70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಗಂಗಾ ನದಿಯ ಸೇತುವೆಯ ರೇಲಿಂಗ್ ಮೇಲೆ ಹತ್ತಿ, ಸುತ್ತಲೂ ನೋಡಿದ ಯುವತಿ ನಂತರ ಗಂಗೆಗೆ ಹಾರಿದ್ದಾಳೆ. ಹಾಪುರದ ಗರ್ಮುಕ್ತೇಶ್ವರದಲ್ಲಿ 70 ಅಡಿ ಎತ್ತರದ ಸೇತುವೆಯಿಂದ ಯುವತಿ ಜಿಗಿದ ವಿಡಿಯೋ ವೈರಲ್ ಆಗಿದೆ. ಹಾಪುರದ ಗರ್ಮುಕ್ತೇಶ್ವರದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಗಂಗಾ ನದಿಗೆ ಹಾರಿದ್ದಾಳೆ. ಆದರೆ, ಡೈವರ್‌ಗಳು ಆಕೆಯನ್ನು ಗಮನಿಸಿ, ತಕ್ಷಣ ಆಕೆಯನ್ನು ಕಾಪಾಡಿದ್ದಾರೆ.
ಹಾಪುರ: ಹಾಪುರದ ಗರ್ಮುಕ್ತೇಶ್ವರದಲ್ಲಿ 27 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಗಂಗಾ ನದಿಗೆ ಹಾರಿದ್ದಾಳೆ. ಆಕೆ 70 ಅಡಿ ಎತ್ತರದಿಂದ ಮೇಲ್ಸೇತುವೆಯಿಂದ ನದಿಗೆ ಹಾರುತ್ತಿದ್ದಾಗ, ಡೈವರ್ಸ್ ಆಕೆಯನ್ನು ಗಮನಿಸಿದ್ದಾರೆ. ಸಮಯ ವ್ಯರ್ಥ ಮಾಡದೆ ತಕ್ಷಣ ಡೈವರ್‌ಗಳು ದೋಣಿಯಲ್ಲಿ ಆಕೆ ಬಿದ್ದ ಸ್ಥಳವನ್ನು ತಲುಪಿ ಆಕೆಯನ್ನು ರಕ್ಷಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಯುವತಿ ಹೇಳಿದ್ದಾಳೆ. ಜನವರಿ 16ರಂದು ಆಕೆ ಮದುವೆಯಾಗಬೇಕಿತ್ತು. ಆದರೆ, ಕೌಟುಂಬಿಕ ಭಿನ್ನಾಭಿಪ್ರಾಯದಿಂದಾಗಿ ಮದುವೆಗೂ ಮುನ್ನ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ನಿರ್ಧರಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 28, 2024 05:30 PM
Latest Videos