ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮವಲ್ಲದೇ ಮತ್ತೆ ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು.
ಈ ಲಕ್ಷಣಗಳು ಬಿಸಿಲಿನ ಆಘಾತದ ಲಕ್ಷಣಗಳನ್ನೇ ಹೋಲುತ್ತಿದ್ದರೂ ಅದಕ್ಕೂ ಹೆಚ್ಚು ಒಣಗುತ್ತದೆ ಮತ್ತು ಬಿಗಿಯಾಗಿರುತ್ತದೆ. ಕೆಲವು ಚರ್ಮತಜ್ಞರ ಪ್ರಕಾರ ಬಿಸಿಲಿಗೂ ಶೀತಕ್ಕೂ ಆಗುವ ಪರಿಣಾಮಗಳನ್ನು ವಿರುದ್ಧವಾಗಿ ಪರಿಗಣಿಸಬಹುದು. ತಜ್ಞರ ಪ್ರಕಾರ ಶೀತಲ ದಿನಗಳಲ್ಲೂ ಸೂರ್ಯನ ಕಿರಣಗಳು ಹಾನಿ ಎಸಗಬಹುದು.
ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ:
ಡರ್ಮಬ್ರೇಶನ್ ಅಥವಾ ರಾಸಾಯನಿಕವಾಗಿ ಹೊರಚರ್ಮವನ್ನು ನಿವಾರಿಸುವ ಚರ್ಮರೋಗ ಪ್ರಕ್ರಿಯೆಯನ್ನು ನೀವು ಮಾಡಿಸಿಕೊಂಡಿದ್ದರೆ ನಿಮ್ಮ ಚರ್ಮವು ಗಾಳಿಗೆ ಸಹ ಹೆಚ್ಚು ಸೂಕ್ಷ್ಮವಾಗಿರಬಹುದು. ಏಕೆಂದರೆ ಇಂತಹ ಕಾರ್ಯವಿಧಾನಗಳು ನಿಮ್ಮ ಚರ್ಮದ ಹೊರ ಪದರವನ್ನು ತೆಗೆದುಹಾಕುತ್ತವೆ.
ಪರಿಹಾರಗಳನ್ನು ಮಾಡಿ ನೋಡಿ:
ಶೀತಾಘಾತಕ್ಕೆ ಚಿಕಿತ್ಸೆಯು ನಿಮ್ಮ ಚರ್ಮದ ತೇವಾಂಶವನ್ನು ಪುನಃ ತುಂಬಿಸುವುದರ ಜೊತೆಗೆ ಈಗಾಗಲೇ ಇರುವ ಯಾವುದೇ ನೋವನ್ನೂ ಇಲ್ಲವಾಗಿಸುತ್ತದೆ. ಐಬುಪ್ರೊಫೇನ್ ನಂತಹ ಅತಿಯಾದ ನೋವು ನಿವಾರಕವು ಸೌಮ್ಯ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಉಗುರುಬೆಚ್ಚನೆಯ ನೀರು ಸಹ ಸುಡುವಿಕೆಯನ್ನು ಕಡಿಮೆ ಮಾಡುತ್ತದೆ. ನೀವು ಶೀತಾಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ಬಿಸಿನೀರನ್ನು ಬಳಸದಿರಿ. ಇದು ಚರ್ಮದಿಂದ ಇನ್ನಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಚೇತರಿಕೆಯ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ.
ತುಟಿಗಳ ಮೇಲೆ ಶೀತಾಘಾತ:
ತುಟಿಗಳಿಗೆ ಹೆಚ್ಚು ಆಘಾತ ಎದುರಾಗಿದ್ದರೆ ಹೀಗೆ ಮಾಡಿ:
* ಅತಿ ಹೆಚ್ಚು ನೀರು ಕುಡಿಯಿರಿ
* ಬಿಸಿ ಆಹಾರ/ ಪಾನೀಯಗಳನ್ನು ಸೇವಿಸದಿರಿ
* ಖಾರದ ಆಹಾರಗಳನ್ನೂ ಸೇವಿಸದಿರಿ
* ಒಂದು ವೇಳೆ ತುಟಿಗಳ ಚರ್ಮ ಪಕಳೆಯೇಳುತ್ತಿದ್ದರೆ, ಇದನ್ನು ಸರ್ವಥಾ ಕೀಳಲು ಯತ್ನಿಸದಿರಿ.
* ನಿಮ್ಮ ಲಿಪ್ ಬಾಮ್ 15 ಎಸ್‌ಪಿಎಫ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಗುಣವಾಗಲು ಎಷ್ಟು ಸಮಯ ಬೇಕು?
ಶೀತಾಘಾತದಿಂದ ಗುಣವಾಗಲು ತೆಗೆದುಕೊಳ್ಳುವ ಸಮಯವು ಚರ್ಮಕ್ಕೆ ಎದುರಾಗಿರುವ ತೀವ್ರತೆಯನ್ನು ಅವಲಂಬಿಸಿರುತ್ತದೆ. ಬಿಸಿಲಿನ ಬೇಗೆಯಂತೆಯೇ, ಒಂದೆರಡು ದಿನಗಳ ನಂತರ ನಿಮಗೆ ನೋವು ಮತ್ತು ಊತ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೆಲವು ದಿನಗಳ ನಂತರ ಕೆಂಪು ಬಣ್ಣವು ಹೋಗುತ್ತದೆ, ಮತ್ತು ನಂತರದ ದಿನಗಳಲ್ಲಿ ನಿಮ್ಮ ಚರ್ಮದ ಹೊರಪದರ ಸಿಪ್ಪೆಯೇಳತೊಡಗುತ್ತದೆ. ಹೆಚ್ಚು ತೀವ್ರವಾದ ಪ್ರಕರಣಗಳಲ್ಲಿ ಗುಳ್ಳೆಗಳು ದೊಡ್ಡದಾಗಿದ್ದು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಶೀತಾಘಾತ ತಡೆಯಲು ಅತ್ಯುತ್ತಮ ಮಾರ್ಗ:
* ತಂಪು ಕನ್ನಡಕ ಧರಿಸಿ
* ಟೋಪಿ ಮತ್ತು ಕೈಗವಸುಗಳನ್ನು ಬಳಸಿ
* ಉದ್ದನೆಯ ತೋಳಿರುವ ಅಂಗಿ ಮತ್ತು ಪ್ಯಾಂಟ್ ಧರಿಸಿ
* ಎರಡು ಅಥವಾ ಹೆಚ್ಚಿನ ಉಡುಪುಗಳನ್ನು ತೊಟ್ಟು ಬೆಚ್ಚಗಿರಿ
* ಶೀತಾಘಾತ ಉಂಟಾಗುವ ಸ್ಥಿತಿಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ನೀವು ಯಾವಾಗಲೂ ಸನ್‌ಸ್ಕ್ರೀನ್ ಧರಿಸಬೇಕು.
* ಕನಿಷ್ಠ 30 ಎಸ್‌ಪಿಎಫ್ ಹೊಂದಿರುವ ವಿಶಾಲ-ಸ್ಪೆಕ್ಟ್ರಮ್ ಇರುವ ಉತ್ಪನ್ನವನ್ನೇ ಆಯ್ದುಕೊಳ್ಳಿ.
ಶೀತಾಘಾತದ ಹಿಂದಿನ ವಿದ್ಯಮಾನಗಳು ಸುಮಾರು ಒಂದು ಶತಮಾನದಿಂದ ಚರ್ಮದ ತಜ್ಞರ ನಡುವೆ ಚರ್ಚೆಗೆ ಕಾರಣವಾಗಿವೆ, ಆದರೆ ಒಂದು ವಿಷಯ ಖಚಿತವಾಗಿದೆ: ಶೀತ ಮತ್ತು ಶುಷ್ಕ ದಿನದಂದು ಸಹ ಹೊರಗಡೆ ಇರುವುದು ನಿಮ್ಮ ಚರ್ಮವನ್ನು ಸುಡಲು ಕಾರಣವಾಗಬಹುದು. ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯ ಮತ್ತು ಇತರ ಅಂಶಗಳಿಂದ ರಕ್ಷಿಸುವುದು ಮುಖ್ಯ. ಕೆಲವು ದಿನಗಳ ನಂತರ ಶೀತಾಘಾತ ಅಥವಾ ಬಿಸಿಲಿನ ಲಕ್ಷಣಗಳು ಮುಂದುವರಿದರೆ ಅಥವಾ ಅವು ಉಲ್ಬಣಗೊಂಡರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
Published On - 7:15 am, Mon, 11 November 19