ನದಿ- ಸಮುದ್ರ ಸ್ನಾನ ಸಂಪ್ರದಾಯವಷ್ಟೇ ಅಲ್ಲ, ವೈಜ್ಞಾನಿಕ ಮಹತ್ವವೂ ಇದೆ! ತಿಳಿದುಕೊಳ್ಳಿ

|

Updated on: Nov 07, 2019 | 2:38 PM

ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಹಾಗೂ ಹಬ್ಬ-ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಮುದ್ರ ಹಾಗೂ ನದಿ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಅದು ಚರ್ಮ ರೋಗಗಳನ್ನು ನಿವಾರಣೆ ಮಾಡಿ ದೇಹಕ್ಕೆ ಒಳ್ಳೆಯದನ್ನು ಮಾಡಲಿದೆ ಎನ್ನುತ್ತೆ ವಿಜ್ಞಾನ. ನಮ್ಮ ಪೂರ್ವಜರು ಹಿಂದಿನಿಂದಲೂ ಈ ರೀತಿಯ ಸ್ನಾನದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ನದಿ ಮತ್ತು ಸಮುದ್ರ ಸ್ನಾನ ಮಾಡುವುದರಿಂದ ನೀರಿನ ತೇಜದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ […]

ನದಿ- ಸಮುದ್ರ ಸ್ನಾನ ಸಂಪ್ರದಾಯವಷ್ಟೇ ಅಲ್ಲ, ವೈಜ್ಞಾನಿಕ ಮಹತ್ವವೂ ಇದೆ! ತಿಳಿದುಕೊಳ್ಳಿ
Follow us on

ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಹಾಗೂ ಹಬ್ಬ-ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಮುದ್ರ ಹಾಗೂ ನದಿ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಅದು ಚರ್ಮ ರೋಗಗಳನ್ನು ನಿವಾರಣೆ ಮಾಡಿ ದೇಹಕ್ಕೆ ಒಳ್ಳೆಯದನ್ನು ಮಾಡಲಿದೆ ಎನ್ನುತ್ತೆ ವಿಜ್ಞಾನ.

ನಮ್ಮ ಪೂರ್ವಜರು ಹಿಂದಿನಿಂದಲೂ ಈ ರೀತಿಯ ಸ್ನಾನದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ನದಿ ಮತ್ತು ಸಮುದ್ರ ಸ್ನಾನ ಮಾಡುವುದರಿಂದ ನೀರಿನ ತೇಜದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತೆ. ನದಿ ಹಾಗೂ ಸಮುದ್ರದಲ್ಲಿ ಸ್ನಾನ ಮಾಡುವುದಕ್ಕಿಂತ ಮೊದಲು ಜಲದೇವತೆಯನ್ನು ಪ್ರಾರ್ಥಿಸಬೇಕು.

ಹೇ ಜಲದೇವತೆಯೇ, ನಿನ್ನ ಪವಿತ್ರ ಜಲದಿಂದ ನನ್ನ ಸ್ಥೂಲದೇಹದ ಸುತ್ತಲೂ ಬಂದಿರುವ ರಜ-ತಮದ ತ್ರಾಸದಾಯಕ ಆವರಣವು ನಾಶವಾಗಲಿ. ಬಾಹ್ಯ ಶುದ್ಧಿಯಂತೆ ನನ್ನ ಅಂತರ್ಮನವೂ ಸ್ವಚ್ಛ ಮತ್ತು ನಿರ್ಮಲವಾಗಲಿ ಎಂದು ಬೇಡಿಕೊಳ್ಳಬೇಕು. ನಂತರ ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನ ಮಾಡಬೇಕು. ಹೀಗೆ ಸ್ನಾನ ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗಿ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗುತ್ತೆ. ಇದರಿಂದ ದೇಹಕ್ಕೆ ದೈವತ್ವವು ಪ್ರಾಪ್ತಿಯಾಗಿ ದಿನವಿಡೀ ಕೆಲಸ ಕಾರ್ಯಗಳನ್ನು ಮಾಡಲು ದೇಹಕ್ಕೆ ಚೈತನ್ಯ ನೀಡುತ್ತೆ.

ಇನ್ನು ಸಂತಾನಭಾಗ್ಯವಿಲ್ಲದವರು ಸಮುದ್ರ ಸ್ನಾನ ಮಾಡುವುದರಿಂದ ಮಕ್ಕಳಾಗುವ ಸಾಧ್ಯತೆ ಇದೆ ಎನ್ನುತ್ತೆ ವೈದ್ಯಶಾಸ್ತ್ರ. ಅದು ಹೇಗ ಅಂದ್ರೆ ವೈದ್ಯಶಾಸ್ತ್ರಜ್ಞರು ಸಮುದ್ರ ಹಾಗೂ ನದಿ ನೀರಿನಲ್ಲಿ ಚಿನ್ನ, ಬೆಳ್ಳಿ, ಪಾದರಸ, ಅಲ್ಯೂಮಿನಿಯಂನಂತಹ ಲೋಹ ಪದಾರ್ಥಗಳು ಇರುತ್ತವೆಂದು ಹೇಳುತ್ತಾರೆ. ಇಂತಹ ಲೋಹ ಮಿಶ್ರಿತ ನೀರಿನಲ್ಲಿ ಸ್ನಾನ ಮಾಡುವುದರಿಂದ ಆ ಲೋಹ ಪದಾರ್ಥಗಳು ಚರ್ಮದ ರಂಧ್ರಗಳ ಮೂಲಕ ಶರೀರವನ್ನು ಪ್ರವೇಶಿಸುತ್ತವೆ. ಇದ್ರಿಂದ ಸ್ತ್ರೀಯರು ಗರ್ಭ ಧರಿಸುವ ಅವಕಾಶವಿದೆ ಎಂದು ವೈದ್ಯಶಾಸ್ತ್ರ ಹೇಳುತ್ತೆ.

ಅಲ್ಲದೇ ಕೆಲವೊಂದು ಚರ್ಮ ಸಂಬಂಧಿ ಕಾಯಿಲೆಗಳಿಗೆ ಉಪ್ಪು ನೀರಿನ ಸ್ನಾನ ಮಾಡುವುದರಿಂದ ನಿವಾರಣೆ ಆಗುತ್ತೆ ಎಂದು ವೈದ್ಯರು ಹೇಳುತ್ತಾರೆ. ಉಪ್ಪಿನಲ್ಲಿ ಇರುವಂತಹ ಪೊಟಾಶಿಯಂ, ಮೆಗ್ನೀಶಿಯಂ, ಸೋಡಿಯಂ ಮತ್ತು ಕ್ಯಾಲ್ಸಿಯಂ ದೇಹಕ್ಕೆ ಒಳ್ಳೆಯದು. ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತೆ. ಈ ಖನಿಜಾಂಶಗಳ ಪೈಕಿ ಕ್ಯಾಲ್ಸಿಯಂ ರಕ್ತ ಪರಿಚಲನೆ ಉತ್ತಮಪಡಿಸಿ ಮೂಳೆಗಳು, ಹಲ್ಲು ಹಾಗೂ ಉಗುರನ್ನು ಗಟ್ಟಿಗೊಳಿಸುತ್ತೆ. ಪೊಟಾಶಿಯಂ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಚರ್ಮವನ್ನು ಮೃದುವಾಗಿಸುತ್ತೆ. ಮೆಗ್ನೀಶಿಯಂ ವಯಸ್ಸಾಗುವ ಲಕ್ಷಣ ತಡೆಯುತ್ತೆ. ಜೊತೆಗೆ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುತ್ತೆ. ನಮ್ಮ ಪೂರ್ವಿಕರು ರೂಢಿಗೆ ತಂದಿರುವ ಪ್ರತಿಯೊಂದು ಆಚರಣೆಯ ಹಿಂದೆ ಒಂದು ವೈಜ್ಞಾನಿಕ ತಿಳುವಳಿಕೆ ಇರುತ್ತೆ. ನಾವು ಆದನ್ನು ಅರಿತು ನಡೆಯಬೇಕು. ಯಾವ ಆಚಾರ ವಿಚಾರಗಳನ್ನೇ ಆಗಲಿ, ಸರಿಯಾಗಿ ಅರಿಯದೇ ಅಲ್ಲಗೆಳೆಯಬಾರದು. ಒಳಿತು ಕೆಡುಕುಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ನಡೆಯುವುದು ಒಳ್ಳೆಯದು.

Published On - 1:09 pm, Thu, 7 November 19