ಯಾವ ದಾನ ಮಾಡಿದ್ರೆ ಏನು ಫಲ? ದಾನದ ಕುರಿತು ಧರ್ಮಶಾಸ್ತ್ರ ಏನು ಹೇಳುತ್ತೆ?

ನಮ್ಮ ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ಇದೆ. ಇಷ್ಟಕ್ಕೂ ದಾನ ಅಂದ್ರೆ ಏನು? ದಾನ ಅಂದ್ರೆ ಉದಾರತೆ ಅಥವಾ ನೀಡುವಿಕೆ. ಅವಶ್ಯಕತೆ ಇರುವವರಿಗೆ ನಮ್ಮ ಕೈಲಾದಷ್ಟು ದಾನ ಮಾಡಬೇಕು ಅನ್ನೋದು ಮನುಷ್ಯ ಧರ್ಮ. ಮಾನವ ತನ್ನ ಪೂರ್ವಜನ್ಮದಲ್ಲಿ ಮಾಡಿದ ದಾನ, ಪಾಪ, ಪುಣ್ಯಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಎಲ್ಲವನ್ನು ಕರುಣಿಸುತ್ತಾನೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇನ್ನು ದಾನದ ಕುರಿತಾಗಿ ಶ್ರೀಪಾದರಾಜರು ಕೈಗೆ ದಾನವೇ ಭೂಷಣ, ಬಂಗಾರದ ಬಳೆಗಳಲ್ಲ ಎಂದಿದ್ದಾರೆ. ತೈತ್ತಿರೀಯ ಉಪನಿಷತ್ತಿನಲ್ಲಿ ದಾನ ನೀಡುವ […]

ಯಾವ ದಾನ ಮಾಡಿದ್ರೆ ಏನು ಫಲ? ದಾನದ ಕುರಿತು ಧರ್ಮಶಾಸ್ತ್ರ ಏನು ಹೇಳುತ್ತೆ?
Follow us
ಸಾಧು ಶ್ರೀನಾಥ್​
|

Updated on:Nov 06, 2019 | 6:46 AM

ನಮ್ಮ ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ಇದೆ. ಇಷ್ಟಕ್ಕೂ ದಾನ ಅಂದ್ರೆ ಏನು? ದಾನ ಅಂದ್ರೆ ಉದಾರತೆ ಅಥವಾ ನೀಡುವಿಕೆ. ಅವಶ್ಯಕತೆ ಇರುವವರಿಗೆ ನಮ್ಮ ಕೈಲಾದಷ್ಟು ದಾನ ಮಾಡಬೇಕು ಅನ್ನೋದು ಮನುಷ್ಯ ಧರ್ಮ. ಮಾನವ ತನ್ನ ಪೂರ್ವಜನ್ಮದಲ್ಲಿ ಮಾಡಿದ ದಾನ, ಪಾಪ, ಪುಣ್ಯಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಎಲ್ಲವನ್ನು ಕರುಣಿಸುತ್ತಾನೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇನ್ನು ದಾನದ ಕುರಿತಾಗಿ ಶ್ರೀಪಾದರಾಜರು ಕೈಗೆ ದಾನವೇ ಭೂಷಣ, ಬಂಗಾರದ ಬಳೆಗಳಲ್ಲ ಎಂದಿದ್ದಾರೆ. ತೈತ್ತಿರೀಯ ಉಪನಿಷತ್ತಿನಲ್ಲಿ ದಾನ ನೀಡುವ ಬಗೆ ಹಾಗೂ ಅದರ ಗೌರವವನ್ನು ಮನದಟ್ಟು ಮಾಡುತ್ತಾ, ಶ್ರದ್ಧೆಯಿಂದಲಾದರೂ, ನಂಬಿಕೆಯಿಲ್ಲದಿದ್ದರೂ, ಭಯದಿಂದಲಾದರೂ, ಜ್ಞಾನಪೂರ್ವಕವಾಗಿಯಾದರೂ ಸರಿ ಕರ್ತವ್ಯವೆಂಬ ದೃಷ್ಟಿಯಿಂದ ತಮ್ಮ ಯೋಗ್ಯತಾನುಸಾರವಾಗಿ ದಾನವನ್ನು ಕೊಡಬೇಕೆಂದು ಸಾರಲಾಗಿದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಯಾವ ದಾನ ಮಾಡಿದ್ರೆ ಏನು ಫಲ ಸಿಗುತ್ತೆ ಎಂಬ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಆ ಬಗ್ಗೆ ತಿಳಿಯೋಣ.

ಯಾವ ದಾನಕ್ಕೆ ಏನು ಫಲ…? ಭೂದಾನ- ಭೂದಾನ ಮಾಡೋದ್ರಿಂದ ಇಹಪರ ಲೋಕಗಳೆರಡರಲ್ಲಿಯೂ ಪ್ರತಿಷ್ಠೆ ಸಿಗುತ್ತೆ. ಅಂದ್ರೆ ಇಹಲೋಕದ ಸಮಾಜದಲ್ಲಿ ಗೌರವ, ಪರಲೋಕದಲ್ಲಿ ದೇವರ ಒಲುಮೆಗೆ ಪಾತ್ರರಾಗಬಹುದು.

ತಿಲ ದಾನ- ತಿಲ ಅಂದ್ರೆ ಎಳ್ಳು. ಎಳ್ಳನ್ನು ದಾನವಾಗಿ ನೀಡಿದ್ರೆ ದೇಹದಲ್ಲಿನ ಬಲ ಹೆಚ್ಚಾಗುತ್ತೆ. ಅಂದ್ರೆ ಆರೋಗ್ಯ ವೃದ್ಧಿಸುತ್ತೆ. ಅಪಮೃತ್ಯುವಿನ ಭಯ ದೂರಾಗುತ್ತೆ.

ಸುವರ್ಣ ದಾನ- ಸುವರ್ಣ ಅಂದ್ರೆ ಬಂಗಾರ. ಬಂಗಾರವನ್ನು ದಾನವಾಗಿ ನೀಡಿದ್ರೆ ಜಠರಾಗ್ನಿಯು ಪ್ರಚೋದನೆಗೊಂಡು ದೇಹದಲ್ಲಿನ ಶಕ್ತಿ ಹೆಚ್ಚಾಗುತ್ತೆ. ಉತ್ಸಾಹ, ಉಲ್ಲಾಸ ಹೆಚ್ಚಾಗುತ್ತೆ.

ಘೃತ ದಾನ- ಘೃತ ಅಂದ್ರೆ ತುಪ್ಪ. ತುಪ್ಪವನ್ನು ದಾನವಾಗಿ ನೀಡಿದ್ರೆ ದೇಹದ ಆರೋಗ್ಯ ವೃದ್ಧಿಯಾಗುತ್ತೆ.

ವಸ್ತ್ರದಾನ- ವಸ್ತ್ರ ಅಂದ್ರೆ ಬಟ್ಟೆ. ನೀವು ಬಟ್ಟೆಯನ್ನು ದಾನವಾಗಿ ನೀಡಿದ್ರೆ ಆಯುಷ್ಯ ವೃದ್ಧಿಯಾಗುತ್ತೆ.

ಧಾನ್ಯ ದಾನ- ಧಾನ್ಯ ದಾನ ಮಾಡಿದ್ರೆ ಮನೆಯಲ್ಲಿ ಧಾನ್ಯದ ಸಂಗ್ರಹ ಹೆಚ್ಚಾಗುತ್ತೆ. ಕೃಷಿ ಕೆಲಸಗಳಲ್ಲಿ ಲಾಭ ಸಿಗುತ್ತೆ, ಧನ ಅಭಿವೃದ್ಧಿಯಾಗುತ್ತೆ.

ರಜತ ದಾನ- ರಜತ ಅಂದ್ರೆ ಬೆಳ್ಳಿ. ಬೆಳ್ಳಿಯನ್ನು ದಾನವಾಗಿ ನಿಡೋದ್ರಿಂದ ನಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತೆ.

ಲವಣ ದಾನ- ಲವಣ ಅಂದ್ರೆ ಉಪ್ಪು. ಉಪ್ಪನ್ನು ದಾನವಾಗಿ ನೀಡಿದ್ರೆ ಷಡ್ರಸಗಳಿಂದ ಕೂಡಿದ ಅಂದ್ರೆ 6 ಬಗೆಯ ರುಚಿಗಳಿಂದ ಕೂಡಿದ ಭೋಜನ ಲಭಿಸುತ್ತೆ.

ಕೂಷ್ಮಾಂಡ ದಾನ- ಕೂಷ್ಮಾಂಡ ಅಂದ್ರೆ ಕುಂಬಳಕಾಯಿ. ಕುಂಬಳಕಾಯಿಯನ್ನು ದಾನ ಮಾಡಿದ್ರೆ ಆರೋಗ್ಯ ವೃದ್ಧಿಯಾಗುತ್ತೆ. ಆರ್ಥಿಕ ಸ್ಥಿತಿ ಉತ್ತಮವಾಗುತ್ತೆ.

ಕನ್ಯಾದಾನ- ಕನ್ಯಾದಾನ ಶ್ರೇಷ್ಠ ದಾನ. ಕನ್ಯಾದಾನ ಮಾಡೋದ್ರಿಂದ ಕೇವಲ ಈ ಜನ್ಮದಲ್ಲೇ ಅಲ್ಲದೇ ಮುಂದಿನ ಜನ್ಮದಲ್ಲೂ ಸುಖ, ನೆಮ್ಮದಿಯ ಜೀವನ ಸಿಗುತ್ತೆ. ಇಹಪರ ಲೋಕಗಳೆರಡರಲ್ಲೂ ಮಾನ್ಯತೆ ಸಿಗುತ್ತೆ. ಅಲ್ಲದೇ ದೇವರ ಕೃಪೆಗೆ ಬೇಗ ಪಾತ್ರರಾಗಬಹುದು.

ಈ ಮೇಲೆ ತಿಳಿಸಿದ ದಾನಗಳನ್ನು ಮಾಡೋದ್ರಿಂದ ಸುಂದರ ಹಾಗೂ ಸ್ವಾಸ್ಥ್ಯ ಜೀವನ ನಿಮ್ಮದಾಗುತ್ತೆ. ದಾನವಾಗಿ ಕೊಡೋದಲ್ವಾ ಅಂತಾ ಹಾಳಾಗಿರುವ ವಸ್ತುಗಳನ್ನು ನೀಡಿದ್ರೆ ಈ ಫಲಗಳು ಪ್ರಾಪ್ತಿಯಾಗೋದಿಲ್ಲ. ದಾನವಾಗಿ ನೀಡೋದಾದ್ರೂ ಉತ್ತಮ ಗುಣಮಟ್ಟದ ವಸ್ತುಗಳನ್ನೇ ನೀಡಬೇಕು ಅನ್ನೋದು ನಮ್ಮ ಧರ್ಮಶಾಸ್ತ್ರದ ನಿಯಮ. ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು.

Published On - 6:44 am, Wed, 6 November 19

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್