ಹೌದು, ನಿತೀಶ್ ಕುಮಾರ್ ರೆಡ್ಡಿ ಶತಕ ಪೂರೈಸಲು ಮೊಹಮ್ಮದ್ ಸಿರಾಜ್ ಅವರ ಬ್ಯಾಟಿಂಗ್ ಕೊಡುಗೆಯನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ ನಿತೀಶ್ ಕುಮಾರ್ ರೆಡ್ಡಿ 99 ರನ್ಗಳಿಸಿದ್ದ ವೇಳೆ ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟಾಗಿದ್ದರು. 114ನೇ ಓವರ್ನ 3ನೇ ಎಸೆತದಲ್ಲಿ ಬುಮ್ರಾ ಔಟಾಗಿ ಹೋದಾಗ ನಿತೀಶ್ ಕುಮಾರ್ ನಾನ್ ಸ್ಟ್ರೈಕ್ನಲ್ಲಿದ್ದರು. ಹೀಗಾಗಿ ಕೊನೆಯ ವಿಕೆಟ್ ಒಳಗೆ ಶತಕ ಪೂರೈಸಲು ಸಾಧ್ಯನಾ ಎಂಬ ಅನುಮಾನಗಳು ಮೂಡಿತ್ತು.