CCL 2025: ಮೈಸೂರಿನಲ್ಲಿ ಸಿಸಿಎಲ್ ಸೆಮಿಫೈನಲ್; ಕಿಚ್ಚನ ತಂಡಕ್ಕೆ ಎದುರಾಳಿ ಯಾರು? ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
Celebrity Cricket League 2025: 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಸೆಮಿಫೈನಲ್ ಪಂದ್ಯಗಳು ಮಾರ್ಚ್ 1 ರಂದು ಮೈಸೂರಿನಲ್ಲಿ ನಡೆಯಲಿವೆ. ಕರ್ನಾಟಕ ಬುಲ್ಡೋಜರ್ಸ್, ತಮಿಳು ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್ ಮತ್ತು ಪಂಜಾಬ್ ದಿ ಶೇರ್ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಬೆಂಗಾಲ್ ಟೈಗರ್ಸ್ ಮತ್ತು ಪಂಜಾಬ್ ದಿ ಶೇರ್ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಭೇಟಿಯಾಗಲಿವೆ, ನಂತರ ಕರ್ನಾಟಕ ಬುಲ್ಡೋಜರ್ಸ್ ಮತ್ತು ತಮಿಳು ರೈನೋಸ್ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Celebrity Cricket League) ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಫೆಬ್ರವರಿ 23 ಕ್ಕೆ ಈ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದವು. ಲೀಗ ಹಂತದ ಮುಕ್ತಾಯದೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳು ಯಾವುವು ಎಂಬುದು ನಿರ್ಧಾರವಾಗಿತ್ತು. ಆ ಪ್ರಕಾರ, ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್, ತಮಿಳು ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್ ಹಾಗೂ ಪಂಜಾಬ್ ದಿ ಶೇರ್ ತಂಡಗಳು ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿವೆ. ಇದೀಗ ಈ ನಾಲ್ಕು ತಂಡಗಳು ಮಾರ್ಚ್ 1 ರಂದು ಅಂದರೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ.
ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಬೆಂಗಾಲ್ ಟೈಗರ್ಸ್ ತಂಡ, ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಪಂಜಾಬ್ ದಿ ಶೇರ್ ತಂಡವನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಆ ಬಳಿಕ ಎರಡನೇ ಸೆಮಿಫೈನಲ್ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಕಾಳಗದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯ ಯಾವಾಗ ನಡೆಯಲಿದೆ?
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯ ಮಾರ್ಚ್ 1 ರಂದು ನಡೆಯಲಿದೆ.
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದೆ.
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯ ಸಂಜೆ 6:30 ಕ್ಕೆ ಆರಂಭವಾಗಲಿದೆ.
ಕರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ನಡುವಿನ ಸೆಮಿಫೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಿಸುವುದು ಹೇಗೆ?
ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವಿನ ಸೆಮಿಫೈನಲ್ 2 ಪಂದ್ಯವನ್ನು ಸೋನಿ ಟೆನ್ ಸ್ಪೋರ್ಟ್ಸ್ 3 ನಲ್ಲಿ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ನೀವು ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
ಉಭಯ ತಂಡಗಳು
ಕರ್ನಾಟಕ ಬುಲ್ಡೋಜರ್ಸ್: ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್,ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ, ನಿರೂಪ್ ಭಂಡಾರಿ, ಅನುಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕನಂದಾ, ತ್ರಿವಿಕ್ರಮ್.
ಚೆನ್ನೈ ರೈನೋಸ್: ಆರ್ಯ ಅಶೋಕ್ ಸೆಲ್ವನ್ (ನಾಯಕ), ಭರತ್, ಶಾಮ್, ಬೋಸ್ ವೆಂಕಟ್, ಹೇಮಚಂದ್ರನ್, ಕಲೈಯರಸನ್, ಮಹೇಂದ್ರನ್, ನಂದಾ, ಪೃಥ್ವಿ, ರಮಣ, ಸಂಜಯ್ ಭಾರತಿ, ಶಂತನು, ಶರಣ್, ಉದಯ್ ಕುಮಾರ್, ವಿಕ್ರಾಂತ್, ವಿಷ್ಣು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
