AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಡಿಆರ್ ನೀಡಲು ಸರ್ಕಾರದ ಬೊಕ್ಕಸಕ್ಕೆ ಖರ್ಚು ಬೀಳದು, ಅದೊಂದು ಸರ್ಟಿಫಿಕೇಟ್: ಯದುವೀರ್ ಕೃಷ್ಣದತ್ ಒಡೆಯರ್

ಟಿಡಿಆರ್ ನೀಡಲು ಸರ್ಕಾರದ ಬೊಕ್ಕಸಕ್ಕೆ ಖರ್ಚು ಬೀಳದು, ಅದೊಂದು ಸರ್ಟಿಫಿಕೇಟ್: ಯದುವೀರ್ ಕೃಷ್ಣದತ್ ಒಡೆಯರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 28, 2025 | 5:54 PM

Share

ರಾಜ್ಯ ಸರ್ಕಾರದ ವಿರುದ್ಧ ತಮ್ಮದೇನೂ ದೂರಿಲ್ಲ, 2009 ರಿಂದ ಟಿಡಿಅರ್ ಮತ್ತು ರಸ್ತೆ ಅಗಲೀಕರಣ ವಿವಾದ ಕೋರ್ಟ್ ನಲ್ಲಿದೆ, ತವೂ ಬೆಂಗಳೂರು ಅರಮನೆಯಲ್ಲಿದ್ದಾಗಲೆಲ್ಲ ಟ್ರಾಫಿಕ್ ಜಾಮ್​ನಲ್ಲಿ ಸಿಕ್ಹಾಕಿಕೊಳ್ಳುತ್ತೇವೆ, ಅರಮನೆ ರಸ್ತೆ ಅಗಲೀಕರನಣ ನಡೆಯಬೇಕೆಂದು ತಾವು ಕೂಡ ಬಯಸುತ್ತೇವೆ, ಆದರೆ ಸರ್ಕಾರ ಕೋರ್ಟ್ ಆದೇಶ ಮತ್ತು ಕಾನೂನು ಪ್ರಕ್ರಿಯೆಯನ್ನು ಪಾಲಿಸಲಿ ಎಂದು ಯದುವೀರ್ ಹೇಳಿದರು.

ಮಡಿಕೇರಿ, ಫೆ 28: ಜಿಲ್ಲೆಯ ಕುಶಾಲನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ ಒಡೆಯರ್, ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ವಿವಾದ ಕೋರ್ಟ್​ನಲ್ಲಿರುವುದರಿಂದ ಅದರ ಬಗ್ಗೆ ಮಾತಾಡುವುದು ಸರಿಯಲ್ಲ ಎಂದರು. ಆದರೆ ಮಾಧ್ಯಮದವರು ಕೇಳಿದ್ದಕ್ಕೆ ಸಮಜಾಯಿಷಿ ನೀಡಿದ ಅವರು ಸುಪ್ರೀಮ್ ಕೋರ್ಟ್ ನಲ್ಲಿ ರಾಜ್ಯಸರ್ಕಾರಕ್ಕೆ ಹಿನ್ನಡೆಯಾಗಿದೆ, ಹಾಗಂತ ಒಡೆಯರ್ ಮನೆತನಕ್ಕೆ ಖುಷಿಯೇನೂ ಆಗಿಲ್ಲ, ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಎನ್ನುವುದೇ ತಮ್ಮ ಆಶಯವಾಗಿದೆ, ತಮಗೆ ಟಿಡಿಆರ್ ನೀಡಲು ಸರ್ಕಾರಕ್ಕೆ ಖರ್ಚೇನೂ ತಗಲುವುದಿಲ್ಲ, ಅದೊಂದು ಪ್ರಮಾಣ ಪತ್ರ ಅಷ್ಟೇ ಎಂದು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರು ಅರಮನೆ ಮೈದಾನದ ಜಾಗ ಬಳಸಿಕೊಳ್ಳುವುದಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಣಯ