ. ಇದು ಫುಡ್ ಪಾಯ್ಸನ್ನಿಗೂ ಕಾರಣವಾಗಬಹುದು ಅಂತಾರೆ ತಜ್ಞರು. ಇದರಿಂದ ವಾಂತಿ ಬೇಧಿ ಮಾತ್ರವ್ಲಲಾ ಇನ್ನಿತರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಉಳಿದ ಅನ್ನವನ್ನು ಸಂರಕ್ಷಿಸಿ ಇಡುವಲ್ಲಿ ನೀವು ತಪ್ಪು ಕ್ರಮ ಅನುಪಸರಿಸಿದ್ರೆ, ಖಂಡಿತಾ ಎಡವಟ್ಟು ಎದುರಿಸಬೇಕಾಗುತ್ತೆ. ಅನ್ನ ತಯಾರಿ ಮತ್ತು ಸಂರಕ್ಷಣೆ ಹೇಗೆ..? […]
ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಬಾರದಂತೆ. ಇದು ನಿಜನಾ..? ಕೆಲವರು ಇಲ್ಲಾಂತಾರೆ. ಇನ್ನು ಕೆಲವರ ಪ್ರಕಾರ ಒಮ್ಮೆ ಬೇಯಿಸಿದ ಅನ್ನವನ್ನು ಮತ್ತು ಬೇಯಿಸಿದ್ರೆ ಅದರಲ್ಲಿ ಬೆಸಿಲಸ್ ಸೆರೆಯೂಸ್ ಹೆಸರಿನ ಬ್ಯಾಕ್ಟೀರಿಯಾ ಕ್ರಿಯೇಟ್ ಆಗುತ್ತಂತೆ. ಇದು ಫುಡ್ ಪಾಯ್ಸನ್ನಿಗೂ ಕಾರಣವಾಗಬಹುದು ಅಂತಾರೆ ತಜ್ಞರು. ಇದರಿಂದ ವಾಂತಿ ಬೇಧಿ ಮಾತ್ರವ್ಲಲಾ ಇನ್ನಿತರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಉಳಿದ ಅನ್ನವನ್ನು ಸಂರಕ್ಷಿಸಿ ಇಡುವಲ್ಲಿ ನೀವು ತಪ್ಪು ಕ್ರಮ ಅನುಪಸರಿಸಿದ್ರೆ, ಖಂಡಿತಾ ಎಡವಟ್ಟು ಎದುರಿಸಬೇಕಾಗುತ್ತೆ.
ಅನ್ನ ತಯಾರಿ ಮತ್ತು ಸಂರಕ್ಷಣೆ ಹೇಗೆ..? ಅನ್ನ ಮರುಬೇಯಿಸುವ ಬಗ್ಗೆ ನೀವು ಜಾಗ್ರತಾ ಕ್ರಮಗಳನ್ನು ಅನುಸರಿಸಿದ್ರೆ, ನಿಮಗೆ ಯಾವ ಪ್ರಾಬ್ಲಮ್ ಕೂಡಾ ಇರಲ್ಲ. ದಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್ ಅದಕ್ಕಾಗಿ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಅದನ್ನೇ ನೋಡೋದಿದ್ರೆ, ನೀವು ಅನ್ನ ತಯಾರು ಮಾಡುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಅನ್ನ ಪಾತ್ರೆಯನ್ನು ಕೂಡಾ ಕ್ಲೀನ್ ಮಾಡಿ. ಅನ್ನವನ್ನು ಕುದಿಯುವ ಬಿಂದುವಿನಲ್ಲೇ ಕುದಿಸಬೇಕು. ಇಲ್ಲವಾದರೆ, ಅದು ನೀರಿನಲ್ಲಿ ನೆಂದಂತಾಗಿ ಬೆಂದ ಹಾಗೆ ಅನಿಸೋದಿಲ್ಲ. ಈ ಹದದಲ್ಲಿ ಅನ್ನ ಬೆಂದರೆ ಅದ್ರಲ್ಲಿ ಬ್ಯಾಕ್ಟೀರಿಯಾಗಳು ಶೀಘ್ರವಾಗಿ ಅಭಿವೃದ್ಧಿ ಗೊಳ್ಳುವ ಸಾಧ್ಯತೆಗಳಿವೆ. ಊಟ ಮುಗಿದ ಬಳಿಕ ಉಳಿದ ಅನ್ನವನ್ನು ಬೇಗನೇ ಕೂಲ್ ಮಾಡಿ ಫ್ರಿಜ್ ಸೇರಿಸಿ. ಇದರಿಂದ ಬ್ಯಾಕ್ಟೀರಿಯಾ ಬೆಳೆಯುವುದನ್ನು ತಪ್ಪಿಸಬಹುದು. ಉಳಿದ ಅನ್ನವನ್ನು ಫ್ರಿಜ್ ಸೇರಿಸುವ ಮೊದಲು ಗಾಳಿಯಾಡದ ಕಂಟೇನರ್ ನಲ್ಲಿ ಹಾಕಿ ಮುಚ್ಚಿಡಿ. ಹಾಗೆಂದು ಬಿಸಿ ಬಿಸಿಯಾಗಿರುವ ಅನ್ನವನ್ನು ಫ್ರಿಜಲ್ಲಿ ಇಡಬೇಡಿ.
ಅನ್ನ ಎಷ್ಟು ದಿನ ಫ್ರಿಜ್ನಲ್ಲಿ ಇಡಬಹುದು: ದಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ ಅನ್ನ ಅಥವಾ ಯಾವುದೇ ಆಹಾರವಸ್ತುವನ್ನು 3 ರಿಂದ 4 ದಿನದವರೆಗೆ ಇಡಬಹುದು. ಆ ಬಳಿಕ ಇಟ್ರೆ ಅದು ವಿಷವಾಗುತ್ತೆ. ಆದ್ರೆ, ಫ್ರೀಝರ್ನಲ್ಲಿ ಇಟ್ಟ ಅನ್ನ ಸೇರಿದಂತೆ ಯಾವುದೇ ಆಹಾರವಸ್ತುಗಳನ್ನು 4 ತಿಂಗಳವರೆಗೆ ಬಳಸಬಹುದು. ಉಳಿದ ಆಹಾರವನ್ನು ಸುರಕ್ಷಿತ ತಾಪಮಾನದಲ್ಲಿ ಸಂಗ್ರಹಿಸೋದು ಜಾಣತನ. ಅದ್ರಂತೆ ರೂಮ್ ಟೆಂಪರೇಚರ್ 90 ಡಿಗ್ರಿ ಸೆಲ್ಸಿಯಸ್ ಇದ್ರೆ, ಇದರಲ್ಲಿ ಸಂಗ್ರಹಿತ ಆಹಾರದಲ್ಲಿ ಬ್ಯಾಕ್ಟೀರಿಯಾ ಬೆಳೆಯಬಹುದು. ಸಾಮಾನ್ಯವಾಗಿ 40 ಡಿಗ್ರಿ ಅಥವಾ 140 ಡಿಗ್ರಿ ಫ್ಯಾರನ್ ಹೀಟ್ ತಾಪಮಾನದಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತೆ. ಹಾಗಾಗಿ, 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನೀವು ಆಹಾರ ಸಂಗ್ರಹಿಸಿ. ಒಂದು ವೇಳೆ ಉಳಿದ ಆಹಾರವನ್ನು 2 ಗಂಟೆ ಕಾಲ ಸಂಗ್ರಹಿಸಿಡಲಾಗಿದೆ ಎಂದಾದರೆ, ಆ ಬಳಿಕ ಅನ್ನು ಸಂಗ್ರಹಿಸಬೇಕಿಲ್ಲ. ದಯವಿಟ್ಟು ಎಸೆಯಿರಿ.
ಆಹಾರ ಮತ್ತೆ ಬಿಸಿ ಮಾಡುವ ಕ್ರಮ: ನೀವು ಉಳಿದಿರುವ ಅನ್ನವನ್ನು ಫ್ರಿಜ್ನಿಂದ ತೆಗೆದು ಮತ್ತೆ ಬಿಸಿ ಮಾಡ್ತಾ ಇದ್ದೀರಾ..? ಹಾಗಾದ್ರೆ, ಅದನ್ನು ಸಾಮಾನ್ಯ ತಾಪಮಾನಕ್ಕೆ ಬರುವವರೆಗೆ ಕಾಯಿರಿ. ಮತ್ತು ಹೀಟ್ ಮಾಡಿದಾಗ ಎಲ್ಲಾ ಕಡೆ ಬಿಸಿ ತಾಗಲಿ. ಒಂದು ವೇಳೆ ನೀವು ಮೈಕ್ರೋವೇದಲ್ಲಿ ಅದನ್ನು ಬಿಸಿ ಮಾಡುವುದೇ ಆದ್ರೆ, ಫ್ರಿಜ್ನಿಂದ ತೆಗೆದ ಉಳಿದ ಆಹಾರಕ್ಕೆ ಜಸ್ಟ್ 1 ಸ್ಪೂನ್ ನೀರು ಹಾಕಿ ಅದನ್ನು ಓವನಲ್ಲಿ ಹೀಟ್ ಮಾಡಿ. ಅದನ್ನು 3 ರಿಂದ 4 ನಿಮಿಷ ರೀಹೀಟ್ ಮಾಡಿ. ಅದನ್ನು ಹೊಗೆಯುಗುಳುವವರೆಗೆ ಬಿಸಿ ಮಾಡಿ. 165 ಡಿಗ್ರಿ ಬಿಸಿಯಾದ್ರೆ ಸಾಕು. ಆ ಕೂಡಲೇ ಸರ್ವ್ ಮಾಡಿ.
ಉಳಿದ ಆಹಾರವನ್ನು ಎಣ್ಣೆಯಲ್ಲಿ ಹುರಿಯುತ್ತೀರಾ..? ನಿಮಗಿಷ್ಟದ ಎಣ್ಣೆಯನ್ನು ಪಾನ್ಗೆ ಹಾಕಿ ಅದಕ್ಕೆ ಅನ್ನ ಹಾಕಿ ಹುರಿಯಿರಿ. ಮಧ್ಯ ಉರಿಯಿರಲಿ ಜೊತೆಗೆ ಅದನ್ನು ಕಲಸ್ತಾ ಇರಿ, ಹೀಗೆ ಮಾಡೋದ್ರಿಂದ ಎಲ್ಲಾ ಅನ್ನದ ಅಗುಳುಗಳಿಗೂ ತಾಪಮಾನ ತಾಗುತ್ತೆ. 165 ಡಿಗ್ರಿ ನಿಜಕ್ಕೂ ಕರೆಕ್ಟಾದ ತಾಪಮಾನ. ಹೊಗೆಯುಗುಳುವವರೆಗೆ ಬೇಯಿಸಿ.
ಉಳಿದ ಅನ್ನವನ್ನು ನೀವು ಹೆಬೆಯಲ್ಲಿ ಬೇಯಿಸ್ತೀರಾ.. ? ಹಾಗಾದ್ರೆ ಅದನ್ನು ಸಾಸ್ ಪಾನ್ನಲ್ಲಿ ಬೇಯಿಸಿ. ಅದಕ್ಕೆ ಬೇಯಿಸುವಾಗ 1 ಸ್ಪೂನ್ ಬೆಣ್ಣೆ ಅಥವ ತುಪ್ಪ ಹಾಕಿ. ಆ ಬಳಿಕ 2 ಸ್ಪೂನ್ ನೀರು ಹಾಕಿ ಆ ಬಳಿಕ ಮುಚ್ಚಳ ಮುಚ್ಚಿ. ಇಲ್ಲೂ ಅಷ್ಟೇ 165 ಡಿಗ್ರಿ ತಾಪಮಾನದಲ್ಲಿ ಹಬೆಯಲ್ಲಿ ಬೇಯಿಸಿದ್ರೆ ಉತ್ತಮ. ಆದ್ರೆ, ಅದೆಲ್ಲದಕ್ಕಿಂತಲೂ ನಾವು ನಮಗೆ ಬೇಕಾದಷ್ಟೇ ಅನ್ನವನ್ನು ರೆಡಿ ಮಾಡಿ, ವೇಸ್ಟ್ ಆಗೋದನ್ನು ತಪ್ಪಿಸಿ. ಹೀಗೆ ಮಾಡೋದ್ರಿಂದ ಫುಡ್ ಪಾಯ್ಸನ್ ಆಗೋದನ್ನು ತಪ್ಪಿಸಿ.
Published On - 9:41 am, Sun, 10 November 19