ಇದೊಂದು ಸೀರೆ ಸಂಸ್ಕೃತಿಯ ಜೊತೆ ನಿಮ್ಮ ಆರೋಗ್ಯವನ್ನು ಸಹಾ ವೃದ್ಧಿಸುತ್ತದೆ

|

Updated on: Nov 06, 2019 | 10:39 AM

ಸೀರೆ ನಮ್ಮ ಸಾಂಪ್ರದಾಯಿಕ ಉಡುಗೆಯಾದರೂ, ಎವರ್‌ ಗ್ರೀನ್‌ ಟ್ರೆಂಡಿ ಅಂಡ್ ಫ್ಯಾಷನಬಲ್‌ ಡ್ರೆಸ್‌ ಅಂದರೆ ಅದು ಸೀರೆ ಮಾತ್ರ. ಸೀರೆ ಬಳಸಿ ಹಲವಾರು ರೀತಿಯ ಡ್ರೆಸ್ಸಿಂಗ್‌ ಸ್ಟೈಲ್‌ ಕೂಡಾ ಮಾಡಬಹುದು. ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಿಂದ ಕಂಗೊಳಿಸುತ್ತೀರೋ, ಇಲ್ಲಾ ಅಲ್ಟ್ರಾ ಮಾಡರ್ನ್‌ ಲುಕ್‌ನಲ್ಲಿ ಮಿಂಚುತ್ತೀರೋ ಎನ್ನುವುದು ಮಾತ್ರ ಅದನ್ನು ಉಡುವ ರೀತಿಯಲ್ಲಿರುತ್ತದೆ. ಸೀರೆ ಉಡುವ ಪ್ರತಿಯೊಬ್ಬ ಮಹಿಳೆಯು ಫ್ಯಾಷನ್ ಬಗ್ಗೆ ತಿಳಿದರೆ ಅವರ ಅಂದ ಇನ್ನಷ್ಟು ಹೆಚ್ಚುತ್ತದೆ. ದಿನಕ್ಕೊಂದು ಸ್ಯಾರಿ ವೆರೈಟಿಗಳನ್ನು ನಾವು ನೋಡ್ತಾ ಇರ್ತೇವೆ. ಈ ಬಾರಿ […]

ಇದೊಂದು ಸೀರೆ ಸಂಸ್ಕೃತಿಯ ಜೊತೆ ನಿಮ್ಮ ಆರೋಗ್ಯವನ್ನು ಸಹಾ ವೃದ್ಧಿಸುತ್ತದೆ
Follow us on

ಸೀರೆ ನಮ್ಮ ಸಾಂಪ್ರದಾಯಿಕ ಉಡುಗೆಯಾದರೂ, ಎವರ್‌ ಗ್ರೀನ್‌ ಟ್ರೆಂಡಿ ಅಂಡ್ ಫ್ಯಾಷನಬಲ್‌ ಡ್ರೆಸ್‌ ಅಂದರೆ ಅದು ಸೀರೆ ಮಾತ್ರ. ಸೀರೆ ಬಳಸಿ ಹಲವಾರು ರೀತಿಯ ಡ್ರೆಸ್ಸಿಂಗ್‌ ಸ್ಟೈಲ್‌ ಕೂಡಾ ಮಾಡಬಹುದು. ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಿಂದ ಕಂಗೊಳಿಸುತ್ತೀರೋ, ಇಲ್ಲಾ ಅಲ್ಟ್ರಾ ಮಾಡರ್ನ್‌ ಲುಕ್‌ನಲ್ಲಿ ಮಿಂಚುತ್ತೀರೋ ಎನ್ನುವುದು ಮಾತ್ರ ಅದನ್ನು ಉಡುವ ರೀತಿಯಲ್ಲಿರುತ್ತದೆ. ಸೀರೆ ಉಡುವ ಪ್ರತಿಯೊಬ್ಬ ಮಹಿಳೆಯು ಫ್ಯಾಷನ್ ಬಗ್ಗೆ ತಿಳಿದರೆ ಅವರ ಅಂದ ಇನ್ನಷ್ಟು ಹೆಚ್ಚುತ್ತದೆ. ದಿನಕ್ಕೊಂದು ಸ್ಯಾರಿ ವೆರೈಟಿಗಳನ್ನು ನಾವು ನೋಡ್ತಾ ಇರ್ತೇವೆ. ಈ ಬಾರಿ ಆ ಸಾಲಿಗೆ ಆಯುರ್​ ಸ್ಯಾರಿ ಕೂಡಾ ಸೇರಿದೆ. ಆದ್ರೆ ಈ ಸೀರೆ ಕೇವಲ ಫ್ಯಾಷನ್​ಗಾಗಿ ಮಾರುಕಟ್ಟೆಗೆ ಕಾಲಿಟ್ಟಿಲ್ಲ ಬದಲಾಗಿ ಈ ಸೀರೆಯಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊದಿದೆ. ಗಿಡಮೂಲಿಕೆಗಳಿಂದ ಈ ಸೀರೆಯ ಬಗ್ಗೆ ನಿಮಗೇನಾದರೂ ಗೊತ್ತಾ..? ಯೆಸ್ ಆಯುರ್ವೇದಿಕ್ ಸೀರೆ ಇತ್ತೀಚಿನ ಬಳಕೆ. ಫ್ಯಾಷನ್ ಜೊತೆಗೆ ಆರೋಗ್ಯ ಹೆಚ್ಚಿಸುವಲ್ಲಿ ಸದ್ದು ಮಾಡುತ್ತಿದೆ. ಆಯುರ್ ಸೀರೆಯ ಮಹತ್ವಗಳು ಯಾವುದು ಅನ್ನೋದನ್ನು ನಾವು ನಿಮಗೆ ತಿಳಿಸೋ ಪ್ರಯತ್ನ ಮಾಡ್ತೀವಿ.

ಏನಿದು ಆಯುರ್ವೇದಿಕ್​ ಸೀರೆ?
ಜೈಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಾಫ್ಟ್ಸ್ & ಡಿಸೈನ್‌ ಜವಳಿ ಪದವೀಧರರು ಈ ಸಾಹಸಕ್ಕೆ ಕೈ ಹಾಕಿದವರು. ಇದನ್ನು ಆಯುರ್ವಸ್ತ್ರ ಅಂತಾನು ಕರೆಯಲಾಗುತ್ತದೆ. ಆಯುರ್ವಸ್ತ್ರ ಎಂಬ ಪದವು ಆರೋಗ್ಯ, ಬುದ್ಧಿ ಮತ್ತು ಬಟ್ಟೆಯ ವಿನ್ಯಾಸಕ್ಕಾಗಿ ರೂಪುಗೊಂಡ ಸಂಸ್ಕೃತ ಪದಗಳ ಸಂಯೋಜನೆಯಾಗಿದೆ. ಹಾಗೆಯೇ ಆಯುರ್ವಸ್ತ್ರ ರೇಖೆಯು ಸಂಸ್ಕರಿಸಿದ ಸಾವಯವ ಹತ್ತಿ ಬಟ್ಟೆಯಿಂದ ಸಂಯೋಜನೆಗೊಂಡಿರುತ್ತದೆ. ಇದರಲ್ಲಿರುವ ಗಿಡಮೂಲಿಕೆಗಳು ಮತ್ತು ಎಣ್ಣೆ ಎಲ್ಲವೂ ಕೂಡಾ ಉತ್ತಮ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಇದು “ಫ್ಯಾಬ್ರಿಕ್ ಪೂರಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಕಲ್ಪನೆ ಕೂಡಾ ಇದೆ. ಅಲ್ಲದೆ, ಈ ಆಯುರ್ವಸ್ತ್ರವು ಸಂಪೂರ್ಣವಾಗಿ ಸಂಶ್ಲೇಷಿತ ರಾಸಾಯನಿಕಗಳು ಮತ್ತು ವಿಷಕಾರಿ ಉದ್ರೇಕಕಾರಿಗಳಿಂದ ಮುಕ್ತವಾಗಿರುತ್ತದೆ.

ಆಯುರ್ವೇದದ ಪ್ರಕಾರ ನಮ್ಮ ಚರ್ಮವು ಏಳು ಪದರಗಳನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಪ್ರತಿಯೊಂದೂ ವಿಭಿನ್ನ ಕೆಲಸವನ್ನು ಹೊಂದಿರುತ್ತದೆ. ಇದು ದೇಹಕ್ಕೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒದಗಿಸಿ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಚರ್ಮಕ್ಕೆ ಅಂಟಿದ ಸೋಂಕುಗಳು ಶರೀರದಲ್ಲಿ ಅಸಮತೋಲನವನ್ನು ಏರ್ಪಡಿಸುತ್ತದೆ ಈ ಅಸಮತೋಲನವನ್ನು ಸರಿಪಡಿಸುವಲ್ಲಿ ಆಯುರ್ವಸ್ತ್ರವೂ ಮುಖ್ಯ ಪಾತ್ರವಹಿಸುತ್ತದೆ. ಈ ಬಟ್ಟೆಯಲ್ಲಿರುವ ಗಿಡಮೂಲಿಕೆಗಳು ಚರ್ಮದ ಸೋಂಕುಗಳನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಆಯುರ್ವಸ್ತ್ರ ವಿಧಗಳು:
ಆಯುರ್ವಸ್ತ್ರದಲ್ಲಿ ಮೂರು ವಿಧಗಳಿವೆ. ಅದರಲ್ಲಿ ಹಲ್ಡಿವಸ್ತ್ರಂ , ಮಂಜಿಸ್ತವಸ್ತ್ರಂ ಮತ್ತು ಅತ್ಯಂತ ಜನಪ್ರಿಯವಾದ ನೀಲವಸ್ತ್ರಂ . ತ್ರಿಡೋಶಗಳನ್ನು ಸಮತೋಲನಗೊಳಿಸಲು ಹಲ್ಡಿವಸ್ತ್ರಂ ಒಳ್ಳೆಯದು ಅಂದರೆ ಇದು ರಕ್ತ ಪರಿಚಲನೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ ಮತ್ತು ನಂಜುನಿರೋಧಕ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಮಂಜಿಸ್ತವಸ್ತ್ರಂ ರಕ್ತ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ . ಚರ್ಮ ರೋಗಗಳು, ಸಂಧಿವಾತ ಮತ್ತು ಹುಣ್ಣುಗಳನ್ನು ನಿವಾರಿಸಲು ಸಹ ಬಳಸಲಾಗುತ್ತದೆ.

ನೀಲವಸ್ತ್ರಂ ಅಥವಾ ಇಂಡಿಗೊ, ನರಮಂಡಲದ ಮೇಲೆ ಪರಿಣಾಮವನ್ನು ಬೀರುತ್ತದೆ. ಮತ್ತು ಅದನ್ನು ತಣ್ಣಗಾಗಿಸುವ ಪ್ರಯುತ್ನ ಕೂಡಾ ಮಾಡುತ್ತದೆ.ಯಾಕಂದ್ರೆ ಇದು ಶಾಖವನ್ನು ಕಡಿಮೆ ಮಾಡಿ ತಲೆನೋವು, ಉರಿಯೂತ ಮತ್ತು ಜ್ವರದಿಂದ ಮುಕ್ತಿ ಹೊಂದುವಂತೆ ಮಾಡುತ್ತದೆ. ನೀಲವಸ್ತ್ರಂ ಬಟ್ಟೆಯನ್ನು ವ್ಯಕ್ತಿಯು ಧರಿಸಿದಾಗ, ದೇಹದ ಏರುಪೇರುಗಳನ್ನು ಸಮತೋಲನಗೊಳಿಸಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರುವಂತೆ ಮಾಡುತ್ತೆ.

ಆಯುರ್ವಸ್ತ್ರ ತಯಾರಿಯ ವಿಧಾನ:
ನಿಮ್ಮಲ್ಲಿ ಒಂದು ಸಂದೇಹ ಕಾಡಬಹುದು. ಆಯುರ್ವೇದಿಕ್ ಬಟ್ಟೆ ಅಥವಾ ಸೀರೆ ಅಂತಹ ವಿಶೇಷತೇ ಏನಿದೆ ಅಂತಾ. ಹೌದು ಇದು ಹೇಗಂದ್ರೆ ಸಾವಯವ ಹತ್ತಿಯಿಂದ ತಯಾರು ಮಾಡಲಾಗುತ್ತದೆ..ಸಾವಯವ ಹತ್ತಿ ಬಟ್ಟೆಯನ್ನು ರಾತ್ರಿಯಿಡೀ ಹಸುವಿನ ಸೆಗಣಿ ಮತ್ತು ನೀರಿನೋಂದಿಗೆ ಮಿಶ್ರಣ ಮಾಡಿ ನೆನೆಸಿ ಅದನ್ನು ಮೃದುಗೊಳಿಸಲಾಗುತ್ತದೆ ಮತ್ತು ಬೇರೆ ಬಣ್ಣ ಬಳಿಯುವ ಮೊದಲು ಅದು ಬಿಳಿ ಬಣ್ಣದಿಂದ ಹೊಳೆಯುವಂತೆ ಮಾಡಲಾಗುತ್ತದೆ ಯಾಕಂದ್ರೆ ಇದು ಹತ್ತಿಯನ್ನು ಸ್ವಚ್ಛಗೋಳಿಸುತ್ತದೆ. ನಂತರ ಬಟ್ಟೆಯನ್ನು ರೀಥಾದಿಂದ ತೊಳೆದು, ಕ್ಯಾಸ್ಟರ್ ಆಯಿಲ್ ಮತ್ತು ಗಿಡಮೂಲಿಕೆಗಳ ಮಿಶ್ರಣದಲ್ಲಿ ಕುದಿಸಲಾಗುತ್ತದೆ. ಮುದ್ರಣ ಪ್ರಕ್ರಿಯಗೆ ಒಳಪಡುವ ಮೊದಲು 50 ಗಿಡಮೂಲಿಕೆಗಳಿಂದ ಗಂಟೆಗಟ್ಟಲೇ ಕುದಿಸಿ,ಸಮ ಅನುಪಾತದ ಗಿಡಮೂಲಿಕೆಗಳು, ಬೇರುಗಳು ಮತ್ತು ತೈಲಗಳೊಂದಿಗೆ ಬಟ್ಟೆಯನ್ನು ತೊಳೆಯಲಾಗುತ್ತದೆ. ಹೀಗೆ ಮಾಡುವುದರಿಂದ ಬಟ್ಟೆಗೆ ಹಾಕಿದ ಅಚ್ಚು ನಿತ್ಯ ನೂತನವಾಗಿರುತ್ತದೆ.

ವಿಷವು ರಂಧ್ರಗಳ ಮೂಲಕ ಚರ್ಮವನ್ನು ಪ್ರವೇಶಿಸುತ್ತವೆ. ಇದನ್ನು ಗುಣಪಡಿಸುವಲ್ಲಿ ಗಿಡಮೂಲಿಕೆಗಳೂ ಮುಖ್ಯ ಪಾತ್ರ ವಹಿಸುತ್ತವೆ. ಇಲ್ಲಿಯೂ ಹಾಗೆ ಸಂಸ್ಕರಿಸಿದ ಆಯುರ್ವಸ್ತ್ರವೂ ನಿದ್ರಾಹೀನತೆ ನಿವಾರಣೆ, ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಆಯುರ್ವೇದ ಕಾಲೇಜು ನಡೆಸಿದ ಅಧ್ಯಯನಗಳು ಚರ್ಮದ ಕಾಯಿಲೆಗಳ ಶಮನದ ಜೊತೆಗೆ ಸೋರಿಯಾಸಿಸ್, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆ ಕೂಡಾ ಮಾಡುತ್ತೆ ಎಂದು ಹೇಳಲಾಗುತ್ತದೆ.
ಆಯುರ್ವೇದಿಕ್ ಸೀರೆ ಅಥವಾ ಆಯುರ್ ಸೀರೆಗೆ ದೇಶ -ವಿದೇಶದ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ.ಮುಂದಿನ ದಿನಗಳಲ್ಲಿ ಸೀರೆ ಮಾತ್ರವಲ್ಲ ಬೇರೆ ಬೇರೆ ಬಟ್ಟೆಗಳ ವಿನ್ಯಾಸ ಆಯುರ್ವೇದದ ಕಲ್ಪನೆಯಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

Published On - 8:42 am, Wed, 6 November 19