ಇಂದು ಭಾದ್ರಪದ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆ. ಈ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ಕಳೆದ ಹದಿನೈದು ದಿನಗಳ ಪಿತೃಪಕ್ಷದ ಪಿತೃಕಾರ್ಯಕ್ಕೆ ಇಂದು ಕೊನೆಯ ದಿನ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಬರುವುದರಿಂದ ಈ ದಿನವನ್ನು ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ನಮ್ಮನ್ನು ಅಗಲಿದ ಪಿತೃಗಳಿಗೆ ಪಿತೃಪಕ್ಷದ 14 ದಿನಗಳಲ್ಲಿ ಯಾವ ದಿನವೂ ಪಿತೃ ಕಾರ್ಯ ಮಾಡೋಕೆ ಸಾಧ್ಯವಾಗದೇ ಇದ್ರೆ ಕೊನೆಯ ಪಕ್ಷ ಈ ದಿನವಾದ್ರೂ ಸ್ಮರಿಸೋದು ರೂಢಿಯಲ್ಲಿದೆ.
ಅಲ್ಲದೇ ಹಿಂದೂ ಪುರಾಣದ ಪ್ರಕಾರ, ಮೂರು ತಲೆಮಾರಿನವರೆಗಿನ ಪಿತೃಗಳ ಆತ್ಮವು ಭೂಮಿ ಮತ್ತು ಸ್ವರ್ಗಲೋಕದ ನಡುವೆ ಇರುವ ಪಿತೃಲೋಕಕ್ಕೆ ಈ ದಿನದಂದು ಬರ್ತಾರೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಪಿಂಡಪ್ರದಾನ, ತರ್ಪಣ ಬಿಡುವಾಗ ಕೇವಲ ಮೂರು ತಲೆಮಾರಿನವರೆಗಿನ ಪಿತೃಗಳನ್ನು ಮಾತ್ರ ಸ್ಮರಿಸಲಾಗುತ್ತೆ. ಪಿತೃ ಪಕ್ಷದಲ್ಲಿ ಮತ್ತು ಪಿತೃ ಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯಂದು ಮಾಡುವ ಪಿತೃಕಾರ್ಯ ಅಥವಾ ಶ್ರಾದ್ಧ ಕಾರ್ಯಕ್ಕೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ.
ಇದನ್ನೂ ಓದಿ:
ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ಹೇಗೆ ಮಾಡಬೇಕು?
Published On - 1:09 pm, Fri, 27 September 19