ಹಣೆಗೆ ಬಿಂದಿ: ಸಂಪ್ರದಾಯ ಪಾಲನೆ ಜೊತೆಗೆ ಆರೋಗ್ಯದ ಲಾಭವೂ ಇದೆ!
ನಮ್ಮ ಹಿರೀರು ಹೆಣ್ಮಕ್ಕಳು ಹಣೆಗೆ ಬಿಂದಿ ಇಡಬೇಕು ಅಂತ ಹೇಳಿದ್ರು. ಯಾತಕ್ಕಾಗಿ ಇಟ್ಕೊಬೇಕು ಅಂದ್ರೆ ಅದು ನಮ್ಮ ಸಂಪ್ರದಾಯ ಅಂತ ಅಂದುಕೊಂಡಿರುವವರೇ ಹೆಚ್ಚು. ಆದ್ರೆ ಸಂಪ್ರದಾಯದ ಜೊತೆಜೊತೆಗೆ ಹಣೆಗೆ ಬಿಂದಿ ಇಡೋದ್ರಿಂದ ಸಾಕಷ್ಟು ಹೆಲ್ತ್ ರೀಸನ್ ಇವೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಹಣೆಗೆ ಬಿಂದಿ ಇಡೋದ್ರಿಂದ ಆಗುವ ಲಾಭಗಳೇನು: ಹಣೆಯ ಮಧ್ಯ ಭಾಗದಲ್ಲಿ ನಮ್ಮ ದೇಹದ ಪ್ರಮುಖ ನರಗಳು ಸಂಧಿಸುವ ಪ್ರದೇಶ. ಆ ಪಾಯಿಂಟ್‌ನಲ್ಲಿ ಬಿಂದಿ ಇಡೋದ್ರಿಂದ ನಿಮ್ಮ ದೇಹ ಕೂಲ್ ಆಗುತ್ತೆ. ಇಂದ್ರಿಂದಾಗಿ ನಿಮ್ಮ ಕಾನ್ಸನ್‌ಟ್ರೇಷನ್ […]

ನಮ್ಮ ಹಿರೀರು ಹೆಣ್ಮಕ್ಕಳು ಹಣೆಗೆ ಬಿಂದಿ ಇಡಬೇಕು ಅಂತ ಹೇಳಿದ್ರು. ಯಾತಕ್ಕಾಗಿ ಇಟ್ಕೊಬೇಕು ಅಂದ್ರೆ ಅದು ನಮ್ಮ ಸಂಪ್ರದಾಯ ಅಂತ ಅಂದುಕೊಂಡಿರುವವರೇ ಹೆಚ್ಚು. ಆದ್ರೆ ಸಂಪ್ರದಾಯದ ಜೊತೆಜೊತೆಗೆ ಹಣೆಗೆ ಬಿಂದಿ ಇಡೋದ್ರಿಂದ ಸಾಕಷ್ಟು ಹೆಲ್ತ್ ರೀಸನ್ ಇವೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ.
ಹಣೆಗೆ ಬಿಂದಿ ಇಡೋದ್ರಿಂದ ಆಗುವ ಲಾಭಗಳೇನು:
ಹಣೆಯ ಮಧ್ಯ ಭಾಗದಲ್ಲಿ ನಮ್ಮ ದೇಹದ ಪ್ರಮುಖ ನರಗಳು ಸಂಧಿಸುವ ಪ್ರದೇಶ. ಆ ಪಾಯಿಂಟ್‌ನಲ್ಲಿ ಬಿಂದಿ ಇಡೋದ್ರಿಂದ ನಿಮ್ಮ ದೇಹ ಕೂಲ್ ಆಗುತ್ತೆ. ಇಂದ್ರಿಂದಾಗಿ ನಿಮ್ಮ ಕಾನ್ಸನ್‌ಟ್ರೇಷನ್ ಪವರ್ ಹೆಚ್ಚುತ್ತೆ. ಅಷ್ಟೇ ಅಲ್ಲ ಆಂಗ್ಸೈಟಿ ಲೆವೆಟ್‌ನ್ನು ಕೂಡ ಇದು ಕಡಿಮೆಗೊಳಿಸುತ್ತೆ.
ಹಣೆಗೆ ಬಿಂದಿ ಇಟ್ಟುಕೊಳ್ಳುವಾಗ ಪ್ರೆಸ್ ಮಾಡೋದ್ರಿಂದ ಅಲ್ಲಿರುವ ಟ್ರೈಜಿಮಿನಲ್ ನರವ್ಯೂಹ ಸ್ಟಿಮುಲೇಟ್ ಆಗುತ್ತೆ. ಆಗ ರಕ್ತಚಲನೆ ಸಹಕಾರಿಯಾಗಿ ನಿಮ್ಮ ಬ್ಲಾಕ್ ಆಗಿರುವ ಮೂಗು ಸರಿಯಾಗುತ್ತೆ. ಸಣ್ಣ ಪ್ರೆಷರ್ ಅಲ್ಲಿ ನಿರ್ಮಾಣವಾಗೋದ್ರಿಂದ ಸೈನಸ್ ಸಮಸ್ಯೆ ಇರುವವರಿಗೆ ಕಾಣಿಸಿಕೊಳ್ಳುವ ನೋವುಗಳು ನಿವಾರಣೆಯಾಗುತ್ತೆ.
ರಿಂಕಲ್ಸ್ ಕಡಿಮೆಗೊಳಿಸುತ್ತದೆ:
ಆಶ್ಚರ್ಯವಾದ್ರೂ ಇದು ಸತ್ಯ. ನಿಮ್ಮ ಮುಖದಲ್ಲಿರುವ ಮಾಂಸಖಂಡಗಳಿಗೆ ಬಿಂದಿ ಇಡೋದ್ರಿಂದ ರಕ್ತಪರಿಚಲನೆ ಹೆಚ್ಚಾಗಿ ಮಾಂಸಖಂಡಗಳು ಬಲಗೊಳ್ಳಲು ಸಹಕಾರಿಯಾಗುತ್ತೆ. ಪ್ರತಿ ದಿನ ಹಣೆಗೆ ಬಿಂದಿ ಇಡೋದ್ರಿಂದ ನಿಮ್ಮ ಮುಖದಲ್ಲಿ ರಿಂಕಲ್ಸ್ ಕಾಣಿಸಿಕೊಳ್ಳೋದಿಲ್ಲ. ಅಂದ್ರೆ ಬೇಗ ವಯಸ್ಸಾಗದಂತೆ ನೋಡಿಕೊಳ್ಳುತ್ತೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಬಿಂದಿ ಇಡುವ ಜಾಗದಲ್ಲಿರುವ ನರಗಳು ಡೈರೆಕ್ಟ್ಸೀ ನಮ್ಮ ಕಣ್ಣಿನ ನರಗಳಿಗೆ ಕನೆಕ್ಟ್ ಆಗಿರೋದ್ರಿಂದ ಬಿಂದಿ ಇಡೋದ್ರಿಂದ ಕಣ್ಣಿಗೂ ಕೂಡ ಒಳ್ಳೇದು. ಸೋ ಇವೆರಡು ಒಂದಕ್ಕೊಂದು ಸಂಬಂಧ ಹೊಂದಿರೋದ್ರಿಂದ ಬಿಂದಿ ನಿಮ್ಮ ಕಣ್ಣಿನ ಆರೋಗ್ಯವನ್ನೂ ಹೆಚ್ಚಿಸುತ್ತೆ. ಎಲ್ಲರಿಗೂ ಗೊತ್ತಿರೋ ಹಾಗೆ ಜ್ಞಾನೇಂದ್ರಿಯಗಳು ಅಂದ್ರೆ ಅವುಗಳಿಗೆ ಒಂದಕ್ಕೊಂದು ಸಂಬಂಧ ಇದ್ದೇ ಇದೆ. ಬಿಂದಿ ಇಡುವ ಜಾಗದಲ್ಲಿರುವ ನರಗಳು ಕಿವಿಯ ಆರೋಗ್ಯವನ್ನೂ ಹೆಚ್ಚಿಸುತ್ತೆ.
ತುಂಬಾ ಇಂಪಾರ್ಟೆಂಟ್ ರೀಸನ್ ಅಂದ್ರೆ ನೀವು ಶಾಂತಚಿತ್ತರಾಗಿರಬೇಕು ಅಂತ ಬಯಸ್ತಾ ಇದ್ರೆ ಹಣೆಗೆ ಬಿಂದಿ ಇಟ್ಕೊಳ್ಳಿ.ಎಸ್ ನಿಜ. ನಿಮ್ಮ ಹಣೆಯ ಭಾಗದಲ್ಲಿ ಬಿಂದಿ ಇಡುವ ನೆಪದಲ್ಲಿ ಮಾಡಿಕೊಳ್ಳುವ ಮಸಾಜ್ ನಿಮ್ಮನ್ನ ಶಾಂತಚಿತ್ತರಾಗಿರಲು ಸಹಕರಿಸುತ್ತೆ ಅನ್ನೋದು ಅಧ್ಯಯನದಿಂದ ಫ್ರೂ ಆಗಿದೆ. ನಿಮ್ಮ ಮುಖದಲ್ಲಿ ರಕ್ತಪರಿಚಲನೆಗೆ ಹಣೆಯ ಬಿಂದಿ ಸಹಕರಿಸುತ್ತಂತೆ. ಯಾವಾಗ ಸರ್ಕ್ಯೂಲೇಷನ್ ಹೆಚ್ಚಾಗುತ್ತೋ ಆಗ ನಿಮ್ಮ ಮುಖದ ಆರೋಗ್ಯ ವೃದ್ಧಿಯಾಗುತ್ತೆ. ಅಂದ್ರೆ ನಿಮ್ಮ ಮುಖ ಗ್ಲೋ ಆಗಿರುವಂತೆ ನೋಡಿಕೊಳ್ಳಲು ಇದು ಬಹಳ ಸಹಕಾರಿ.
ತಲೆನೋವು ನಿವಾರಿಸುತ್ತೆ:
ನೀವು ತಲೆನೋವಿನಿಂದ ಬಳಲ್ತಾ ಇದ್ರೆ ಒಮ್ಮೆ ಬಿಂದಿ ಇಟ್ಕೊಂಡು ಹಣೆಯ ಭಾಗದಲ್ಲಿ ನಿಧಾನವಾಗಿ ಮಸಾಜ್ ಮಾಡ್ಕೊಳ್ಳಿ. ಆಗ ತಲೆನೋವು ನಿವಾರಣೆಯಾಗುತ್ತೆ ಅನ್ನೋದು ಕೂಡ ಸಂಶೋಧನೆಯಿಂದ ಸಾಬೀತಾಗಿದೆ. ನೀವು ರಿಲ್ಯಾಕ್ಸ್ ಆಗಿರುವಂತೆ ಬಿಂದಿ ನೋಡಿಕೊಳ್ಳುತ್ತೆ ಅನ್ನೋದ್ರಲ್ಲಿ ಅನುಮಾನವೇ ಬೇಡ. ಒಟ್ಟಿನಲ್ಲಿ ಬಿಂದಿ ಇಟ್ಟುಕೊಳ್ಳುವುದರಿಂದ ಸಂಸ್ಕೃತಿ ಮಾತ್ರ ಅಲ್ಲ ಬದಲಾಗಿ ಬೇಜಾನ್ ಬೆನಿಫಿಟ್ಸ್‌ಗಳಿವೆ ಅನ್ನೋದು ಕೂಡ ಫ್ರೂ ಆಗಿದೆ.
Published On - 8:35 am, Mon, 4 November 19




