ಅಂದ ಕೆಡಿಸೋ ಮೊಡವೆಗೆ ಹೇಳಿ ಬೈ ಬೈ!

|

Updated on: Nov 21, 2019 | 3:51 PM

ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ. ಎಣ್ಣೆ ತ್ವಚೆಯವರೆಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮೊಡವೆ ಬಂದರೆ ನಂತರ ಕಲೆಗಳು, ರಂಧ್ರಗಳು ಬೀಳುವುದು. ಕೆಲವರಿಗೆ ಮೊಡವೆ ಮುಖದ ಅಂದವನ್ನು ಶಾಶ್ವತವಾಗಿ ಕೆಡಿಸಿ ಬಿಡುತ್ತದೆ. ಮೊಡವೆ ಬಗ್ಗೆ ಎಚ್ಚರಿಕೆ ವಹಿಸಿದರೂ ಮತ್ತೆ ಬಂದುಬಿಡುತ್ತದಲ್ಲಾ, ಅದು  ಹೇಗೆ ಎಂದು ನಿಮಗೆ ಕೆಲವೊಂದು ಸಲ ಪ್ರಶ್ನೆ ಮೂಡಬಹುದು. ಯಾಕೆಂದರೆ ಆಹಾರ ಕ್ರಮದಿಂದಾಗಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು. ಚರ್ಮದ ಆರೋಗ್ಯ ಕಾಪಾಡುವಲ್ಲಿ ಆಹಾರ ಕ್ರಮವು ಪ್ರಮುಖ […]

ಅಂದ ಕೆಡಿಸೋ ಮೊಡವೆಗೆ ಹೇಳಿ ಬೈ ಬೈ!
Follow us on

ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ. ಎಣ್ಣೆ ತ್ವಚೆಯವರೆಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮೊಡವೆ ಬಂದರೆ ನಂತರ ಕಲೆಗಳು, ರಂಧ್ರಗಳು ಬೀಳುವುದು. ಕೆಲವರಿಗೆ ಮೊಡವೆ ಮುಖದ ಅಂದವನ್ನು ಶಾಶ್ವತವಾಗಿ ಕೆಡಿಸಿ ಬಿಡುತ್ತದೆ.

ಮೊಡವೆ ಬಗ್ಗೆ ಎಚ್ಚರಿಕೆ ವಹಿಸಿದರೂ ಮತ್ತೆ ಬಂದುಬಿಡುತ್ತದಲ್ಲಾ, ಅದು  ಹೇಗೆ ಎಂದು ನಿಮಗೆ ಕೆಲವೊಂದು ಸಲ ಪ್ರಶ್ನೆ ಮೂಡಬಹುದು. ಯಾಕೆಂದರೆ ಆಹಾರ ಕ್ರಮದಿಂದಾಗಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು. ಚರ್ಮದ ಆರೋಗ್ಯ ಕಾಪಾಡುವಲ್ಲಿ ಆಹಾರ ಕ್ರಮವು ಪ್ರಮುಖ ಪಾತ್ರ ವಹಿಸುವುದು.

ಮೊಡವೆ ನಿಯಂತ್ರಣಕ್ಕೆ ಆಹಾರಕ್ರಮದ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ. ಎಣ್ಣೆ ತಿಂಡಿಗಳು, ಫಾಸ್ಟ್ ಫುಡ್ಸ್ ಮೊಡವೆಗಳನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಮೊಡವೆ ನಿಯಂತ್ರಣ ಮಾಡಲು ಈ ಆಹಾರಗಳು ಸಹಾಯ ಮಾಡುತ್ತವೆ.

ಬ್ರೊಕೋಲಿಯಲ್ಲಿ ಎ, ಬಿ ಕಾಂಪ್ಲೆಕ್ಸ್, ಸಿ, ಇ ಮತ್ತು ಕೆ ಇದ್ದು ಈ ವಿಟಮಿನ್‌ಗಳು ಮೊಡವೆಗಳನ್ನು ನಿಯಂತ್ರಿಸಿ ಮುಖದಲ್ಲಿ ಹೊಳಪು ತುಂಬುವುದು. ವಿಟಮಿನ್‌ ಬಿ, ಪ್ರೊಟೀನ್‌, ಮೆಗ್ನಿಶ್ಯಿಯಂ ಮತ್ತಿತರ ಆ್ಯಂಟಿಆಕ್ಸಿಡೆಂಟ್‌ ಅಂಶಗಳು ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತವೆ, ವಿಟಮಿನ್‌ ಬಿ ತ್ವಚೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೀನು, ನಟ್ಸ್ ತ್ವಚೆ ಆರೋಗ್ಯಕ್ಕೆ ಮದ್ದು:
ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಮೊಡವೆ ಬರುವುದನ್ನು ತಡೆಗಟ್ಟುವಲ್ಲಿ ಸಹಕಾರಿ. ಮೀನು ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಮೀನಿನಲ್ಲಿರುವ ಎಣ್ಣೆಯಂಶ ಮುಖಕ್ಕೆ ಯೌವನದ ಕಳೆ ತುಂಬುವುದು. ದಿನದಲ್ಲಿ ಸ್ವಲ್ಪ ನಟ್ಸ್ ತಿಂದರೆ ದೇಹದ ಹಾಗೂ ತ್ವಚೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಡವೆಯಿಂದ ಹಾಳಾದ ತ್ವಚೆ ಸರಿಪಡಿಸುವಲ್ಲಿ ನಟ್ಸ್ ಸಹಾಯ ಮಾಡುತ್ತೆ.

ಸೋಂಪು ನೈಸರ್ಗಿಕ ಕ್ಲೆನ್ಸರ್‌, ತ್ವಚೆಯಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತೆ ಹಾಗೂ ದೇಹದ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುತ್ತೆ. ದಿನಾ ಒಂದು ಲೋಟ ಗ್ರೀನ್‌ ಟೀ ಕುಡಿಯುವುದರಿಂದ ಸೌಂದರ್ಯವೃದ್ಧಿ ಮಾಡಿಕೊಳ್ಳಬಹುದು.


ಹಣ್ಣು ತರಕಾರಿಗಳು:

ಕೆಂಪು ದ್ರಾಕ್ಷಿ ತ್ವಚೆ ಅಲರ್ಜಿ ಕಡಿಮೆ ಮಾಡಿ, ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡುವುದು. ಉಳಿದಂತೆ ಕ್ಯಾರೆಟ್‌ ಜ್ಯೂಸ್‌, ಪಾಲಾಕ್‌, ವೆಜಿಟೇಬಲ್ ಸೂಪ್‌, ಟೊಮೆಟೊ ಸೂಪ್‌, ಮಾವಿನಹಣ್ಣು, ಪಪ್ಪಾಯಿ, ಓಟ್‌ಮೀಲ್ಸ್ ಇವೆಲ್ಲಾ ತ್ವಚೆ ಆರೋಗ್ಯಕ್ಕೆ ಒಳ್ಳೆಯದು.

ಒಟ್ಟಿನಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಂಡರೆ ಅದಕ್ಕಿಂತ ದೊಡ್ಡ ಕಿರಿಕಿರಿ ಮತ್ತೊಂದಿಲ್ಲ. ಇದು ಸೌಂದರ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ನೋವು, ಉರಿ ಮತ್ತು ಕಿರಿಕಿರಿ ಉಂಟು ಮಾಡುವುದು. ಮೊಡವೆ ನಿವಾರಣೆ ಮಾಡಲು ಹಲವಾರು ಔಷಧಿಗಳು ಇವೆ ಮತ್ತು ಮಾರುಕಟ್ಟೆಯಲ್ಲಿ ಕೂಡ ಇದಕ್ಕೆ ಕ್ರೀಮ್ ಗಳು ಲಭ್ಯವಿದೆ. ಆದರೆ ಮೊಡವೆ ಬರಲು ಮುಖ್ಯ ಕಾರಣವೇನು ಎಂದು ತಿಳಿಯುವುದು ಅತೀ ಅಗತ್ಯವಾಗಿರುತ್ತದೆ.

Published On - 2:59 pm, Thu, 21 November 19