ಮೆಲ್ಬೋರ್ನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ನಿತೀಶ್ ಬಾರಿಸಿದ ಏಕೈಕ ಸಿಕ್ಸ್ ಇದೀಗ ಅವರನ್ನು ದಿಗ್ಗಜರ ಪಟ್ಟಿಗೆ ಸೇರ್ಪಡೆಗೊಳ್ಳುವಂತೆ ಮಾಡಿದೆ. ವಾಸ್ತವವಾಗಿ ನಿತೀಶ್ ಬಾರಿಸಿದ ಈ ಸಿಕ್ಸರ್ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬಾರಿಸಿದ 8ನೇ ಸಿಕ್ಸರ್ ಆಗಿದ್ದು, ಈ ಮೂಲಕ ಅವರು ದಿಗ್ಗಜರ ದಾಖಲೆಯನ್ನು ಸರಿಗಟ್ಟಿದಲ್ಲದೆ ಭಾರತದ ಪರ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.